Karunadu Studio

ಕರ್ನಾಟಕ

BBK 12: ಮುಂದಿನ 4 ಸೀಸನ್ ಮಾತ್ರವಲ್ಲ: ಬಿಗ್ ಬಾಸ್​ನಲ್ಲಿ ಕಿಚ್ಚನ ನಿರೂಪಣೆ ಎಷ್ಟು ಸೀಸನ್ ವರೆಗೆ ಇರುತ್ತೆ ಗೊತ್ತೇ? – Kannada News | Kiccha Sudeep host not only next 4 bigg boss kannada season


ಕನ್ನಡದ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಇದೀಗ ಹೊಸ ಸೀಸನ್​ಗೆ ತಯಾರಿ ನಡೆಸುತ್ತಿದೆ. ಬಿಗ್‌ ಬಾಸ್‌ ಕನ್ನಡ 11 ಸೀಸನ್​ನ (Bigg Boss Kannada 11) ನಂತರ ಇದೀಗ 12ನೇ ಆವೃತ್ತಿಯ ಕೆಲಸಗಳು ನಡೆಯುತ್ತಿದೆ. ಹಿಂದಿನ ಸೀಸನ್ ಯಶಸ್ವಿಯಾದ ಬಳಿಕ ನಟ ಕಿಚ್ಚ ಸುದೀಪ್ ಅವರು ಬಿಗ್ ಬಾಸ್ ಗೆ ಅಧಿಕೃತವಾಗಿ ಗುಡ್ ಬೈ ಹೇಳಿದ್ದರು. ಇದೇ ನನ್ನ ಕೊನೆಯ ಸೀಸನ್ ಎಂದು ಅನೌನ್ಸ್ ಮಾಡಿ ಬಿಟ್ಟಿದ್ದರು. ಇದು ವೀಕ್ಷಕರು ಹಾಗೂ ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿತ್ತು.

ಈ ಬಗ್ಗೆ ಸುದೀಪ್‌ ಅವರೇ ಸಾಮಾಜಿಕ ಜಾಲತಾಣದಲ್ಲಿ ಭಾವನಾತ್ಮಕ ಪೋಸ್ಟ್ ಹಂಚಿಕೊಂಡಿದ್ದನ್ನ ಕಂಡ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದರು, ಬಿಗ್‌ ಬಾಸ್‌ ನಿರೂಪಣೆಯನ್ನ ಕಿಚ್ಚ ಸುದೀಪ್‌ ಅವರೇ ನಡೆಸಿಕೊಡಬೇಕು ಎಂದು ಅಭಿಮಾನಿಗಳು ಬಹಿರಂಗವಾಗಿ ಬೇಡಿಕೆ ಇಟ್ಟಿದ್ದರು. ಇದಕ್ಕೆ ಕಲರ್ಸ್ ಆಯೋಜಿಸಿದ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟನೆ ಸಿಕ್ಕಿದೆ. ಸುದೀಪ್ ಅವರೇ ಮುಂದಿನ ಸೀಸನ್​ನಲ್ಲೂ ನಿರೂಪಕರಾಗಲಿದ್ದಾರೆ.

ಆದರೆ, 12ನೇ ಸೀಸನ್ ಆದ ಬಳಿಕ 13ನೇ ಸೀಸನ್​ಗೆ ಯಾರು ಸಾರಥಿ ಎಂಬ ಪ್ರಶ್ನೆ ಉದ್ಭವಿಸಿದೆ. ಇದಕ್ಕೆ ಸ್ವತಃ ಕಿಚ್ಚ ಸುದೀಪ್ ಅವರೇ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟನೆ ನೀಡಿದ್ದಾರೆ. ಮುಂದಿನ 4 ಸೀಸನ್ ವರೆಗೂ ನಾನೇ ನಿರೂಪಕನಾಗಿರುತ್ತೇವೆ.. ಆರೀತಿಯ ಅಗ್ರಿಮೆಂಟ್ ಮಾಡಿದ್ದೇವೆ ಎಂದು ಹೇಳಿದ್ದಾರೆ. ಇದೇವೇಳೆ ಪತ್ರಕರ್ತರೊಬ್ಬರು ಮುಂದಿನ 4 ಸೀಸನ್ ಮುಗಿದ ಬಳಿಕ ಯಾರು ನಿರೂಪಕರು ಎಂದು ಕೇಳಿದರು. ಇದಕ್ಕೂ ಕಿಚ್ಚ ಸುದೀಪ್ ಉತ್ತರಿಸಿದ್ದು, ಅವಾಗಲೂ ನಾನೇ ಇರುತ್ತೇನೆ ಎಂದು ಹೇಳಿದ್ದಾರೆ.

BBK 12: ಪ್ರೆಸ್ಮೀಟ್ ಬೆನ್ನಲ್ಲೇ ಹೊರಬಿತ್ತು ಈ ಬಾರಿ ಬಿಗ್ ಬಾಸ್ ಮನೆಗೆ ಹೋಗುವವರ ಲಿಸ್ಟ್

ಇನ್ನು ಬಿಗ್ ಬಾಸ್ ನಿರೂಪಣೆ ಮಾಡಲ್ಲ ಅಂತ ಯಾಕೆ ಹೇಳಿದೆ ಎಂದು ಕಿಚ್ಚ ಸುದೀಪ್ ಕ್ಲಾರಿಟಿ ಕೊಟ್ಟಿದ್ದಾರೆ. ತಾನೇಕೆ ಬಿಗ್ ಬಾಸ್ ಕನ್ನಡ ನಿರೂಪಣೆ ಮಾಡುವುದಕ್ಕೆ ಹಿಂದೇಟು ಹಾಕಿದೆ ಎನ್ನುವುದನ್ನು ರಿವೀಲ್ ಮಾಡಿದ್ದಾರೆ. ಅದು ನಾನು ಯಾವುದೇ ಪಾರ್ಟಿ ಮಾಡುತ್ತಾ ಮಾಡಿದ ಟ್ವೀಟ್ ಅಲ್ಲ. ಅದಕ್ಕೆ ಸಂಜೆಯೋ, ಮಧ್ಯಾಹ್ನವೋ ಇನ್ನೊಂದು ಟ್ವೀಟ್ ಮಾಡಿದೆ. ನಾನು ಟ್ವೀಟ್ ಮಾಡಿದಾಗ ಅದು ಬೆದರಿಕೆ ಆಗಿರಲಿಲ್ಲ. ಅದು ಎಚ್ಚರಿಕೆನೂ ಆಗಿರಲಿಲ್ಲ. ಅದು ನನ್ನ ಭಾವನೆಯಾಗಿತ್ತು. ನನ್ನ ಅನುಭವವನ್ನು ಪ್ರಪಂಚದ ಜೊತೆ ಹೇಳಿಕೊಳ್ಳಬೇಕಿತ್ತು ಎಂದು ಹೇಳಿದ್ದಾರೆ.

ನಮಗೆ ವಾಹಿನಿಯಿಂದ ಯಾವುದೇ ಕೊರತೆ ಬಂದಿಲ್ಲ. ಆದರೆ, ಮೇಲಿನಿಂದ ನನಗೆ ಆ ಪ್ರೀತಿ ಕಾಣಿಸುತ್ತಿರಲಿಲ್ಲ. ನಾನು ಯಾರನ್ನೂ ದೂರುತ್ತಿಲ್ಲ. ಇದು ನನ್ನ ವೈಯಕ್ತಿಕ. ಬೇರೆ ಭಾಷೆಗೆ ತೋರಿದ ಪ್ರೀತಿ ಕನ್ನಡದ ವಾಹಿನಿಯಲ್ಲಿ ಕಷ್ಟು ಪಟ್ಟು ಕೆಲಸ ಮಾಡುವವರಿಗೆ ಸಿಗುತ್ತಿದೆ ಅಂತ ನನಗೆ ಅನಿಸಲಿಲ್ಲ. ನಾನು ಜಾಸ್ತಿ ತಿದ್ದೋ ವ್ಯಕ್ತಿ ಅಲ್ಲ. ತಿದ್ದುಕೊಳ್ಳುವ ವ್ಯಕ್ತಿ ಎಂಬುದು ಕಿಚ್ಚ ಸುದೀಪ್ ಮಾತು.



Source link

ADMIN

About Author

Leave a comment

Your email address will not be published. Required fields are marked *

You may also like

ಕರ್ನಾಟಕ

Microsoft: Empowering the Digital World

Microsoft is a global technology company known for shaping the modern digital experience. From its iconic Windows operating system to
ಕರ್ನಾಟಕ

Microsoft: Empowering the Digital World

Microsoft is a global technology company known for shaping the modern digital experience. From its iconic Windows operating system to
Translate »