Karunadu Studio

ಕರ್ನಾಟಕ

IND vs ENG: ಜಸ್‌ಪ್ರೀತ್‌ ಬುಮ್ರಾ ಇಲ್ಲ? ಎರಡನೇ ಟೆಸ್ಟ್‌ಗೆ ಇಬ್ಬರು ಸ್ಪಿನ್ನರ್‌ಗಳು! – Kannada News | IND vs ENG: No Bumrah, two spinners? India’s training session hints at playing XI for 2nd Test


ಬರ್ಮಿಂಗ್‌ಹ್ಯಾಮ್‌: ಭಾರತ ಮತ್ತು ಇಂಗ್ಲೆಂಡ್ ನಡುವಣ 5 ಪಂದ್ಯಗಳ ಟೆಸ್ಟ್ ಸರಣಿಯ(IND vs ENG) ಎರಡನೇ ಹಣಾಹಣಿ ಜುಲೈ 2 ರಂದು ಎಜ್‌ಬಾಸ್ಟನ್‌ ಸ್ಟೇಡಿಯಂನಲ್ಲಿ ಆರಂಭವಾಗಲಿದೆ. ಮೊದಲ ಟೆಸ್ಟ್‌ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್ ತಂಡ, ಟೀಮ್ ಇಂಡಿಯಾವನ್ನು 5 ವಿಕೆಟ್‌ಗಳಿಂದ ಸೋಲಿಸಿತ್ತು. ಆ ಮೂಲಕ ಇಂಗ್ಲೆಂಡ್ ಈ ಟೆಸ್ಟ್‌ ಸರಣಿಯಲ್ಲಿ 1-0 ಮುನ್ನಡೆಯನ್ನು ಪಡೆದಿದೆ. ಹಾಗಾಗಿ ಎರಡನೇ ಟೆಸ್ಟ್‌ ಪಂದ್ಯದಲ್ಲಿ ಭಾರತ ತಂಡ ಯಾವ ಪ್ಲೇಯಿಂಗ್‌ XIನೊಂದಿಗೆ ಕಣಕ್ಕೆ ಇಳಿಯಲಿದೆ ಎಂಬುದು ತೀವ್ರ ಕುತೂಹಲ ಕೆರಳಿಸಿದೆ. ಅಂದ ಹಾಗೆ ಎಜ್‌ಬಾಸ್ಟನ್‌ನಲ್ಲಿ ಭಾರತ ತಂಡ ಇಬ್ಬರು ಸ್ಪಿನ್ನರ್‌ಗಳೊಂದಿಗೆ ಆಡಬಹುದು ಎಂದು ನಿರೀಕ್ಷಿಸಲಾಗಿದೆ. ಭಾರತದ ಸಹಾಯಕ ಕೋಚ್ ರಯಾನ್‌ ಟೆನ್‌ ಡಶೆಟ್‌ (Ryan ten Doeschate) ಕೂಡ ಈ ಬಗ್ಗೆ ಸುಳಿವು ನೀಡಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಅವರ ಹೇಳಿಕೆಯ ಪ್ರಕಾರ, ವಾಷಿಂಗ್ಟನ್ ಸುಂದರ್, ಕುಲ್ದೀಪ್‌ ಯಾದವ್‌ಗಿಂತ ಹೆಚ್ಚಿನ ಅವಕಾಶ ಪಡೆಯಬಹುದು. ಏಕೆಂದರೆ ವಾಷಿಂಗ್ಟನ್‌ ಸುಂದರ್ ಅವರನ್ನು ಆಡಿಸುವುದರಿಂದ ಭಾರತಕ್ಕೆ ಬ್ಯಾಟಿಂಗ್‌ನಲ್ಲಿ ಬ್ಯಾಟಿಂಗ್‌ನಲ್ಲಿ ಇನ್ನಷ್ಟು ಡೆಪ್ತ್‌ ಸಿಗಲಿದೆ ಎಂಬುದು ಅವರ ಅಭಿಪ್ರಾಯ.

ಇಂಗ್ಲೆಂಡ್‌ನ ಬರ್ಮಿಂಗ್‌ಹ್ಯಾಮ್‌ ಹವಾಮಾನ ವರದಿಯ ಪ್ರಕಾರ ಜುಲೈ 1, 4 ಮತ್ತು 5ನೇ ದಿನಗಳಂದು ಮಳೆ ಬೀಳಲಿದೆ, ಆದರೆ ಎಜ್‌ಬಾಸ್ಟನ್ ಪಿಚ್‌ನ ಶುಷ್ಕ ಸ್ವಭಾವದಿಂದಾಗಿ ಭಾರತ ಇಬ್ಬರು ಸ್ಪಿನ್ನರ್‌ಗಳೊಂದಿಗೆ ಆಡಬೇಕಾಗಬಹುದು. ಎರಡನೇ ಸ್ಪಿನ್ನರ್ ಸ್ಥಾನಕ್ಕೆ ಕುಲ್‌ದೀಪ್ ಯಾದವ್ ಅವರಿಗಿಂತ ಸ್ಪಿನ್‌ ಆಲ್‌ರೌಂಡರ್‌ ವಾಷಿಂಗ್ಟನ್ ಸುಂದರ್ ಮುಂದಿದ್ದಾರೆ. ಏಕೆಂದರೆ ಇವರು ಬೌಲಿಂಗ್‌ ಜೊತೆಗೆ ಬ್ಯಾಟಿಂಗ್‌ನಲ್ಲಿ ತಂಡಕ್ಕೆ ಆಸರೆಯಾಗಬಲ್ಲರು.

IND vs ENG: ಜೋಫ್ರಾ ಆರ್ಚರ್‌ ಇಲ್ಲ, ಎರಡನೇ ಟೆಸ್ಟ್‌ಗೆ ಇಂಗ್ಲೆಂಡ್‌ನ ಪ್ಲೇಯಿಂಗ್‌ XI ಪ್ರಕಟ!

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಯಾನ್‌ ಟೆನ್‌ ಡಶೆಪ್‌, “ಇಬ್ಬರು ಸ್ಪಿನ್ನರ್‌ಗಳೊಂದಿಗೆ ಆಡುವ ಸಾಧ್ಯತೆ ತುಂಬಾ ಹೆಚ್ಚಾಗಿದೆ. ನಾವು ಯಾವ ಇಬ್ಬರು ಸ್ಪಿನ್ನರ್‌ಗಳೊಂದಿಗೆ ಆಡುತ್ತೇವೆ ಎಂಬುದು ಮುಖ್ಯ ಮತ್ತು ಅದು ಹಿಂದಿನ ಪ್ರಶ್ನೆಗೆ ಹಿಂತಿರುಗುತ್ತದೆ. ಮೂವರು ಸ್ಪಿನ್ನರ್‌ಗಳು ತುಂಬಾ ಚೆನ್ನಾಗಿ ಬೌಲ್‌ ಮಾಡುತ್ತಿದ್ದಾರೆ. ವಾಷಿ (ವಾಷಿಂಗ್ಟನ್ ಸುಂದರ್) ತುಂಬಾ ಚೆನ್ನಾಗಿ ಬ್ಯಾಟ್‌ ಮಾಡುತ್ತಿದ್ದಾರೆ. ಹಾಗಾದರೆ ನಾವು ಯಾವ ಸಂಯೋಜನೆಯೊಂದಿಗೆ ಆಡುತ್ತೇವೆ ಎಂಬುದು ಮುಖ್ಯ? ಆಲ್-ರೌಂಡರ್ ಸ್ಪಿನ್ನರ್ ಅಥವಾ ವಿಶೇಷ ಸ್ಪಿನ್ನರ್?,” ಎಂದು ಅವರು ಹೇಳಿದ್ದಾರೆ.

“ಖಂಡಿತ ನೀವು ಮತ್ತೆ ಬೌಲಿಂಗ್ ಆಲ್‌ರೌಂಡರ್‌ನೊಂದಿಗೆ ಆಡಬೇಕಾಗುತ್ತದೆ. ಪ್ಲೇಯಿಂಗ್‌XI ಬಗ್ಗೆ ಬಹಳಷ್ಟು ಗೊಂದಲಗಳಿವೆ. ಇಲ್ಲಿನ ಸಾಕಷ್ಟು ಹುಲ್ಲು ಮತ್ತು ತೇಪೆಯಿಂದ ಕೂಡಿದೆ ಮತ್ತು ಪಿಚ್‌ ಸಾಕಷ್ಟು ಒಣಗಿದೆ. ಆದರೆ ಬುಧವಾರ ಮಳೆಯ ಮುನ್ಸೂಚನೆಯೂ ಇದೆ. ಆದ್ದರಿಂದ ಮತ್ತೊಮ್ಮೆ ಬೌಲಿಂಗ್‌ ವಿಷಯದಲ್ಲಿ ನಾವು ಹೇಗೆ ಮುಂದುವರಿಯಲು ಬಯಸುತ್ತೇವೆ ಎಂಬುದರ ಕುರಿತು ನಾವು ಎರಡು ಆಯ್ಕೆಗಳನ್ನು ಪರಿಗಣಿಸುತ್ತಿದ್ದೇವೆ. ಆದರೆ ಈ ಟೆಸ್ಟ್‌ನಲ್ಲಿ ಇಬ್ಬರು ಸ್ಪಿನ್ನರ್‌ಗಳು ಆಡುತ್ತಾರೆ ಎಂದು ನನಗೆ ಖಚಿತವಾಗಿದೆ,” ಎಂದು ಸಹಾಯಕ ಕೋಚ್‌ ತಿಳಿಸಿದ್ದಾರೆ.

IND vs ENG: ರಾಹುಲ್‌ ದ್ರಾವಿಡ್‌ ದಾಖಲೆ ಮುರಿಯುವ ಸನಿಹದಲ್ಲಿ ಜೋ ರೂಟ್‌!

ಎರಡನೇ ಟೆಸ್ಟ್‌ಗೆ ಇಂಗ್ಲೆಂಡ್‌ ಪ್ಲೇಯಿಂಗ್‌ XI

1. ಝ್ಯಾಕ್‌ ಕ್ರಾವ್ಲಿ (ಆರಂಭಿಕ ಬ್ಯಾಟ್ಸ್‌ಮನ್‌)

2. ಬೆನ್‌ ಡಕೆಟ್‌ (ಆರಂಭಿಕ ಬ್ಯಾಟ್ಸ್‌ಮನ್‌)

3. ಒಲ್ಲಿ ಪೋಪ್‌ (ಬ್ಯಾಟ್ಸ್‌ಮನ್‌)

4. ಜೋ ರೂಟ್‌ (ಬ್ಯಾಟ್ಸ್‌ಮನ್‌)

5. ಹ್ಯಾರಿ ಬ್ರೂಕ್‌ (ಬ್ಯಾಟ್ಸ್‌ಮನ್‌)

6. ಬೆನ್‌ ಸ್ಟೋಕ್ಸ್‌ (ನಾಯಕ, ಆಲ್‌ರೌಂಡರ್‌)

7. ಜೇಮಿ ಸ್ಮಿತ್‌ (ವಿಕೆಟ್‌ ಕೀಪರ್‌)

8. ಕ್ರಿಸ್‌ ವೋಕ್ಸ್‌ (ವೇಗದ ಬೌಲಿಂಗ್‌ ಆಲ್‌ರೌಂಡರ್‌)

9. ಬ್ರೈಡನ್‌ ಕಾರ್ಸ್‌ (ವೇಗದ ಬೌಲರ್‌)

10. ಜಾಶ್‌ ಟಾಂಗ್‌ (ವೇಗದ ಬೌಲರ್‌)

11. ಶೋಯೆಬ್‌ ಬಷೀರ್‌ (ಸ್ಪಿನ್ನರ್‌)

IND vs ENG: ಕೆಎಲ್‌ ರಾಹುಲ್‌ಗೆ ಮಹತ್ವದ ಸಂದೇಶ ರವಾನಿಸಿದ ಸಂಜಯ್‌ ಮಾಂಜ್ರೇಕರ್‌!

ಪಂದ್ಯದ ವಿವರ

ಎರಡನೇ ಟೆಸ್ಟ್‌ ಪಂದ್ಯ

ಭಾರತ vs ಇಂಗ್ಲೆಂಡ್‌

ದಿನಾಂಕ: ಜುಲೈ 2 ರಿಂದ 6

ಸಮಯ: ಭಾರತೀಯ ಕಾಲಮಾನ ಮಧ್ಯಾಹ್ನ 03: 30ಕ್ಕೆ ಆರಂಭ

ಸ್ಥಳ: ಎಜ್‌ಬಾಸ್ಟನ್‌ ಸ್ಟೇಡಿಯಂ, ಬರ್ಮಿಂಗ್‌ಹ್ಯಾಮ್‌

ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌

ಲೈವ್‌ ಸ್ಟ್ರೀಮಿಂಗ್‌: ಡಿಸ್ನಿ ಹಾಟ್‌ಸ್ಟಾರ್‌



Source link

ADMIN

About Author

Leave a comment

Your email address will not be published. Required fields are marked *

You may also like

ಕರ್ನಾಟಕ

Microsoft: Empowering the Digital World

Microsoft is a global technology company known for shaping the modern digital experience. From its iconic Windows operating system to
ಕರ್ನಾಟಕ

Microsoft: Empowering the Digital World

Microsoft is a global technology company known for shaping the modern digital experience. From its iconic Windows operating system to
Translate »