Karunadu Studio

ಕರ್ನಾಟಕ

PARVA Group Property Expo: ‘ಪರ್ವ’ ಗ್ರೂಪ್‌‌ನ ದುಬೈ ಪ್ರಾಪರ್ಟಿ ಎಕ್ಸ್‌‌ಪೋಗೆ ಚಾಲನೆ; ಭಾನುವಾರವೂ ಮುಂದುವರಿಯಲಿದೆ – Kannada News | Parva Group’s Dubai Property Expo Launched in bengaluru


ವಿಶ್ವವಾಣಿ ಸುದ್ದಿಮನೆ, ಬೆಂಗಳೂರು: ನಗರದ ತಾಜ್ ಹೋಟೆಲ್‌‌ನಲ್ಲಿ ‘ಪರ್ವ’ ಗ್ರೂಪ್ ಆಯೋಜಿಸಿದ್ದ ದುಬೈ ಪ್ರಾಪರ್ಟಿ ಎಕ್ಸ್‌‌ಪೋವನ್ನು ವಿಶ್ವವಾಣಿ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್ ಮತ್ತು ಕನ್ನಡ ಪ್ರಭ-ಸುವರ್ಣ ನ್ಯೂಸ್ ಪ್ರಧಾನ ಸಂಪಾದಕ ರವಿ ಹೆಗಡೆ ಅವರು ಶನಿವಾರ ಉದ್ಘಾಟಿಸಿದರು. ಪರ್ವ ಗ್ರೂಪ್ ಸಂಸ್ಥಾಪಕ ನಿಲೇಶ್ ಎಚ್.ಪಿ. ಮತ್ತು ಸಹ ಸಂಸ್ಥಾಪಕ, ಸಿಇಒ ಶಶಿಧರ್ ನಾಗರಾಜಪ್ಪ ಈ ಸಂದರ್ಭದಲ್ಲಿ ಹಾಜರಿದ್ದರು.

ಬೆಂಗಳೂರಿನ ದರದಲ್ಲಿ ದುಬೈನಲ್ಲಿ ಕನಸಿನ ಮನೆ ಖರೀದಿಸುವ ಅವಕಾಶ ಕಲ್ಪಿಸಿಕೊಡುವ ಈ ಅಪರೂಪದ ಎಕ್ಸ್‌‌ಪೋ ಭಾನುವಾರ ರಾತ್ರಿಯವರೆಗೆ ಮುಂದುವರಿಯಲಿದೆ. ರಿಯಾಲ್ಟಿ ಪರಿಣತರು ಸೂಕ್ತ ಸಲಹೆ, ಸೂಚನೆ ಮಾರ್ಗದರ್ಶನ ನೀಡುತ್ತಾರೆ.

PARVA group (2)

ಕರ್ನಾಟಕದ ಇಬ್ಬರು ಯುವ ಉತ್ಸಾಹ ಉದ್ದಿಮೆದಾರರು ಆರಂಭಿಸಿರುವ ಪರ್ವ ಗ್ರೂಪ್ ಆಯೋಜಿಸಿರುವ ಎರಡು ದಿನಗಳ ಈ ಎಕ್ಸ್‌ಪೋ ಹೂಡಿಕೆದಾರರಿಗೆ ವಿಶಿಷ್ಟ ಅನುಭವ ನೀಡುತ್ತದೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಹೂಡಿಕೆ ಮಾಡುವವರಿಗೆ ಹತ್ತಾರು ಸೌಲಭ್ಯ ಹಾಗೂ ರಿಯಾಯಿತಿಯನ್ನು ನೀಡುವುದಾಗಿ ಪರ್ವ ಗ್ರೂಪ್ ಘೋಷಿಸಿದೆ. ದುಬೈನ ರೇರಾ ಏಜೆನ್ಸಿಯಿಂದ ಪರ್ವ ಗ್ರೂಪ್‌ಗೆ ಅಧಿಕೃತ ಮಾನ್ಯತೆ ಸಿಕ್ಕಿರುವುದರಿಂದ ಕಾನೂನಾತ್ಮಕವಾಗಿ ಯಾವುದೇ ಸಮಸ್ಯೆೆಯಿಲ್ಲ.

PARVA group (1)

ನೀಲೇಶ್ ಹಾಗೂ ಶಶಿಧರ ಅವರು ಸ್ಥಾಪಿಸಿರುವ ಪರ್ವ ಗ್ರೂಪ್‌ನ ಅಂಗಸಂಸ್ಥೆೆಯಾಗಿರುವ ಪರ್ವ ರಿಯಾಲ್ಟಿಯಿಂದ ಈ ಅಭಿಯಾನವನ್ನು ಆಯೋಜಿಸಲಾಗಿದೆ. ಬೆಂಗಳೂರಿನಲ್ಲಿ ಆಯೋಜಿಸಿರುವ ‘ದುಬೈ ಪ್ರಾಪರ್ಟಿ ರೋಡ್ ಶೋ’ದಲ್ಲಿ ದುಬೈನಲ್ಲಿ ಹೂಡಿಕೆದಾರರಿಗೆ ಇರುವ ಅವಕಾಶ? ಎಷ್ಟು ಪ್ರಮಾಣದಲ್ಲಿ ಹೂಡಿಕೆ ಮಾಡಿದರೆ ಉತ್ತಮ ಲಾಭಾಂಶ ಸಿಗಲಿದೆ? ಖರೀದಿಸಿದ ಫ್ಲ್ಯಾಟ್ ಅಥವಾ ಪ್ರಾಪರ್ಟಿಗಳ ಬಾಡಿಗೆಯಿಂದ ಬರುವ ಲಾಭವೆಷ್ಟು? ವಾಪಸು ಮಾರಬೇಕೆಂದರೆ ಇರುವ ಅವಕಾಶಗಳೇನು ಎನ್ನುವ ವಿಷಯದ ಬಗ್ಗೆೆ ವಿಶೇಷ ಸಂವಾದವನ್ನು ಹಮ್ಮಿಕೊಳ್ಳಲಾಗಿದೆ.

PARVA group (3)

ಪರ್ವ ಗ್ರೂಪ್ ದುಬೈನ ಸಂಸ್ಥಾಪಕರಾದ ನೀಲೇಶ್ ಎಚ್.ಪಿ ಹಾಗೂ ಸಹಸಂಸ್ಥಾಪಕರಾದ ಶಶಿಧರ್ ನಾಗರಾಜಪ್ಪ ಸೇರಿದಂತೆ ಸಂಸ್ಥೆೆಯ ತಜ್ಞರು ಎಕ್ಸ್‌‌ಪೋದಲ್ಲಿ ಹಾಜರಿದ್ದು ಸೂಕ್ತ ಮಾರ್ಗದರ್ಶನ ನೀಡುತ್ತಾರೆ.

ಈ ಸುದ್ದಿಯನ್ನೂ ಓದಿ | ‘ಉಳಿತಾಯ ಕಿ ವಿದ್ಯಾ™ಅಭಿಯಾನ: ಕೈಜೋಡಿಸಿದ ಫೆಡರಲ್ ಬ್ಯಾಂಕ್ ಮತ್ತು ಲುಲು ಗ್ರೂಪ್

ಎರಡು ದಿನಗಳ ಎಕ್ಸ್‌‌ಪೋದಲ್ಲಿ ದುಬೈನಲ್ಲಿ ಹೂಡಿಕೆ ಮಾಡಿದರೆ ಅಥವಾ ಆಸಕ್ತಿ ತೋರಿದರೆ, ಅಂಥವರಿಗೆ ದುಬೈಗೆ ಕಪಲ್ ರಿಟರ್ನ್ ಏರ್ ಟಿಕೆಟ್, ದುಬೈ ವೀಸಾ ಮತ್ತು 3 ರಾತ್ರಿಗಳ ವಾಸ್ತವ್ಯ. 10 ಗ್ರಾಂ ಚಿನ್ನ, ಗೋಲ್ಡನ್ ವೀಸಾ, ಗ್ಯಾರಂಟೀಡ್ ಬೈ ಬ್ಯಾಕ್ ಸೇರಿದಂತೆ ಹಲವು ಆಫರ್‌ಗಳನ್ನು ನೀಡಲಾಗುತ್ತಿದೆ. ಹೆಚ್ಚಿನ ಮಾಹಿತಿಗಾಗಿ 9742117707 ಅಥವಾ +971 502568857 ಸಂಪರ್ಕಿಸಬಹುದು.



Source link

ADMIN

About Author

Leave a comment

Your email address will not be published. Required fields are marked *

You may also like

ಕರ್ನಾಟಕ

Microsoft: Empowering the Digital World

Microsoft is a global technology company known for shaping the modern digital experience. From its iconic Windows operating system to
ಕರ್ನಾಟಕ

Microsoft: Empowering the Digital World

Microsoft is a global technology company known for shaping the modern digital experience. From its iconic Windows operating system to
Translate »