Karunadu Studio

ಕರ್ನಾಟಕ

Air India Flight: ಪ್ರಯಾಣಿಕರಿಬ್ಬರ ನಡುವೆ ಮಾರಾಮಾರಿ; ಏರ್ ಇಂಡಿಯಾ ವಿಮಾನ ಸಂಚಾರದಲ್ಲಿ ಅಡಚಣೆ – Kannada News | Air India passenger abuses flyer in mid-air drama before flight lands in Delhi


ನವದೆಹಲಿ: ಅಮೃತಸರದಿಂದ ದೆಹಲಿಗೆ ಹೊರಟಿದ್ದ ಏರ್‌ ಇಂಡಿಯಾ (Air India Flight) ವಿಮಾನದಲ್ಲಿ ಪ್ರಯಾಣಿಕರ ನಡುವೆ ಕಿತ್ತಾಟ ನಡೆದಿದೆ. ರಾಷ್ಟ್ರ ರಾಜಧಾನಿಯಲ್ಲಿ ಇಳಿಯುವ ಕೆಲವೇ ನಿಮಿಷಗಳ ಮೊದಲು ಪ್ರಯಾಣಿಕನೊಬ್ಬ ಸಹ ಪ್ರಯಾಣಿಕನೊಂದಿಗೆ ಅನುಚಿತವಾಗಿ ವರ್ತಿಸಿದ್ದಾನೆ. ಈ ವರ್ತನೆ ಬೇರೆ ಪ್ರಯಾಣಿಕರಿಗೆ ತೊಂದರೆಯನ್ನುಂಟು ಮಾಡಿದೆ. ಪ್ರಯಾಣಿಕನನ್ನು ದೆಹಲಿಯಲ್ಲಿ ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿಗೆ ಹಸ್ತಾಂತರಿಸಲಾಗಿದೆ ಎಂದು ತಿಳಿದು ಬಂದಿದೆ. ಏರ್‌ (Viral News) ಇಂಡಿಯಾದ AI454 ವಿಮಾನದಲ್ಲಿ ಈ ಘಟನೆ ಸಂಭವಿಸಿದೆ.

ಏರ್ ಇಂಡಿಯಾದ ಅಧಿಕೃತ ಹೇಳಿಕೆಯ ಪ್ರಕಾರ, ಕ್ಯಾಬಿನ್ ಸಿಬ್ಬಂದಿಯೊಬ್ಬರು ಇಬ್ಬರು ಪ್ರಯಾಣಿಕರು ಜಗಳವಾಡುತ್ತಿರುವುದನ್ನು ಗಮನಿಸಿದರು. ಇದನ್ನು ಬಗೆಹರಿಸಲು ತೆರಳಿದಾಗ ಓರ್ವ ಪ್ರಯಾಣಿಕ ಮತ್ತೋರ್ವನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಆಗ ಸಹ ಪ್ರಯಾಣಿಕ ಏರ್‌ ಇಂಡಿಯಾ ಸಿಬ್ಬಂದಿ ಬಳಿ ವರದಿ ಮಾಡಿದ್ದಾರೆ. ಎರಡನೇ ಪ್ರಯಾಣಿಕನ ದೂರಿನ ಮೇರೆಗೆ, ಪೈಲಟ್-ಇನ್-ಕಮಾಂಡ್, ವಿಮಾನ ದೆಹಲಿಗೆ ಆಗಮಿಸಿದಾಗ ಸ್ಥಳದಲ್ಲಿದ್ದ ಭದ್ರತಾ ತಂಡಕ್ಕೆ ಪರಿಸ್ಥಿತಿಯ ಬಗ್ಗೆ ತಿಳಿಸಿದರು ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ. “ಅವ್ಯವಸ್ಥೆಗೆ ಕಾರಣನಾದ ಪ್ರಯಾಣಿಕನನ್ನು ಹೆಚ್ಚಿನ ತನಿಖೆಗಾಗಿ ವಿಮಾನ ನಿಲ್ದಾಣದ ಭದ್ರತಾ ಅಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ” ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಏರ್‌ ಇಂಡಿಯಾ ಇಂತಹ ಯಾವುದೇ ನಡುವಳಿಕೆಯನ್ನು ಸಹಿಸುವುದಿಲ್ಲ. ಎಲ್ಲಾ ಪ್ರಯಾಣಿಕರು ಮತ್ತು ಸಿಬ್ಬಂದಿಗಳ ಸುರಕ್ಷತೆ ಮತ್ತು ಯೋಗಕ್ಷೇಮಕ್ಕೆ ಆದ್ಯತೆ ನೀಡುತ್ತದೆ. ನಾವು ಸಂಬಂಧಿತ ಅಧಿಕಾರಿಗಳೊಂದಿಗೆ ಸಂಪೂರ್ಣವಾಗಿ ಸಹಕರಿಸುತ್ತೇವೆ ಎಂದು ವಿಮಾನಯಾನ ಸಂಸ್ಥೆ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಈ ಸುದ್ದಿಯನ್ನೂ ಓದಿ: Air India Flight: ಕ್ಯಾಬಿನ್‌ನಲ್ಲಿ ಸುಟ್ಟಿರುವ ವಾಸನೆ; ದೆಹಲಿಗೆ ಹೊರಟಿದ್ದ ಏರ್‌ ಇಂಡಿಯಾ ವಿಮಾನ ಮುಂಬೈಗೆ ವಾಪಾಸ್‌

ಅಹಮದಾಬಾದ್‌ನಲ್ಲಿ ನಡೆದ ದುರಂತದ ಬಳಿಕ ಕರ್ತವ್ಯದ ಸ್ಥಳದಲ್ಲಿ ಪಾರ್ಟಿ ಮೂಡ್‌ನಲ್ಲಿದ್ದ ಏರ್‌ ಇಂಡಿಯಾ ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸಲಾಗಿದೆ. ಏರ್ ಇಂಡಿಯಾದ ವಿಮಾನ ನಿಲ್ದಾಣದ ಗೇಟ್‌ವೇ ಸೇವಾ ಪೂರೈಕೆದಾರ AISATS ನ ನಾಲ್ವರು ಹಿರಿಯ ಉದ್ಯೋಗಿಗಳಿಗೆ ರಾಜೀನಾಮೆ ನೀಡುವಂತೆ ಸೂಚಿಸಲಾಗಿದೆ. ನೌಕರರು ಕೆಲಸದ ಸ್ಥಳದಲ್ಲಿ ಪಾರ್ಟಿ ಮಾಡುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗಿತ್ತು. ಆ ಬೆನ್ನಲ್ಲೇ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ.

ಈ ಸುದ್ದಿಯನ್ನೂ ಓದಿ: Air India Flight: ಕ್ಯಾಬಿನ್‌ನಲ್ಲಿ ಸುಟ್ಟಿರುವ ವಾಸನೆ; ದೆಹಲಿಗೆ ಹೊರಟಿದ್ದ ಏರ್‌ ಇಂಡಿಯಾ ವಿಮಾನ ಮುಂಬೈಗೆ ವಾಪಾಸ್‌

ಸದ್ಯ ಮೃತ ಹೊಂದಿದ 270 ಜನರ ಪೈಕಿ 260 ಜನರ ಡಿಎನ್‌ಎ ಪರೀಕ್ಷೆ ಮೂಲಕ ಅವರ ಕುಟುಂಬಸ್ಥರನ್ನು ಪತ್ತೆ ಮಾಡಲಾಗಿದೆ. ಅಪಘಾತಕ್ಕೀಡಾದ ಏರ್ ಇಂಡಿಯಾ ಡ್ರೀಮ್‌ಲೈನರ್ ವಿಮಾನ AI-171ನ ಕಪ್ಪು ಪೆಟ್ಟಿಗೆಯ (Black Box) ಡೇಟಾವನ್ನು ವಿಮಾನ ಅಪಘಾತ ತನಿಖಾ ಬ್ಯೂರೋ (AAIB) ಪ್ರಯೋಗಾಲಯದಲ್ಲಿ ಡೌನ್‌ಲೋಡ್ ಮಾಡಲಾಗಿದೆ. ಈಗಾಗಲೇ ತನಿಖೆ ಚುರುಕುಗೊಂಡಿದೆ.



Source link

ADMIN

About Author

Leave a comment

Your email address will not be published. Required fields are marked *

You may also like

ಕರ್ನಾಟಕ

Microsoft: Empowering the Digital World

Microsoft is a global technology company known for shaping the modern digital experience. From its iconic Windows operating system to
ಕರ್ನಾಟಕ

Microsoft: Empowering the Digital World

Microsoft is a global technology company known for shaping the modern digital experience. From its iconic Windows operating system to
Translate »