Karunadu Studio

ಕರ್ನಾಟಕ

ಕೃಷಿ ವಿಜ್ಞಾನದಲ್ಲೂ ಮಹಿಳಾ ಪ್ರಾತಿನಿಧ್ಯ ಹೆಚ್ಚಿಸಲು ಕಾರ್ಟೆವಾ ಅಗ್ರಿಸೈನ್ಸ್ ಸಹಕಾರ – Kannada News | Corteva Agrisciences collaborates to increase women’s representation in agricultural science


ಬೆಂಗಳೂರು: ಎಲ್ಲಾ ಕ್ಷೇತ್ರದಲ್ಲೂ ಗುರುತಿಸಿಕೊಳ್ಳುತ್ತಿರುವ ಮಹಿಳೆಯರು ಕೃಷಿ ಕ್ಷೇತ್ರದಲ್ಲೂ ಸಹ ತಮ್ಮ ಛಾಪು ಮೂಡಿಸುವ ಮೂಲಕ ಗಮನಾರ್ಹ ಸಾಧನೆ ಮಾಡುತ್ತಿದ್ದಾರೆ. ಕರ್ನಾಟಕ ಮೂಲದ ಕೋಲಾರದ ರಶ್ಮಿ ಆರ್.. ಕಾರವಾರದ ಶ್ರೇಯಾ ಎಂಬ ಮಹಿಳೆಯರು ಉನ್ನತ ಶಿಕ್ಷಣ ಪಡೆದು, ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಾರೆ.

ಹೌದು, ಭಾರತದಲ್ಲಿ ಕೃಷಿ ಕಾರ್ಯಪಡೆಯ ಸುಮಾರು ಶೇ. 75 ರಷ್ಟಿದ್ದರೂ, ಕೃಷಿ ವಿಜ್ಞಾನದಲ್ಲಿ ಮಹಿಳೆಯರು ಗಮನಾರ್ಹವಾಗಿ ಕಡಿಮೆ ಪ್ರಾತಿನಿಧ್ಯ ಹೊಂದಿದ್ದಾರೆ. ಅವರ ಭಾಗವಹಿಸುವಿಕೆ ಹೆಚ್ಚಾಗಿ ಕಾರ್ಮಿಕ-ತೀವ್ರ, ಕಡಿಮೆ-ವೇತನದ ಪಾತ್ರಗಳಿಗೆ ಸೀಮಿತವಾಗಿದೆ. ಲಿಂಗ ಮಾನದಂಡಗಳು, ಮನೆಗಳಲ್ಲಿ ವೇತನ ರಹಿತ ಮತ್ತು ಆರೈಕೆ ಕೆಲಸ, ಮತ್ತು ಸಂಪನ್ಮೂಲ-ನಿರ್ಬಂಧಿತ ಪ್ರದೇಶಗಳಲ್ಲಿ ನೀರು ಮತ್ತು ನೈರ್ಮಲ್ಯವನ್ನು ವ್ಯವಸ್ಥೆ ಮಾಡುವ ಜವಾಬ್ದಾರಿ ಅವರಿಗೆ ಲಭ್ಯವಿರುವ ಅವಕಾಶ ಗಳನ್ನು ಮತ್ತಷ್ಟು ನಿರ್ಬಂಧಿಸಿದೆ. ಕೃಷಿ ವಿಜ್ಞಾನ ಕ್ಷೇತ್ರಗಳಲ್ಲಿ ಇದು ವಿಶೇಷವಾಗಿ ಸ್ಪಷ್ಟವಾಗಿದೆ, ಅಲ್ಲಿ ಕೃಷಿಯಲ್ಲಿ ತಾಂತ್ರಿಕ ಪ್ರಗತಿಗೆ ಅರ್ಥಪೂರ್ಣವಾಗಿ ಕೊಡುಗೆ ನೀಡುವ ಮಹಿಳೆಯರ ಸಾಮರ್ಥ್ಯ ಸೀಮಿತವಾಗಿದೆ.

ಇದನ್ನೂ ಓದಿ: Vishwavani Editorial: ಕೆನಡಾ ಸಂಬಂಧ ಸುಧಾರಣೆ

ಕೃಷಿ ವಿಶ್ವವಿದ್ಯಾಲಯಗಳಲ್ಲಿ ಸುಮಾರು 46% ಪದವಿಪೂರ್ವ ಮತ್ತು 49.5% ಸ್ನಾತಕೋತ್ತರ ಸೀಟುಗಳನ್ನು ಮಹಿಳೆಯರು ತುಂಬಿದ್ದಾರೆ. ಆದರೂ ಮುಖ್ಯಸ್ಥರ ಸಂಖ್ಯೆಯಲ್ಲಿನ ಸಮಾನತೆ ಕಾಣುತ್ತಿಲ್ಲ. ಕೃಷಿ ವಲಯದಲ್ಲಿ ಮಹಿಳೆಯರ ಪಾತ್ರ ಕೇವಲ ಬಿತ್ತನೆ, ಕಳೆ ತೆಗೆಯುವಿಕೆ ಮತ್ತು ಕೊಯ್ಲಿನ ನಂತರದ ಸಂಸ್ಕರಣೆಯಂತಹ ಕಡಿಮೆ-ವೇತನದ, ಕೂಲಿ ಕೆಲಸದಲ್ಲಷ್ಟೇ ನೋಡುತ್ತೇವೆ. ಸಂಶೋಧನಾ ಹುದ್ದೆ, ವಿಸ್ತರಣಾ ಉದ್ಯೋಗ ಮತ್ತು ತಂತ್ರಜ್ಞಾನ ಸ್ಟಾರ್ಟ್-ಅಪ್‌ ಸೇರಿದಂತೆ ಅನೇಕ ಪ್ರಮುಖ ಸ್ಥಾನಗಳು ಕೇವಲ ಪುರುಷ ಪ್ರಾಬಲ್ಯ ಹೊಂದಿವೆ.

ಇದಲ್ಲದೆ, ಸಣ್ಣ ಹಿಡುವಳಿದಾರ ಕೃಷಿ ಕುಟುಂಬಗಳ ಮಹಿಳೆಯರು ಸಾಂಪ್ರದಾಯಿಕ ಜ್ಞಾನ, ಪ್ರಾಯೋಗಿಕ ಅನುಭವ ಮತ್ತು ಪರಿಸರ, ಕೃಷಿಯಂತಹ ಕ್ಷೇತ್ರದಲ್ಲೂ ಉತ್ತಮ ತಿಳುವಳಿಕೆ ಹೊಂದಿ ದ್ದಾರೆ. ಅದಕ್ಕೆ ಉದಾಹರಣೆಯಾಗಿ ನಮ್ಮ ಕರ್ನಾಟಕದ ಹೆಣ್ಣುಮಕ್ಕಳೇ ನಿಂತಿದ್ದಾರೆ.

ಕರ್ನಾಟಕದ ಕೋಲಾರ ಮೂಲದ ರಶ್ಮಿ ಆರ್.ಪಿ. ಕೃಷಿ ಕ್ಷೇತ್ರದಲ್ಲಿ ಸಾಧನೆಗೈದು ಎಲ್ಲರ ಉಬ್ಬೇರಿಸಿ ದ್ದಾರೆ. ಅವರ ತಂದೆಯ ಸಣ್ಣ ತೋಟ ಕೊಯ್ಲಿನ ನಂತರ ನಷ್ಟ ಉಂಟಾಗಿತ್ತು. ಸಂಸ್ಕರಣೆ ಮತ್ತು ಆಹಾರ ಎಂಜಿನಿಯರಿಂಗ್‌ನಲ್ಲಿ ಎಂಟೆಕ್ ಪದವಿ ಪಡೆದಿರುವ ರಶ್ಮಿ, ಮಾವಿನ ಬೆಳೆಗಾರರಿಗೆ ತ್ಯಾಜ್ಯವನ್ನು ಕಡಿತಗೊಳಿಸಲು ಮತ್ತು ಕೃಷಿ ಆದಾಯವನ್ನು ಹೆಚ್ಚಿಸಲು ವರ್ಧಿತ-ರಿಯಾಲಿಟಿ ಪರಿಕರಗಳನ್ನು ಸಂಶೋಧಿಸುತ್ತಿದ್ದಾರೆ. ಕಾರ್ಟೆವಾ ಕೃಷಿ ವಿಜ್ಞಾನ ವಿದ್ಯಾರ್ಥಿವೇತನ ಕಾರ್ಯ ಕ್ರಮದ ಅಡಿಯಲ್ಲಿ ಅಗತ್ಯ-ಆಧಾರಿತ ವಿದ್ಯಾರ್ಥಿವೇತನದಿಂದ ಅವರ ಕೆಲಸ ಸಾಧ್ಯವಾಗಿದೆ.

ಅಂತೆಯೇ, ಕರ್ನಾಟಕದ ಕಾರವಾರ ಮೂಲದ ಶ್ರೇಯಾ, ತೋಟಗಾರಿಕೆ ಮತ್ತು ಔಷಧೀಯ ಬೆಳೆಗಳ ಮೇಲೆ ಕೇಂದ್ರೀಕರಿಸಿ ತೋಟಗಾರಿಕೆಯನ್ನು ಅಧ್ಯಯನ ಮಾಡುತ್ತಿದ್ದಾರೆ. “ನನ್ನ ಪದವಿಪೂರ್ವ ಅವಧಿಯಲ್ಲಿ, ನನಗೆ ರಾಜ್ಯ ಸರ್ಕಾರದ ವಿದ್ಯಾರ್ಥಿವೇತನ ಸಿಕ್ಕಿತು, ಅದು ನನ್ನ ಶೈಕ್ಷಣಿಕ ಪ್ರಯಾಣಕ್ಕೆ ಸಹಾಯ ಮಾಡಿತು.

ಆದಾಗ್ಯೂ, ನನ್ನ ಸ್ನಾತಕೋತ್ತರ ಪದವಿಯನ್ನು ಪ್ರವೇಶಿಸಿದ ನಂತರ, ಆರ್ಥಿಕ ಬೆಂಬಲ ಸಿಗಲಿಲ್ಲ. ನನ್ನ ತಂದೆಯ ಕೃಷಿಯಿಂದ ಬರುವ ಸಾಧಾರಣ ಆದಾಯವು ನನ್ನ ಉನ್ನತ ಅಧ್ಯಯನಕ್ಕೆ ಹಣಕಾಸು ಒದಗಿಸಲು ಸಾಕಾಗಲಿಲ್ಲ. ಈ ಸವಾಲಿನ ಸಮಯದಲ್ಲಿ, ಕಾರ್ಟೆವಾ ಅಗ್ರಿಸೈನ್ಸ್ ವಿದ್ಯಾರ್ಥಿವೇತನವು ನನ್ನ ಕೋರ್ಸ್ ಶುಲ್ಕದ ಒಂದು ಭಾಗವನ್ನು ಸರಿದೂಗಿಸುವಲ್ಲಿ ಗಮನಾರ್ಹ ಸಹಾಯವಾಗಿದೆ. ಕೃಷಿಯ ಮೇಲಿನ ಉತ್ಸಾಹದಿಂದ ಪ್ರೇರಿತವಾಗಿ, ರೈತರಿಗೆ ನವೀನ ತಂತ್ರಜ್ಞಾನ ಗಳನ್ನು ಪರಿಚಯಿಸುವ ಮೂಲಕ, ಉತ್ಪಾದಕತೆಯನ್ನು ಹೆಚ್ಚಿಸುವ ಮೂಲಕ ಮತ್ತು ಸಮುದಾ ಯದ ಬೆಳವಣಿಗೆಯನ್ನು ಬೆಂಬಲಿಸುವ ಮೂಲಕ ಸಂಶೋಧನೆ ಮತ್ತು ಅಭ್ಯಾಸದ ನಡುವಿನ ಅಂತರವನ್ನು ಕಡಿಮೆ ಮಾಡಲು ನಾನು ಆಶಿಸುತ್ತೇನೆ ಎಂದು ಹೇಳಿದರು.”

ಉದ್ದೇಶಿತ ಆರ್ಥಿಕ ನೆರವಿನ ಅಗತ್ಯವನ್ನು ದಕ್ಷಿಣ ಏಷ್ಯಾದ ಕಾರ್ಟೆವಾ ಅಗ್ರಿಸೈನ್ಸ್ ಅಧ್ಯಕ್ಷ ಸುಬ್ರೋಟೊ ಗೀದ್ ಅವರು ನೀಗಿಸುತ್ತಾ ಬಂದಿದ್ದಾರೆ. ಈ ಕುರಿತು ಮಾತನಾಡಿದ ಅವರು,” ಬೋಧನಾ ಮತ್ತು ಹಾಸ್ಟೆಲ್ ವೆಚ್ಚಗಳು ತಮ್ಮ ಕುಟುಂಬದ ಆದಾಯವನ್ನು ಮೀರಿದಾಗ ಅನೇಕ ಹೆಣ್ಣುಮಕ್ಕಳು ಉನ್ನತ ಶಿಕ್ಷಣವನ್ನು ತ್ಯಜಿಸುತ್ತಾರೆ. ಮೆರಿಟ್ ಮೇಲಿನ ವಿದ್ಯಾರ್ಥಿ ವೇತನಗಳನ್ನು ವಿಸ್ತರಿಸುವುದು, ಮೊದಲ ತಲೆಮಾರಿನ ಮಹಿಳಾ ವಿದ್ಯಾರ್ಥಿಗಳಿಗೆ ಸೀಟುಗಳನ್ನು ಕಾಯ್ದಿರಿಸುವುದು ಮತ್ತು ಸಮುದಾಯ ಆಧಾರಿತ ಇಂಟರ್ನ್‌ಶಿಪ್‌ಗಳನ್ನು ನೀಡುವುದು ನಮ್ಮ ಉದ್ದೇಶ.

ಸಂಶೋಧನೆ ಮತ್ತು ನಾವೀನ್ಯತೆಯನ್ನು ಮುನ್ನಡೆಸಲು ಅವರನ್ನು ಸಬಲೀಕರಣಗೊಳಿಸುವುದು ನಮ್ಮ “2 ಮಿಲಿಯನ್ ಮಹಿಳೆಯರು ಕೃಷಿ ಕಾರ್ಯಕ್ರಮ”ದ ಕೇಂದ್ರವಾಗಿದೆ. ಉದ್ಯಮಶೀಲತೆ, ಶಿಕ್ಷಣ ಮತ್ತು ಹವಾಮಾನ-ಸ್ಮಾರ್ಟ್ ಕೃಷಿಯಲ್ಲಿ ಉದ್ದೇಶಿತ ಬೆಂಬಲದ ಮೂಲಕ, 2030 ರ ವೇಳೆಗೆ ಭಾರತದಾದ್ಯಂತ ಎರಡು ಮಿಲಿಯನ್ ಮಹಿಳೆಯರನ್ನು ಕೃಷಿಯಲ್ಲಿ ಸಬಲೀಕರಣಗೊಳಿಸುವ ಗುರಿಯನ್ನು ನಾವು ಹೊಂದಿದ್ದೇವೆ ಎಂದರು



Source link

ADMIN

About Author

Leave a comment

Your email address will not be published. Required fields are marked *

You may also like

ಕರ್ನಾಟಕ

Microsoft: Empowering the Digital World

Microsoft is a global technology company known for shaping the modern digital experience. From its iconic Windows operating system to
ಕರ್ನಾಟಕ

Microsoft: Empowering the Digital World

Microsoft is a global technology company known for shaping the modern digital experience. From its iconic Windows operating system to
Translate »