Karunadu Studio

ಕರ್ನಾಟಕ

Jagdeep Dhankhar: RSSಗೆ ಬೆಂಬಲ ಸೂಚಿಸಿದ ಉಪರಾಷ್ಟ್ರಪತಿ; ಹೊಸಬಾಳೆ ಹೇಳಿಕೆ ಸಮರ್ಥಿಸಿದ ಜಗದೀಪ್‌ ಧನ್‌ಕರ್‌ – Kannada News | Vice President expresses support for RSS; Jagdeep Dhankar defends Hosabale’s statement


ನವದೆಹಲಿ: ಸಂವಿಧಾನದ ಪೀಠಿಕೆಯಲ್ಲಿರುವ ‘ಸಮಾಜವಾದ’ ಹಾಗೂ ‘ಜಾತ್ಯತೀತ’ ಪದಗಳನ್ನು ತೆಗೆದು ಹಾಕಬೇಕು ಎಂಬ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ದತ್ತಾತ್ರೇಯ ಹೊಸಬಾಳೆ ಅವರ ನಿಲುವಿಗೆ ಉಪರಾಷ್ಟ್ರಪತಿ ಜಗದೀಪ್‌ ಧನ್‌ಕರ್‌ ಬೆಂಬಲ ವ್ಯಕ್ತಪಡಿಸಿದ್ದಾರೆ. ಬಿಜೆಪಿಯ ನಾಯಕರು ಹೊಸಬಾಳೆಯ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ಹೊಸದಿಲ್ಲಿಯಲ್ಲಿ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಧನ್‌ಕರ್‌, ”ಸಂವಿಧಾನದ ಆತ್ಮವೇ ಪೀಠಿಕೆ. ಆ ಒಂದು ನಿರ್ದಿಷ್ಟ ಭಾಗವನ್ನು ಎಂದಿಗೂ ಬದಲಾಯಿಸಲಾಗದು. ಕಳೆದ 75 ವರ್ಷದಿಂದ ಸಂವಿಧಾನ ಬೆಳೆದು ಬಂದಿರುವುದಕ್ಕೆ ಪೀಠಿಕೆಯೇ ಆಧಾರವಾಗಿದೆ ಎಂದು ಹೇಳಿದ್ದಾರೆ.

1976 ರ 42 ನೇ ಸಂವಿಧಾನದ ತಿದ್ದುಪಡಿ ಕಾಯ್ದೆಯೊಂದಿಗೆ ಪೀಠಿಕೆಯನ್ನು ತಿದ್ದುಪಡಿ ಮಾಡಲಾಗಿದ್ದು, ಸಮಾಜವಾದಿ, ಜಾತ್ಯಾತೀತ ಹಾಗೂ ಸಮಗ್ರತೆ ಪದಗಳನ್ನು ಸೇರಿಸಲಾಗಿದೆ. ಸನಾತನ ಧರ್ಮದ ಚೈತನ್ಯಕ್ಕೆ ಅಪಚಾರ ಎಸಗಿತು. ಸಂವಿಧಾನದ ಮೂಲ ಆಶಯ ಬುಡಮೇಲು ಮಾಡಿತು,” ಎಂದು ಧನ್‌ಕರ್‌ ಆರೋಪಿಸಿದರು.

ಭಾರತೀಯ ಸಂಸ್ಕೃತಿಗೆ ವಿರುದ್ಧವಾದ ಎರಡು ಪದಗಳನ್ನು ಸೇರಿಸಿದ ಕಾಂಗ್ರೆಸ್‌ ಮೂಲ ಸಂವಿಧಾನವನ್ನು ಗಾಯಗೊಳಿಸಿತು. ಅಂದಿನ ಬದಲಾವಣೆಗಳು ದೇಶದಲ್ಲಿಂದು ಅಸ್ತಿತ್ವದ ಸವಾಲು ಒಡ್ಡಿವೆ. ಸಂವಿಧಾನದ ಮೂಲ ರಚನಾಕಾರರ ಆಶಯ ಪ್ರತಿಬಿಂಬಿಸಲು ಎರಡು ಪದಗಳನ್ನು ತೆಗೆದು ಹಾಕುವ ಸಮಯ ಬಂದಿದೆ. ಸರಕಾರ ಈ ನಿಟ್ಟಿನಲ್ಲಿ ಗಂಭೀರವಾಗಿ ಯೋಚಿಸಬೇಕು,” ಎಂದು ಧನ್‌ಕರ್‌ ಆಗ್ರಹಿಸಿದ್ದಾರೆ.

ಹೊಸ ಬಾಳೆ ಹೇಳಿದ್ದೇನು?

ದೆಹಲಿಯಲ್ಲಿ ಗುರುವಾರ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ದತ್ತಾತ್ರೇಯ ಹೊಸಬಾಳೆ, ತುರ್ತು ಪರಿಸ್ಥಿತಿಯ ಸಮಯದಲ್ಲಿ, ಜಾತ್ಯತೀತ ಮತ್ತು ಸಮಾಜವಾದಿ ಎಂಬ ಎರಡು ಪದಗಳನ್ನು ಸಂವಿಧಾನಕ್ಕೆ ಸೇರಿಸಲಾಯಿತು, ಅವು ಮೂಲ ಪೀಠಿಕೆಯ ಭಾಗವಾಗಿರಲಿಲ್ಲ’ ಎಂದು ಹೇಳಿದರು. ನಂತರ, ಈ ಪದಗಳನ್ನು ತೆಗೆದುಹಾಕಲಾಗಿಲ್ಲ. ಅವು ಹಾಗೆಯೇ ಇರಬೇಕೋ ಬೇಡವೋ ಎಂಬುದರ ಬಗ್ಗೆ ಚರ್ಚೆ ನಡೆಯಬೇಕು. ಈ ಎರಡು ಪದಗಳು ಡಾ. ಅಂಬೇಡ್ಕರ್ ಅವರು ಬರೆದ ಸಂವಿಧಾನದಲ್ಲಿ ಇರಲಿಲ್ಲ. ತುರ್ತು ಪರಿಸ್ಥಿತಿಯ ಸಮಯದಲ್ಲಿ, ದೇಶಕ್ಕೆ ಕಾರ್ಯನಿರ್ವಹಿಸುವ ಸಂಸತ್ತು ಇರಲಿಲ್ಲ, ಹಕ್ಕುಗಳಿರಲ್ಲ, ನ್ಯಾಯಾಂಗವಿರಲಿಲ್ಲ ಇನ್ನೂ ಈ ಎರಡು ಪದಗಳನ್ನು ಸಹ ಸೇರಿಸಲಾಗಿದೆ ಎಂದು ಹೇಳಿದ್ದರು.

ಈ ಸುದ್ದಿಯನ್ನೂ ಓದಿ: Anant Nag: ಪದ್ಮಭೂಷಣ ಪಡೆದ ಬಳಿಕ ಪ್ರಧಾನಿ ನರೇಂದ್ರ ಮೋದಿ ಭೇಟಿಯಾದ ಅನಂತನಾಗ್

ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಆಗಿನ ಕಾಂಗ್ರೆಸ್ ಆಡಳಿತದ ಸರ್ಕಾರವು ನಾಗರಿಕರ ಮೇಲೆ ನಡೆಸಿದ ದೌರ್ಜನ್ಯಗಳ ಬಗ್ಗೆಯೂ ಆರ್‌ಎಸ್‌ಎಸ್ ನಾಯಕ ರಾಹುಲ್ ಗಾಂಧಿ ಅವರನ್ನು ಪರೋಕ್ಷವಾಗಿ ಟೀಕಿಸಿದ ದತ್ತಾತ್ರೇಯ ಹೊಸಬಾಳೆ, ‘ಇದನ್ನು (ತುರ್ತು ಪರಿಸ್ಥಿತಿ ಹೇರಿದ) ಜನರು ಇಂದು ಸಂವಿಧಾನದ ಪ್ರತಿಗಳೊಂದಿಗೆ ಅಲೆದಾಡುತ್ತಿದ್ದಾರೆ. ಅವರು ಇಲ್ಲಿಯವರೆಗೆ ಇದಕ್ಕಾಗಿ ಭಾರತದ ಜನರಿಗೆ ಕ್ಷಮೆಯಾಚಿಸಿಲ್ಲ ಎಂದು ಹೇಳಿದ್ದರು.



Source link

ADMIN

About Author

Leave a comment

Your email address will not be published. Required fields are marked *

You may also like

ಕರ್ನಾಟಕ

Microsoft: Empowering the Digital World

Microsoft is a global technology company known for shaping the modern digital experience. From its iconic Windows operating system to
ಕರ್ನಾಟಕ

Microsoft: Empowering the Digital World

Microsoft is a global technology company known for shaping the modern digital experience. From its iconic Windows operating system to
Translate »