Karunadu Studio

ಕರ್ನಾಟಕ

Iqbal Hussain: ಮೂರು ತಿಂಗಳ ಬಳಿಕ DK ಶಿವಕುಮಾರ್‌ ಸಿಎಂ ಆಗ್ತಾರೆ; ಶಾಸಕ ಇಕ್ಬಾಲ್ ಹುಸೇನ್ ಸ್ಪೋಟಕ ಹೇಳಿಕೆ – Kannada News | DK Shivakumar will become CM after three months; MLA Iqbal Hussain makes explosive statement


ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಬದಲಾವಣೆಯ ಕೂಗು ಜೋರಾಗಿಯೇ ಕೇಳಿ ಬರುತ್ತಿದೆ. ಅತ್ತ ಬಿಜೆಪಿಯಲ್ಲಿ ರಾಜ್ಯಾಧ್ಯಕ್ಷರ ಬದಲಾವಣೆಗೆ ಸದ್ದಿಲ್ಲದೆ ತಯಾರಿ ನಡೆಯುತ್ತಿದ್ದರೆ, ಇತ್ತ ಕಾಂಗ್ರೆಸ್‌ನಲ್ಲಿ ಸಿಎಂ ಬದಲಾವಣೆಗೆ ಕೆಲ ಶಾಸಕರು ಪಟ್ಟು ಹಿಡಿದಿದ್ದಾರೆ. ಇದೀಗ ರಾಮನಗರ ಶಾಸಕ ಇಕ್ಬಾಲ್ ಹುಸೈನ್ ಮುಂದಿನ ಮೂರು ತಿಂಗಳಲ್ಲಿ ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಆಗಲಿದ್ದಾರೆ ಎಂದು ಹೊಸ ಬಾಂಬ್‌ ಒಂದನ್ನು ಸಿಡಿಸಿದ್ದಾರೆ. ಡಿ.ಕೆ. ಶಿವಕುಮಾರ್‌ರನ್ನು ಸಿಎಂ ಆಗಿ ನೋಡಬೇಕೆಂಬ ಬಯಕೆಯನ್ನು ಅವರ ಬೆಂಬಲಿಗರು, ವಿಶೇಷವಾಗಿ ರಾಮನಗರ ಶಾಸಕ ಇಕ್ಬಾಲ್‌ ಹುಸೇನ್‌, ಚನ್ನಗಿರಿಯ ಶಾಸಕ ಶಿವಗಂಗಾ ಬಸವರಾಜ್‌ ಮತ್ತು ಇತರರು ವ್ಯಕ್ತಪಡಿಸಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕ ಮುಂದಿನ ಮೂರು ತಿಂಗಳಲ್ಲಿ ಡಿಕೆ ಶಿವಕುಮಾರ್ ಸಿಎಂ ಆಗುತ್ತಾರೆ ಎಂದು ಹೇಳಿದ್ದಾರೆ. ನಮಗೆ ಯಾವುದೇ ಪವರ್ ಸೆಂಟರ್ ಇಲ್ಲ ಹೈಕಮಾಂಡ್ ಒಂದೇ ಇರೋದು. ರಾಜಕಾರಣದಲ್ಲಿ ಬದಲಾವಣೆ ಸಹಜ ಪಕ್ಷದಲ್ಲಿ ಯಾರಿಗೆ ಸೂಕ್ತ ಅನಿಸುತ್ತೋ ಅವರಿಗೆ ಅಧಿಕಾರ ಸಿಗಲಿದೆ ಎಂದು ಹೇಳಿದ್ದಾರೆ. ಈ ಸರ್ಕಾರ ಬರುವ ಮುನ್ನ ಕಾಂಗ್ರೆಸ್ ಶಾಸಕರ ಸಂಖ್ಯೆ ಎಷ್ಟಿತ್ತು? 136 ಸೀಟ್ ಬರಲು ಹೋರಾಟ, ಶ್ರಮ, ಆಸಕ್ತಿ ಯಾರದ್ದು? ಇದರ ಹಿಂದಿನ ಹೋರಾಟ ಶ್ರಮ ಯಾರದ್ದು ಎಂದು ಎಲ್ಲರಿಗೂ ಗೊತ್ತಿದೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಪರವಾಗಿ ಶಾಸಕ ಇಕ್ಬಾಲ್ ಹುಸೇನ್ ಮಾತನಾಡಿದ್ದಾರೆ.

ಈ ಸುದ್ದಿಯನ್ನೂ ಓದಿ: CM Siddaramaiah: ಪಕ್ಷದಲ್ಲಿ ಆಂತರಿಕ ಜಗಳವಿಲ್ಲ, ರಾಜಣ್ಣ ಹೇಳಿಕೆ ನಿರ್ಲಕ್ಷಿಸಿ: ಸಿಎಂ ಸಿದ್ದರಾಮಯ್ಯ

ಸಪ್ಟೆಂಬರ್‌ ಕ್ರಾಂತಿ!

ಇನ್ನೊಂದೆಡೆ ಸಚಿವ ಕೆಎನ್‌ ರಾಜಣ್ಣ ಅವರ ಹೇಳಿಕೆ ರಾಜಕೀಯ ವಲಯದಲ್ಲಿ ಚರ್ಚೆಯನ್ನು ಹುಟ್ಟು ಹಾಕಿದೆ. ಸೆಪ್ಟೆಂಬರ್ ಮುಗಿಯಲಿ. ರಾಜ್ಯ ರಾಜಕೀಯದಲ್ಲಿ ಬೆಳವಣಿಗೆಗಳಾಗುತ್ತವೆ. ಸೆಪ್ಟೆಂಬರ್‌ ನಂತರ ಮಹತ್ವದ ಘಟನೆಗಳು ನಡೆಯುತ್ತಿವೆ ಎಂದು ರಾಜಣ್ಣ ಹೇಳಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2013-18ರಲ್ಲಿ (ಮೊದಲ ಸಿಎಂ ಅವಧಿ) ಇದ್ದಂತೆ ಇಲ್ಲ ಎಂಬ ಕೆಲವು ಶಾಸಕರ ಅಭಿಪ್ರಾಯದ ಹಿನ್ನೆಲೆಯಲ್ಲಿ ಅವರ ಮೇಲೆ ಒತ್ತಡವಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ರಾಜಣ್ಣ, 2013-18ರ ಅವಧಿಯಲ್ಲಿ ಕೇವಲ ಒಂದು ಶಕ್ತಿ ಕೇಂದ್ರವಿತ್ತು. ಈಗ ಒಂದು, ಎರಡು, ಮೂರು, ಎಷ್ಟು ಬೇಕೋ ಅಷ್ಟು ಶಕ್ತಿ ಕೇಂದ್ರಗಳಿವೆ ಎಂದು ಹೇಳಿದ್ದಾರೆ.



Source link

ADMIN

About Author

Leave a comment

Your email address will not be published. Required fields are marked *

You may also like

ಕರ್ನಾಟಕ

Microsoft: Empowering the Digital World

Microsoft is a global technology company known for shaping the modern digital experience. From its iconic Windows operating system to
ಕರ್ನಾಟಕ

Microsoft: Empowering the Digital World

Microsoft is a global technology company known for shaping the modern digital experience. From its iconic Windows operating system to
Translate »