Karunadu Studio

ಕರ್ನಾಟಕ

Viral News: ನನ್ನ ಪತಿ ದೇಶದ್ರೋಹಿ… ಗಂಡನ ನಕಲಿ ದಾಖಲೆ ನೋಡಿದ ಹೆಂಡ್ತಿಯಿಂದ ಪೊಲೀಸರಿಗೆ ದೂರು – Kannada News | UP Woman Alerts Cops About Husband’s ‘Anti-National Activities’


ಶಾಮ್ಲಿ: ಉತ್ತರ ಪ್ರದೇಶದ (Uttar Pradesh) ಶಾಮ್ಲಿ (Shamli) ಜಿಲ್ಲೆಯ ಮಹಿಳೆಯೊಬ್ಬರು, ತನ್ನ ಗಂಡನ ಹೆಸರಿನಲ್ಲಿದ್ದ ನಕಲಿ ದಾಖಲೆಗಳನ್ನು (Forged Documents) ನೋಡಿದ ಬಳಿಕ, ರಾಷ್ಟ್ರವಿರೋಧಿ (Anti-National) ಚಟುವಟಿಕೆ ಶಂಕೆಯಿಂದ ಪೊಲೀಸರಿಗೆ ದೂರು ನೀಡಿರುವ ಘಟನೆ, ಜವಾಬ್ದಾರಿಯುತ ನಾಗರಿಕತೆಯನ್ನು ತೋರಿಸಿದೆ. ಆಧಾರ್ ಕಾರ್ಡ್, ಪಾಸ್‌ಪೋರ್ಟ್ ಮತ್ತು ಶೈಕ್ಷಣಿಕ ಪ್ರಮಾಣಪತ್ರಗಳಂತಹ ನಕಲಿ ದಾಖಲೆಗಳನ್ನು ಕಂಡು ಮಹಿಳೆ ತಕ್ಷಣ ಸ್ಥಳೀಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

34 ವರ್ಷದ ಮೊಹಮ್ಮದ್ ಇಂತಾಜರ್ ವಿರುದ್ಧ ಮಂಗಳವಾರ ಶಾಮ್ಲಿ ಕೋತವಾಲಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ದೂರು ನೀಡಿರುವ ಮನೀಷಾ, 2017ರಲ್ಲಿ ಮದುವೆಯಾಗಿದ್ದಾಗಿ ತಿಳಿಸಿದ್ದಾರೆ. ಆರಂಭದಲ್ಲಿ ಅವರ ಸಂಬಂಧ ಸ್ಥಿರವಾಗಿತ್ತಾದರೂ, ಗಂಡ ಡೆಹರಾಡೂನ್‌ಗೆ ಬೌನ್ಸರ್ ಆಗಿ ಕೆಲಸಕ್ಕೆ ತೆರಳಿದ ಬಳಿಕ ಕುಟುಂಬದೊಂದಿಗಿನ ಸಂಪರ್ಕ ಕಡಿಮೆಯಾಯಿತು. ಇದರಿಂದ ಶಂಕೆಗೊಂಡ ಮನೀಷಾ, ಗಂಡನ ವಸ್ತುಗಳನ್ನು ಪರಿಶೀಲಿಸಿದಾಗ ವಿವಿಧ ಹೆಸರುಗಳಲ್ಲಿ ಆಧಾರ್ ಕಾರ್ಡ್‌ಗಳು, ಶಿಕ್ಷಣಿಕ ದಾಖಲೆಗಳು ಮತ್ತು “ಅವಿವಾಹಿತ” ಎಂಬ ಪ್ರಮಾಣಪತ್ರ ಕಂಡುಬಂದಿತು.

ಮನೀಷಾ ತನ್ನ ದೂರಿನಲ್ಲಿ, ಈ ದಾಖಲೆಗಳ ಬಗ್ಗೆ ಪ್ರಶ್ನಿಸಿದಾಗ ಗಂಡ ತನಗೆ ಮತ್ತು ಇಬ್ಬರು ಮಕ್ಕಳಿಗೆ ಕೊಲೆ ಬೆದರಿಕೆ ಒಡ್ಡಿದನೆಂದು ಆರೋಪಿಸಿದ್ದಾರೆ. ಮೊಹಮ್ಮದ್ ತನ್ನ ಮೇಲೆ ದಾಳಿ ಮಾಡಿ ದಾಖಲೆಗಳನ್ನು ಕಸಿದುಕೊಳ್ಳಲು ಯತ್ನಿಸಿದರೂ, ಮನೀಷಾ ಕೆಲವು ದಾಖಲೆಗಳನ್ನು ಉಳಿಸಿಕೊಂಡು ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: Ceasefire Violation: ಪಾಕ್‌ ಕದನ ವಿರಾಮ ಉಲ್ಲಂಘನೆ ಬೆನ್ನಲ್ಲೇ ಬಾಲಿವುಡ್‌ನ ಈ ಸಿನಿಮಾ ಸೀನ್‌ ಫುಲ್‌ ವೈರಲ್‌-ಅಂತಹದ್ದೇನಿದೆ ಇದರಲ್ಲಿ?

“ರಾಷ್ಟ್ರವಿರೋಧಿ ಚಟುವಟಿಕೆ ಆರೋಪಗಳನ್ನು ಆಳವಾಗಿ ತನಿಖೆ ಮಾಡಲಾಗುತ್ತಿದೆ. ಆದರೆ, ಮನೆಯಲ್ಲಿನ ಗಲಾಟೆಯಿಂದ ಈ ಆರೋಪಗಳು ಉದ್ಭವಿಸಿರಬಹುದೇ ಎಂಬ ಸಾಧ್ಯತೆಯನ್ನೂ ಪರಿಶೀಲಿಸಲಾಗುತ್ತಿದೆ,” ಎಂದು ಎಸ್‌ಪಿ ರಾಮ್ ಸೇವಕ್ ಗೌತಮ್ ತಿಳಿಸಿದ್ದಾರೆ. ಮನೀಷಾ ಸಲ್ಲಿಸಿದ ದಾಖಲೆಗಳನ್ನು ಪರಿಶೀಲಿಸಲಾಗುತ್ತಿದ್ದು, ತನಿಖೆಯ ಕಾರಣದಿಂದ ಹೆಚ್ಚಿನ ವಿವರಗಳನ್ನು ಬಹಿರಂಗಗೊಳಿಸಿಲ್ಲ.

ಮನೀಷಾ ಆರೋಪಿಸಿರುವಂತೆ ಇಂತಾಜರ್ ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದರೆ, ಇದು ಪೊಲೀಸರಿಗೆ ಪ್ರಮುಖ ಯಶಸ್ಸಾಗಬಹುದು. ಭಾರತ ಸರ್ಕಾರವು ಭಯೋತ್ಪಾದನೆ ಮತ್ತು ರಾಷ್ಟ್ರವಿರೋಧಿ ಚಟುವಟಿಕೆಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದು, 2025ರ ಇಮಿಗ್ರೇಷನ್ ಮತ್ತು ಫಾರಿನರ್ಸ್ ಬಿಲ್ ಅನ್ನು ಸಂಸತ್ತು ಈ ವರ್ಷ ರಾಷ್ಟ್ರೀಯ ಭದ್ರತೆಗಾಗಿ ಜಾರಿಗೊಳಿಸಿದೆ.



Source link

ADMIN

About Author

Leave a comment

Your email address will not be published. Required fields are marked *

You may also like

ಕರ್ನಾಟಕ

Microsoft: Empowering the Digital World

Microsoft is a global technology company known for shaping the modern digital experience. From its iconic Windows operating system to
ಕರ್ನಾಟಕ

Microsoft: Empowering the Digital World

Microsoft is a global technology company known for shaping the modern digital experience. From its iconic Windows operating system to
Translate »