Karunadu Studio

ಕರ್ನಾಟಕ

ಇಂಗ್ಲೆಂಡ್‌ಗೆ ಮುಖಭಂಗ, ಸ್ಮೃತಿ ಮಂಧಾನಾ ಶತಕದ ಬಲದಿಂದ ಭಾರತ ವನಿತೆಯರಿಗೆ ಭರ್ಜರಿ ಜಯ! – Kannada News | Smriti Mandhana’s Maiden Ton, Shree Charani’s Spell Seal IND’s 97-Run Win Over England


ನಾಟಿಂಗ್‌ಹ್ಯಾಮ್‌: ಭಾರತ ಮಹಿಳಾ ಕ್ರಿಕೆಟ್‌ ತಂಡ ಟಿ20ಐ ಸರಣಿಯಲ್ಲಿ(INDW vs ENGW) ಉತ್ತಮ ಆರಂಭ ಪಡೆದಿದೆ. ಸ್ಮೃತಿ ಮಂಧಾನಾ (112 ರನ್‌ಗಳು) ಚೊಚ್ಚಲ ಶತಕ ಹಾಗೂ ಶ್ರೀ ಚರಣಿ (12ಕ್ಕೆ 4) ಅವರ ಸ್ಪಿನ್‌ ಮೋಡಿಯ ನೆರವಿನಿಂದ ಭಾರತ ಮಹಿಳಾ ತಂಡ(India women team), ಮೊದಲನೇ ಟಿ20ಐ ಪಂದ್ಯದಲ್ಲಿ ಇಂಗ್ಲೆಂಡ್‌ ವಿರುದ್ದ 97 ರನ್‌ಗಳ ಭರ್ಜರಿ ಗೆಲುವು ಪಡೆದಿದೆ. ಆ ಮೂಲಕ ಐದು ಪಂದ್ಯಗಳ ಮಹಿಳಾ ಟಿ20ಐ ಸರಣಿಯಲ್ಲಿ ಪ್ರವಾಸಿ ಭಾರತ ತಂಡ 1-0 ಮುನ್ನಡೆಯನ್ನು ಪಡೆದಿದೆ. ತಮ್ಮ ಟಿ20ಐ ವೃತ್ತಿ ಜೀವನದಲ್ಲಿ ಶತಕ ಬಾರಿಸಿದ ಸ್ಮೃತಿ ಮಂಧಾನಾ (Smriti Mandhana) ಅವರು ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಶನಿವಾರ ಇಲ್ಲಿನ ಟ್ರೆಂಟ್‌ ಬ್ರಿಡ್ಜ್‌ನಲ್ಲಿ ನಡೆದಿದ್ದ ಈ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್‌ಗಳ ನಷ್ಟಕ್ಕೆ 210 ರನ್ ಗಳಿಸಿತು. ಇದಕ್ಕೆ ಪ್ರತಿಯಾಗಿ ಆತಿಥೇಯ ಇಂಗ್ಲೆಂಡ್, ಶ್ರೀ ಚರಣಿ ಸ್ಪಿನ್‌ ಮೋಡಿಗೆ ನಲುಗಿದ 14.5 ಓವರ್‌ಗಳಲ್ಲಿ 113 ರನ್‌ಗಳಿಗೆ ಆಲೌಟ್ ಆಯಿತು.

ಇಂಗ್ಲೆಂಡ್‌ ವಿರುದ್ಧ ಶತಕ ಬಾರಿಸಿ ನೂತನ ಮೈಲುಗಲ್ಲು ಸ್ಥಾಪಿಸಿದ ಸ್ಮೃತಿ ಮಂಧಾನಾ!

ಭಾರತ ತಂಡ ನೀಡಿದ್ದ 211 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಇಂಗ್ಲೆಂಡ್ ತಂಡವು ಕೆಟ್ಟ ಆರಂಭವನ್ನು ಪಡೆಯಿತು. ಇಂಗ್ಲೆಂಡ್ 10 ರನ್‌ಗಳ ಒಳಗೆ 2 ವಿಕೆಟ್‌ಗಳನ್ನು ಕಳೆದುಕೊಂಡಿತು. ಆದಾಗ್ಯೂ, ಮೂರನೇ ಕ್ರಮಾಂಕದಲ್ಲಿ ಬ್ಯಾಟ್‌ ಮಾಡಲು ಬಂದ ನಾಯಕಿ ನ್ಯಾಟ್ ಸೀವಿಯರ್‌ ಬ್ರಂಟ್ ಒಂದು ತುದಿಯಲ್ಲಿ ಏಕಾಂಗಿಯಾಗಿ ಹೋರಾಡಿದರು, ಆದರೆ ಅವರಿಗೆ ಯಾರಿಂದಲೂ ಬೆಂಬಲ ಸಿಗಲಿಲ್ಲ. ಬ್ರಂಟ್ ಇಂಗ್ಲೆಂಡ್ ಪರ ಅತಿ ಹೆಚ್ಚು ಸ್ಕೋರರ್ ಆಗಿದ್ದರು ಮತ್ತು ಅವರು 42 ಎಸೆತಗಳಲ್ಲಿ 66 ರನ್‌ಗಳನ್ನು ಗಳಿಸಿದರು. ಟಾಮಿ ಬಿಮೌಂಟ್ 10 ರನ್ ಮತ್ತು ಎಂ ಆರ್ಲಾಟ್ 12 ರನ್‌ ಗಳಿಸಿದರೆ, ಇನ್ನುಳಿದ ಆಟಗಾರ್ತಿಯರು ಎರಡಂಕಿ ವೈಯಕ್ತಿಕ ಮೊತ್ತವನ್ನು ಕಲೆ ಹಾಕಲಿಲ್ಲ.

ಸ್ಪಿನ್‌ ಮೋಡಿ ಮಾಡಿದ ಶ್ರೀ ಚರಣಿ

ಭಾರತದ ಪರ ಸ್ಪಿನ್‌ ಮೋಡಿ ಮಾಡಿದ ಶ್ರೀ ಚರಣಿ ಇಂಗ್ಲೆಂಡ್‌ಗೆ ಹಾನಿ ಮಾಡಿದರು. ಅವರು 3.5 ಓವರ್‌ಗಳಲ್ಲಿ ಕೇವಲ 13 ರನ್‌ಗಳಿಗೆ 4 ವಿಕೆಟ್‌ಗಳನ್ನು ಪಡೆದರು. ಅವರಲ್ಲದೆ, ದೀಪ್ತಿ ಶರ್ಮಾ ಮತ್ತು ರಾಧಾ ಯಾದವ್ ಅದ್ಭುತವಾಗಿ ಬೌಲ್‌ ಮಾಡಿದರು. ಈ ಇಬ್ಬರೂ ತಲಾ ಎರಡೆರಡು ವಿಕೆಟ್‌ ಕಿತ್ತರು. ಅಮನ್‌ಜೋತ್ ಕೌರ್ ಮತ್ತು ಅರುಂಧತಿ ರೆಡ್ಡಿ ಕೂಡ ತಲಾ ಒಂದು ವಿಕೆಟ್ ಪಡೆದರು.

ಶತಕ ಬಾರಿಸಿ ಇತಿಹಾಸ ಬರೆದ ಸ್ಮೃತಿ ಮಂಧಾನಾ

ಸ್ಮೃತಿ ಮಂಧಾನಾ ಬ್ಯಾಟಿಂಗ್‌ನಲ್ಲಿ ಭಾರತ ತಂಡದ ಪರ ಇತಿಹಾಸ ನಿರ್ಮಿಸಿದರು. ಮಂಧಾನ 51 ಎಸೆತಗಳಲ್ಲಿ ತಮ್ಮ ಚೊಚ್ಚಲ ಟಿ20ಐ ಶತಕವನ್ನು ಸಿಡಿಸಿದರು. ಅವರು ಆಡಿದ 51 ಎಸೆತಗಳಲ್ಲಿ ಶತಕ ಪೂರೈಸಿದರು. ಇದು ಮಹಿಳಾ ಅಂತಾರಾಷ್ಟ್ರೀಯ ಟಿ20 ಪಂದ್ಯದಲ್ಲಿ ಅವರ ಮೊದಲ ಶತಕವಾಗಿದೆ. ಟೀಮ್ ಇಂಡಿಯಾ ಪರ ಮಂಧಾನ 62 ಎಸೆತಗಳಲ್ಲಿ 112 ರನ್ ಗಳಿಸಿದರು, ಇದರಲ್ಲಿ 15 ಬೌಂಡರಿಗಳು ಮತ್ತು 3 ಸಿಕ್ಸರ್‌ಗಳು ಸೇರಿವೆ. ಆ ಮೂಲಕ ಭಾರತದ ಪರ ಮೂರು ಸ್ವರೂಪಗಳಲ್ಲಿ ಶತಕ ಗಳಿಸಿದ ಮೊದಲ ಮಹಿಳಾ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಮಂಧಾನ ಪಾತ್ರರಾಗಿದ್ದಾರೆ. ಮಂಧಾನಾ ಅವರಲ್ಲದೆ, ಹರ್ಲೀನ್ ಡಿಯೋಲ್ ಟೀಮ್ ಇಂಡಿಯಾ ಪರ 43 ರನ್‌ಗಳ ಕೊಡುಗೆ ನೀಡಿದ್ದಾರೆ.



Source link

ADMIN

About Author

Leave a comment

Your email address will not be published. Required fields are marked *

You may also like

ಕರ್ನಾಟಕ

Microsoft: Empowering the Digital World

Microsoft is a global technology company known for shaping the modern digital experience. From its iconic Windows operating system to
ಕರ್ನಾಟಕ

Microsoft: Empowering the Digital World

Microsoft is a global technology company known for shaping the modern digital experience. From its iconic Windows operating system to
Translate »