ಬರ್ಮಿಂಗ್‌ಹ್ಯಾಮ್: ಜುಲೈ 2 ರಿಂದ ಬರ್ಮಿಂಗ್‌ಹ್ಯಾಮ್‌ನ(Birmingham) ಎಡ್ಜ್‌ಬಾಸ್ಟನ್ ಕ್ರೀಡಾಂಗಣದಲ್ಲಿ(Edgbaston) ನಡೆಯಲಿರುವ ಇಂಗ್ಲೆಂಡ್ ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾದ ಯಶಸ್ವಿ ಜೈಸ್ವಾಲ್‌ಗೆ ದಿಗ್ಗಜ ಸುನಿಲ್ ಗವಾಸ್ಕರ್(sunil gavaskar) ಅವರ 49 ವರ್ಷಗಳ ಹಳೆಯ ದಾಖಲೆಯನ್ನು ಮುರಿಯುವ ಅವಕಾವಿದೆ.
2,000 ಟೆಸ್ಟ್ ರನ್‌ಗಳನ್ನು ತಲುಪಿದ ಅತ್ಯಂತ ವೇಗದ ಭಾರತೀಯ ಆಟಗಾರನಾಗಲು ಜೈಸ್ವಾಲ್‌ಗೆ ಕೇವಲ 97 ರನ್‌ಗಳ ಅಗತ್ಯವಿದೆ. ಟೆಸ್ಟ್‌ನಲ್ಲಿ ವೇಗವಾಗಿ 2,000 ರನ್ ಗಳಿಸಿದ ಭಾರತೀಯ ಆಟಗಾರನ ಪ್ರಸ್ತುತ ದಾಖಲೆ ಬ್ಯಾಟಿಂಗ್ ದಂತಕಥೆ ಸುನಿಲ್ ಗವಾಸ್ಕರ್ ಅವರದ್ದಾಗಿದೆ. ಅವರು 1976 ರಲ್ಲಿ ತಮ್ಮ 23 ನೇ ಟೆಸ್ಟ್‌ನಲ್ಲಿ ಈ ಮೈಲಿಗಲ್ಲು ತಲುಪಿದ್ದರು. ರಾಹುಲ್ ದ್ರಾವಿಡ್ ಮತ್ತು ವೀರೇಂದ್ರ ಸೆಹ್ವಾಗ್ ತಮ್ಮ 25 ನೇ ಟೆಸ್ಟ್‌ನಲ್ಲಿ 2,000 ರನ್ ದಾಟುವ ಮೂಲಕ ಎಲೈಟ್ ಪಟ್ಟಿಯಲ್ಲಿರುವ ಆಟಗಾರರಾಗಿದ್ದಾರೆ.
ಸದ್ಯ 20 ಪಂದ್ಯಗಳಿಂದ 1903* ರನ್ ಬಾರಿಸಿದ್ದಾರೆ. ಮೊದಲ ಪಂದ್ಯದಲ್ಲಿ ಶತಕ ಕೂಡ ಬಾರಿಸಿ ಮಿಂಚಿದ್ದರು. ಉತ್ತಮ ಬ್ಯಾಟಿಂಗ್ ಫಾರ್ಮ್‌ನಲ್ಲಿರುವ ಜೈಸ್ವಾಲ್‌ಗೆ ಮುಂದಿನ ಪಂದ್ಯದಲ್ಲಿ 97ರನ್ ಗಳಿಸುವುದು ಅಷ್ಟು ಕಷ್ಟ ಎನಿಸದು.
ಮೊದಲ ಟೆಸ್ಟ್ ಪಂದ್ಯದಲ್ಲಿ ಜೈಸ್ವಾಲ್ ಮೊದಲ ಇನ್ನಿಂಗ್ಸ್‌ನಲ್ಲಿ 3 ಹಾಗೂ 2ನೇ ಇನ್ನಿಂಗ್ಸ್‌ನಲ್ಲಿ ಒಂದು ಕ್ಯಾಚ್ ಕೈಚೆಲ್ಲಿದ್ದರು. ಅವರ ಫೀಲ್ಡಿಂಗ್ ವೈಫಲ್ಯದ ಬಗ್ಗೆ ಭಾರೀ ಟೀಕೆಗಳು ವ್ಯಕ್ತವಾಗಿತ್ತು. ಇನ್ನೊಂದೆಡೆ ಜೈಸ್ವಾಲ್ ಮೈದಾನದಲ್ಲಿ ನಡೆದುಕೊಂಡ ರೀತಿಯಿಂದಲೂ ಸಾಮಾಜಿಕ ತಾಣಗಳಲ್ಲಿ ಆಕ್ರೋಶಕ್ಕೆ ಗುರಿಯಾಗಿದ್ದರು. ಇಂಗ್ಲೆಂಡ್ ಗೆಲುವಿಗೆ 44 ರನ್ ಬೇಕಿದ್ದಾಗ ಬೌಂಡರಿ ಲೈನ್ ಬಳಿ ಇದ್ದ ಜೈಸ್ವಾಲ್, ಇಂಗ್ಲೆಂಡ್ ಅಭಿಮಾನಿಗಳನ್ನು ರಂಜಿಸಲು ನಗುತ್ತಲೇ ಡ್ಯಾನ್ಸ್ ಮಾಡಿದ್ದರು. ಇದು ಹಲವರ ಕೆಂಗಣ್ಣಿಗೆ ಗುರಿಯಾಗಿತ್ತು.
ಇದನ್ನೂ ಓದಿ IND vs ENG 2nd Test: ದ್ವಿತೀಯ ಟೆಸ್ಟ್‌ಗೂ ಮುನ್ನ ಟೀಮ್ ಇಂಡಿಯಾ ಸೇರಿದ ಯುವ ಸ್ಪಿನ್ನರ್