Karunadu Studio

ಕರ್ನಾಟಕ

ಸತತ ಸೋಲು, ವಿವಾದದ ನಡುಗೆ ಕಮಲ್‌ ಹಾಸನ್‌ಗೆ ಆಸ್ಕರ್‌ ಸದಸ್ಯತ್ವ; ಭಾರತೀಯ ಚಿತ್ರರಂಗಕ್ಕೆ ದೊರೆತ ಗೌರವ ಎಂದ ʼಥಗ್‌ ಲೈಫ್‌ʼ ಸ್ಟಾರ್‌ – Kannada News | This recognition is not mine– Kamal Haasan on Oscars honor


ಚೆನ್ನೈ: ಕೆಲವು ಸಮಯಗಳಿಂದ ಕಾಲಿವುಡ್‌ ಸೂಪರ್‌ ಸ್ಟಾರ್‌ ಕಮಲ್‌ ಹಾಸನ್‌ (Kamal Haasan) ಸುದ್ದಿಯಲ್ಲಿದ್ದಾರೆ. ಸತತ ಸೋಲು, ವಿವಾದ ಹೀಗೆ ಸಾಲು ಸಾಲು ನೆಗೆಟಿವ್‌ ಕಾರಣಕ್ಕೆ ಸದ್ದು ಮಾಡುತ್ತಿದ್ದ ಉಳಗನಾಯಗನ್‌ ಈಗ ಒಳ್ಳೆಯ ವಿಚಾರದ ಮೂಲಕ ಗಮನ ಸೆಳೆದಿದ್ದಾರೆ. ಅವರಿಗೆ ಈಗ ಈ ಬಾರಿಯ ಆಸ್ಕರ್ (Oscars) ಸದಸ್ಯತ್ವ ಸಿಕ್ಕಿದೆ. ಪ್ರತಿ ವರ್ಷ ನೀಡಲಾಗುವ ಆಸ್ಕರ್ ಪ್ರಶಸ್ತಿಯನ್ನು ವೋಟ್ ಮೂಲಕ ನಿರ್ಧರಿಸಲಾಗುತ್ತದೆ. ಹೀಗೆ ವೋಟ್‌ ಮಾಡಬೇಕು ಎಂದರೆ ‘ಅಕಾಡೆಮಿ ಆಫ್ ಮೋಷನ್ ಪಿಕ್ಚರ್ ಆರ್ಟ್ಸ್​ ಆ್ಯಂಡ್ ಸೈನ್ಸ್’ (Academy of Motion Picture Arts and Sciences)ನಲ್ಲಿ ಸದಸ್ಯರಾಗಿರಬೇಕು. ಇದೀಗ ಕಮಲ್ ಹಾಸನ್ ಅವರಿಗೆ ಈ ಸದಸ್ಯತ್ವ ನೀಡಲಾಗಿದೆ. ಅವರು ಈ ಸದಸ್ಯತ್ವದ ಆಹ್ವಾವನ್ನು ಸ್ವೀಕರಿಸಿದ್ದಾರೆ. ಚಿತ್ರರಂಗದ ಗಣ್ಯರು ಕಮಲ್‌ ಹಾಸನ್‌ ಅವರಿಗೆ ಅಭಿನಂದನೆ ತಿಳಿಸಿದ್ದಾರೆ.

ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಬರೆದುಕೊಂಡಿರುವ ಕಮಲ್‌ ಹಾಸನ್‌, ಇದು ಇಡೀ ಭಾರತೀಯ ಚಿತ್ರರಂಗಕ್ಕೆ ದೊರೆತ ಗೌರವ ಎಂದು ತಿಳಿಸಿದ್ದಾರೆ.

ಕಮಲ್‌ ಹಾಸನ್‌ ಎಕ್ಸ್‌ ಪೋಸ್ಟ್‌:



ಈ ಸುದ್ದಿಯನ್ನೂ ಓದಿ: Kamal Haasan: ಸಾರ್ವಜನಿಕ ಸಭೆಯಲ್ಲಿ ಅಭಿಮಾನಿ ಕೊಟ್ಟ ಗಿಫ್ಟ್‌ ನೋಡಿ ಸಿಟ್ಟಾದ ಕಮಲ್‌ ಹಾಸನ್‌; ಏನಿದು ಘಟನೆ?

ಕಮಲ್‌ ಹಾಸನ್‌ ಹೇಳಿದ್ದೇನು?

ʼ‘ಅಕಾಡೆಮಿ ಆಫ್ ಮೋಷನ್ ಪಿಕ್ಚರ್ ಆರ್ಟ್ಸ್​ ಆ್ಯಂಡ್ ಸೈನ್ಸ್ʼ ಸೇರಿಕೊಳ್ಳಲು ನನಗೆ ಹೆಮ್ಮೆ ಆಗುತ್ತಿದೆ. ಈ ಮನ್ನಣೆ ಕೇವಲ ನನ್ನದಲ್ಲ. ಇಡೀ ಭಾರತೀಯ ಸಿನಿಮಾ ಸಮೂಹಕ್ಕೆ ಮತ್ತು ನನ್ನನ್ನು ರೂಪಿಸಿದ ಹಲವು ನಿರ್ದೇಶಕರಿಗೆ ಇದು ಸಲ್ಲುತ್ತದೆʼ’ ಎಂದು ಕಮಲ್ ಹಾಸನ್ ಹೇಳಿದ್ದಾರೆ.

‘ʼಭಾರತೀಯ ಚಿತ್ರರಂಗವು ಜಗತ್ತಿಗೆ ಇನ್ನಷ್ಟು ಕೊಡುಗೆ ನೀಡಲಿದೆ. ಜಾಗತಿಕ ಸಿನಿಮಾ ಮಂದಿಯ ಜತೆ ಕಾರ್ಯ ನಿರ್ವಹಿಸಲು ನಾನು ಕಾತುರನಾಗಿದ್ದೇನೆ. ನನ್ನ ಜತೆ ಅಕಾಡೆಮಿ ಸೇರುತ್ತಿರುವ ಇನ್ನುಳಿದ ಕಲಾವಿದರು ಮತ್ತು ತಂತ್ರಜ್ಞರಿಗೂ ಅಭಿನಂದನೆ ತಿಳಿಸುತ್ತೇನೆ’ʼ ಎಂದು ಅವರು ಬರೆದುಕೊಂಡಿದ್ದಾರೆ. ಕಮಲ್ ಹಾಸನ್ ಅವರ ಸುಮಾರು 6 ದಶಕಗಳ ಕಲಾಸೇವೆಯನ್ನು ಪರಿಗಣಿಸಿ ಈ ಸದಸ್ಯತ್ವ ನೀಡಲಾಗಿದೆ.

ಈ ವಿಶೇಷ ಗೌರವ ಪಡೆದ ಕಮಲ್‌ ಹಾಸನ್‌ 98ನೇ ಅಕಾಡೆಮಿ ಪ್ರಶಸ್ತಿಗೆ ನಾಮ ನಿರ್ದೇಶನದಗೊಂಡಿರುವ ಅತ್ಯುನ್ನತ ಚಿತ್ರ, ನಟ ಮತ್ತು ತಂತ್ರಜ್ಞರಿಗೆ ಮತ ಚಲಾಯಿಸುವ ಅಧಿಕಾರ ಹೊಂದಿದ್ದಾರೆ. ಈ ಬಾರಿ ಒಟ್ಟು 534 ಮಂದಿಗೆ ಆಹ್ವಾನ ನೀಡಲಾಗಿದ್ದು, ಭಾರತದಿಂದ ಕಮಲ್‌ ಹಾಸನ್‌ ಜತೆಗೆ ಬಾಲಿವುಡ್‌ ನಟ ಆಯುಷ್ಮಾನ್‌ ಖುರಾನ ಕೂಡ ಈ ಗೌರವಕ್ಕೆ ಪಾತ್ರರಾಗಿದ್ದಾರೆ.

ಆಸ್ಕರ್‌ ಇತಿಹಾಸದಲ್ಲಿ ಭಾರತದ ಎ.ಆರ್.ರೆಹಮಾನ್, ರೆಸೂಲ್ ಪೂಕುಟ್ಟಿ, ಎಂ.ಎಂ.ಕೀರವಾಣಿ ಮತ್ತು ಎಸ್.ಎಸ್.ರಾಜಮೌಳಿ ಅವರಿಗೆ ಮಾತ್ರ ಈ ಪ್ರಶಿಸ್ತಿ ಸಿಕ್ಕಿದೆ. ಇದುವರೆಗೆ ಕಮಲ್‌ ಅಭಿನಯದ 7 ಚಿತ್ರಗಳು ಭಾರತದಿಂದ ಆಸ್ಕರ್‌ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದವು. ಆದರೆ ಯಾವುದೂ ಅಂತಿಮ ಸುತ್ತಿಗೆ ಆಯ್ಕೆಯಾಗಿಲ್ಲ.

ಸದ್ಯ ಕಮಲ್‌ ಹಾಸನ್‌ ʼಇಂಡಿಯನ್‌ 2ʼ, ʼಥಗ್‌ ಲೈಫ್‌ʼ ಚಿತ್ರಗಳ ಸತತ ಸೋಲಿನ ಆಘಾತದಲ್ಲಿದ್ದಾರೆ. ಭಾರಿ ನಿರೀಕ್ಷೆ ಹೊತ್ತುಕೊಂಡು ತೆರೆಗೆ ಬಂದಿದ್ದ ಈ ಚಿತ್ರಗಳು ಬಾಕ್ಸ್‌ ಆಫೀಸ್‌ನಲ್ಲಿ ಮಕಾಡೆ ಮಲಗಿವೆ. ಇದರ ಜತೆಗೆ ಅವರು ಕನ್ನಡ ತಮಿಳಿನಿಂದ ಹುಟ್ಟಿದ್ದು ಎಂದು ಹೇಳುವ ಮೂಲಕ ವಿವಾದದ ಕಿಡಿ ಹೊತ್ತಿಸುವ ಜತೆಗೆ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.





Source link

ADMIN

About Author

Leave a comment

Your email address will not be published. Required fields are marked *

You may also like

ಕರ್ನಾಟಕ

Microsoft: Empowering the Digital World

Microsoft is a global technology company known for shaping the modern digital experience. From its iconic Windows operating system to
ಕರ್ನಾಟಕ

Microsoft: Empowering the Digital World

Microsoft is a global technology company known for shaping the modern digital experience. From its iconic Windows operating system to
Translate »