Karunadu Studio

ಕರ್ನಾಟಕ

The Rise of Ashoka: ಪ್ಯಾನ್‌ ಇಂಡಿಯಾ ಚಿತ್ರದ ಮೂಲಕ ಮೊದಲ ಬಾರಿಗೆ ಜೋಡಿಯಾದ ಸತೀಶ್‌ ನೀನಾಸಂ-ಸಪ್ತಮಿ ಗೌಡ; ʼದಿ ರೈಸ್ ಆಫ್ ಅಶೋಕʼ ಡಬ್ಬಿಂಗ್ ಪೂರ್ಣ – Kannada News | The Rise of Ashoka wraps filming


ಬೆಂಗಳೂರು: ಸ್ಯಾಂಡಲ್‌ವುಡ್‌ ನಟ, ಸತೀಶ್ ನೀನಾಸಂ (Sathish Ninasam) ಅಬಿನಯದ ಚಿತ್ರವೊಂದು ಬಹು ದಿನಗಳ ಬಳಿಕ ತೆರೆ ಕಾಣಲು ಸಜ್ಜಾಗಿದೆ. ಹೌದು ಸತೀಶ್‌ ಹೊಸ ರೀತಿಯ ಪಾತ್ರದಲ್ಲಿ ಕಾಣಿಸಿಕೊಂಡಿರುವ ಬಹು ನಿರೀಕ್ಷಿತ ಸಿನಿಮಾ ʼದಿ ರೈಸ್ ಆಫ್ ಅಶೋಕʼ (The Rise of Ashoka) ಈಗಾಗಲೇ ಸಿನಿಪ್ರೇಮಿಗಳಲ್ಲಿ ಕುತೂಹಲ ಮೂಡಿಸಿದೆ. ಈ ಚಿತ್ರವೀಗ ಡಬ್ಬಿಂಗ್ ಮುಗಿಸಿದೆ. ಬೆಂಗಳೂರಿನ ಆಕಾಶ್ ಸ್ಟುಡಿಯೋದಲ್ಲಿ ಚಿತ್ರದ ನಾಯಕ ಸತೀಶ್ ಹಾಗೂ ನಾಯಕಿ ಸಪ್ತಮಿ ಗೌಡ (Sapthami Gowda) ತಮ್ಮ ಪಾತ್ರಗಳಿಗೆ ಮಾತು ಪೊಣಿಸಿದ್ದಾರೆ.

ಡಬ್ಬಿಂಗ್ ಪೂರ್ಣಗೊಂಡ ಬಳಿಕ ಮಾಧ್ಯಮದವರೊಂದಿಗೆ ಸತೀಶ್ ನೀನಾಸಂ ಮಾತನಾಡಿ, ʼʼದಿ ರೈಸ್ ಆಫ್ ಅಶೋಕʼ ಸಿನಿಮಾದ ಚಿತ್ರೀಕರಣ, ಡಬ್ಬಿಂಗ್ ಪೂರ್ಣಗೊಂಡಿದೆ. ಆಕಾಶ್ ಸ್ಟುಡಿಯೋದಲ್ಲಿ ಡಬ್ಬಿಂಗ್‌ ಮುಗಿಸಿದ್ದೇವೆ. ಆನಂದ್ ಎಂಜಿನಿಯರ್ ನನ್ನ ಸಾಕಷ್ಟು ಚಿತ್ರಗಳಿಗೆ ಡಬ್ ಮಾಡಿದ್ದಾರೆ. ಈ ಜಾಗದಲ್ಲಿ ಡಬ್ ಮಾಡಿರುವುದು ಪಾಸಿಟಿವ್ ಎನರ್ಜಿ ಇದೆ. ಈ ಜಾಗದಲ್ಲಿ ಅಣ್ಣಾವ್ರು, ವಿಷ್ಣುವರ್ಧನ್‌ ಸೇರಿದಂತೆ ಹಲವರು ಇಲ್ಲಿಯೇ ಡಬ್ ಮಾಡಿದ್ದಾರೆ. ಕನ್ನಡ ಜತೆಗೆ ತೆಲುಗು ಹಾಗೂ ತಮಿಳು ಭಾಷೆಯಲ್ಲಿ ಸಿನಿಮಾ ಬಿಡುಗಡೆ ಮಾಡಲು ಪ್ಲಾನ್ ಮಾಡಿದ್ದೇವೆ. ಕನ್ನಡ ಭಾಷೆ ಡಬ್ಬಿಂಗ್ ಮುಗಿದಿದ್ದು, ಮುಂದಿನ ದಿನಗಳಲ್ಲಿ ತೆಲುಗು ಹಾಗೂ ತಮಿಳು ಶುರು ಮಾಡುತ್ತೇವೆʼʼ ಎಂದರು.

ನಟಿ ಸಪ್ತಮಿ ಗೌಡ ಮಾತನಾಡಿ, ʼʼತುಂಬಾ ಖುಷಿಯಾಗುತ್ತಿದೆ. ಯಾವುದೇ ಸಿನಿಮಾ ಶುರು ಮಾಡಿ ಅದರಲ್ಲಿಯೂ ಡಬ್ಬಿಂಗ್ ‌ಮುಗಿಸಿದಾಗ ನಟಿಯಾಗಿ ಪರಿಪೂರ್ಣ ಜವಾಬ್ದಾರಿ ನಿಭಾಯಿಸಿದೆ ಎನಿಸುತ್ತದೆ. ಈ ಚಿತ್ರದ ಅಂಬಿಕಾ ಎಂಬ ಪಾತ್ರ ಎಮೋಷನ್. ತುಂಬಾ ಇಸಿಯಾಗಿಯಾದ ಪಾತ್ರ. ನನ್ನನ್ನು ಚಿತ್ರ ತುಂಬಾ ಚೆನ್ನಾಗಿ ತೋರಿಸಿದ್ದಾರೆ. ಡಿಫರೆಂಟ್ ಅವತಾರದಲ್ಲಿ ಅಂಬಿಕಾ ಆಗಿ ನೀವು ನನ್ನನ್ನು ನೋಡುತ್ತೀರ. ʼದಿ ರೈಸ್ ಆಫ್ ಅಶೋಕʼ ಚಿತ್ರದ ಭಾಗವಾಗಿರುವುದು ಖುಷಿಯಾಗಿದೆʼʼ ಎಂದು ಹೇಳಿದರು.

ಈ ಸುದ್ದಿಯನ್ನೂ ಓದಿ: Ninasam Satish: 39 ನೇ ವಸಂತಕ್ಕೆ ಕಾಲಿಟ್ಟ ನೀನಾಸಂ ಸತೀಶ್‌; ನಟನ ಆರಂಭಿಕ ಜೀವನ ಹೇಗಿತ್ತು ಗೊತ್ತಾ?

ಅನ್ಯಾಯದ ವಿರುದ್ಧ ಹೋರಾಡುವ ಯುವಕನ ಬದುಕು

ʼದಿ ರೈಸ್ ಆಫ್ ಅಶೋಕʼ 70ರ ದಶಕದಲ್ಲಿ ಹಾಗೂ ಪ್ರಸ್ತುತ ಕಾಲಘಟ್ಟದಲ್ಲಿ ನಡೆಯುವ ಸಿನಿಮಾ. ಚಿತ್ರದಲ್ಲಿ ಸತೀಶ್ ನೀನಾಸಂ ಕ್ರಾಂತಿಕಾರಿ ಯುವಕನ ಪಾತ್ರಕ್ಕೆ ಜೀವ ತುಂಬಿದ್ದಾರೆ. ಅನ್ಯಾಯದ ವಿರುದ್ಧ ಹೋರಾಡುವ ಯುವಕನ ಬದುಕು ಹಾಗೂ ಸಂಘರ್ಷದ ಸುತ್ತಾ ಸಾಗುವ ಕಥೆಯೇ ʼದಿ ರೈಸ್ ಆಫ್ ಅಶೋಕʼ.

ಸತೀಶ್‌ಗೆ ಮೊದಲ ಬಾರಿ ಸಪ್ತಮಿ ಗೌಡ ಜೋಡಿ

ಚಿತ್ರದಲ್ಲಿ ಸತೀಶ್‌ಗೆ ಜೋಡಿಯಾಗಿ ʼಕಾಂತಾರʼ ಸಿನಿಮಾ ಖ್ಯಾತಿಯ ಸಪ್ತಮಿ ಗೌಡ ಮೊದಲ ಬಾರಿ ನಟಿಸಿದ್ದಾರೆ. ಬಿ.ಸುರೇಶ್, ಗೋಪಾಲಕೃಷ್ಣ ದೇಶಪಾಂಡೆ, ಸಂಪತ್ ಮೈತ್ರೇಯಾ, ಯಶ್ ಶೆಟ್ಟಿ, ವಿಕ್ರಮ್ ವೇದ ಖ್ಯಾತಿಯ ಹರೀಶ್ ಪೆರಾಡಿ ತಾರಾಬಳಗದಲ್ಲಿದ್ದಾರೆ.

ಸತೀಶ್ ವೃತ್ತಿಜೀವನದ ಬಿಗ್ ಬಜೆಟ್ ಚಿತ್ರ

ನಿರ್ದೇಶಕ ವಿನೋದ್ ದೊಂಡಾಲೆ ನಿಧನದ ನಂತರ ‘ಅಶೋಕ ಬ್ಲೇಡ್’ ಸಿನಿಮಾವನ್ನು ಸತೀಶ್ ನೀನಾಸಂ ‘ದಿ ರೈಸ್ ಆಫ್ ಅಶೋಕ’ ಹೆಸರಿನಲ್ಲಿ ಕೈಗೆತ್ತಿಕೊಂಡು ಬಿಡುಗಡೆ ಹಂತ ತಂದಿದ್ದರೆ. ಇದು ಸತೀಶ್ ಅವರ ವೃತ್ತಿಜೀವನದಲ್ಲೇ ಬಿಗ್ ಬಜೆಟ್ ಚಿತ್ರವಾಗಿದ್ದು, ದೊಡ್ಡ ಯಶಸ್ಸು ತಂದುಕೊಡುವ ನಿರೀಕ್ಷೆ ಕೂಡ ಇದೆ. ವೃದ್ಧಿ ಕ್ರಿಯೇಷನ್ ಹಾಗೂ ಸತೀಶ್ ಪಿಕ್ಚರ್ಸ್ ಹೌಸ್ ಪ್ರೊಡಕ್ಷನ್ ಅಡಿ ವರ್ಧನ್ ನರಹರಿ, ಜೈಷ್ಣವಿ ಜತೆ ಸೇರಿ ನೀನಾಸಂ ಸತೀಶ್ ಸಿನಿಮಾ ನಿರ್ಮಾಣ ಮಾಡಿದ್ದಾರೆ.

ʼದಿ ರೈಸ್ ಆಫ್ ಆಫ್ ಅಶೋಕʼನಿಗೆ ದಯಾನಂದ್ ಟಿ.ಕೆ. ಕಥೆ ಬರೆದಿದ್ದು, ಪೂರ್ಣಚಂದ್ರ ತೇಜಸ್ವಿ ಸಂಗೀತ ನಿರ್ದೇಶನ ಮಾಡಿದ್ದಾರೆ. ಲವಿತ್ ಕ್ಯಾಮರಾ ಹಿಡಿದಿದ್ದು, ಮನು ಶೇಡ್ಗಾರ್ ಸಂಕಲನದ ಜವಾಬ್ದಾರಿ ಹೊತ್ತಿದ್ದಾರೆ. ರವಿವರ್ಮಾ ಹಾಗೂ ವಿಕ್ರಮ್ ಮೋರ್ ಅವರು ಸಾಹಸ ನಿರ್ದೇಶನ ನಿರ್ವಹಿಸಿದರೆ, ಸಂತೋಷ್ ಶೇಖರ್ ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ. ಸಿನಿಮಾ ಬಿಡುಗಡೆ ದಿನಾಂಕ ಇನ್ನೂ ನಿರ್ಧರಿಸಿಲ್ಲ.



Source link

ADMIN

About Author

Leave a comment

Your email address will not be published. Required fields are marked *

You may also like

ಕರ್ನಾಟಕ

Microsoft: Empowering the Digital World

Microsoft is a global technology company known for shaping the modern digital experience. From its iconic Windows operating system to
ಕರ್ನಾಟಕ

Microsoft: Empowering the Digital World

Microsoft is a global technology company known for shaping the modern digital experience. From its iconic Windows operating system to
Translate »