Karunadu Studio

ಕರ್ನಾಟಕ

Pralhad Joshi: ಹುಬ್ಬಳ್ಳಿಯ ಕಿಮ್ಸ್‌ಗೆ 30 ಲಕ್ಷ ರೂ. ವೆಚ್ಚದ ಅತ್ಯಾಧುನಿಕ ಯಂತ್ರ ವಿತರಿಸಿದ ಪ್ರಲ್ಹಾದ್‌ ಜೋಶಿ – Kannada News | Pralhad Joshi Union Minister Pralhad Joshi inaugurated DIGIPLA 90 THERAPEUTIC PLASMA EXCHANGE TPE machine


ಹುಬ್ಬಳ್ಳಿ: ಹುಬ್ಬಳ್ಳಿಯ ಕಿಮ್ಸ್‌ ಆಸ್ಪತ್ರೆಗೆ ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ (‌Pralhad Joshi) ಅವರು ಸಿಎಸ್‌ಆರ್‌ ಅನುದಾನಡಿ ₹30 ಲಕ್ಷ ವೆಚ್ಚದ ಅತ್ಯಾಧುನಿಕ ಯಂತ್ರಗಳನ್ನು ವಿತರಿಸಿದರು. ಚೆನ್ನೈನ ಸಾನುಮ್ ಸ್ಯಾಂಗಿನಿಯಾಸ್ ಸಲೂಶನ್ ಪ್ರೈ.ಲಿ. ಅವರ ಸಿಎಸ್ಆರ್ ಅನುದಾನದಡಿ ಒದಗಿಸಿದ DIGIPLA 90-THERAPEUTIC PLASMA EXCHANGE (TPE) ಯಂತ್ರವನ್ನು ಸಚಿವರು, ಸೋಮವಾರ ಸಂಜೆ ಕಿಮ್ಸ್‌ಗೆ ವಿತರಿಸಿ, ಅದರ ಉದ್ಘಾಟನೆ ನೆರವೇರಿಸಿದರು.‌ ಈ ವೇಳೆ ಮಾತನಾಡಿದ ಅವರು, ಈ ಯಂತ್ರವು ರಕ್ತದಿಂದ ಪ್ಲಾಸ್ಮಾವನ್ನು ಬೇರ್ಪಡಿಸಿ, ರೋಗಕಾರಕ ಅಂಶಗಳನ್ನು ತೆಗೆದುಹಾಕಲು ಮತ್ತು ಆರೋಗ್ಯಕರ ರಕ್ತ ಕಣಗಳನ್ನು ರೋಗಿಯ ದೇಹಕ್ಕೆ ಮರಳಿಸಲು ಅನುಕೂಲವಾಗಲಿದೆ ಎಂದು ಹೇಳಿದರು.

ಕಿಮ್ಸ್‌ ಆಸ್ಪತ್ರೆ ಉತ್ತರ ಕರ್ನಾಟಕದ ಬಡವರ ಪಾಲಿಗೆ ಸಂಜೀವಿನಿಯಂತಿದ್ದು, ಇಲ್ಲಿದರ ಅವಶ್ಯಕತೆ ಮನಗಂಡು ಸಿಎಸ್ಆರ್ ಅನುದಾನದಡಿ ಒದಗಿಸಲಾಗಿದೆ. ಗ್ರಾಮೀಣ ಪ್ರದೇಶದಿಂದ ಕಡುಬಡವರೇ ಹೆಚ್ಚು ಬರುವ ಇಲ್ಲಿ ರೋಗಿಗಳಿಗೆ ಆಧುನಿಕ ರಕ್ತ ಪರೀಕ್ಷೆ ಸಾಧನ, ಯಂತ್ರಗಳು ಲಭ್ಯವಾಗಬೇಕು ಎಂಬ ಉದ್ದೇಶದಿಂದ ಕಿಮ್ಸ್‌ಗೆ ಈ ಆಧುನಿಕ ಯಂತ್ರವನ್ನು ಕೊಡಮಾಡಲಾಗಿದೆ ಎಂದು ಹೇಳಿದರು.

ಈ ಸುದ್ದಿಯನ್ನೂ ಓದಿ | RRB Recruitment 2025: 10, 12ನೇ ತರಗತಿ ಪಾಸಾದವರಿಗೆ ಗುಡ್‌ನ್ಯೂಸ್; ರೈಲ್ವೆ ನೇಮಕಾತಿ ಮಂಡಳಿಯಿಂದ 6,238 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

ಈ ಸಂದರ್ಭದಲ್ಲಿ ವಿಧಾನಸಭೆ ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ್‌, ಶಾಸಕ ಮಹೇಶ ತೆಂಗಿನಕಾಯಿ ಹಾಗೂ ಕಿಮ್ಸ್‌ ಆಡಳಿತ ಮಂಡಳಿ ಅಧಿಕಾರಿಗಳು, ವೈದ್ಯಾಧಿಕಾರಿಗಳು, ಸಾನುಮ್ ಸ್ಯಾಂಗಿನಿಯಾಸ್ ಸಲೂಶನ್ ಕಂಪನಿ ಅಧಿಕಾರಿಗಳು ಉಪಸ್ಥಿತರಿದ್ದರು.



Source link

ADMIN

About Author

Leave a comment

Your email address will not be published. Required fields are marked *

You may also like

ಕರ್ನಾಟಕ

Microsoft: Empowering the Digital World

Microsoft is a global technology company known for shaping the modern digital experience. From its iconic Windows operating system to
ಕರ್ನಾಟಕ

Microsoft: Empowering the Digital World

Microsoft is a global technology company known for shaping the modern digital experience. From its iconic Windows operating system to
Translate »