Karunadu Studio

ಕರ್ನಾಟಕ

Narayana Murthy : “70 ಗಂಟೆ ಕೆಲಸ” ಹೇಳಿಕೆ ವಾಪಾಸ್‌? ನೌಕರರಿಗೆ ಕಡಿಮೆ ಕೆಲಸ, ಆರೋಗ್ಯ ಮೊದಲು ಎಂದ ಇನ್ಫೋಸಿಸ್‌! – Kannada News | Narayana Murthy asked Indians to work 70 hrs, now Infosys seeks work-life balance and tells staff no overtime


ಬೆಂಗಳೂರು: ವಾರಕ್ಕೆ 70 ಗಂಟೆ ಕೆಲಸ ಮಾಡಬೇಕೆಂದು ಹೇಳಿದ್ದ ಇನ್ಫೋಸಿಸ್ ಸಂಸ್ಥೆಯ ಸಹ ಸಂಸ್ಥಾಪಕ ನಾರಾಯಣಮೂರ್ತಿ (Narayana Murthy) ಈಗ ಉದ್ಯೋಗಿಗಳ ಯೋಗಕ್ಷೇಮದ ಬಗ್ಗೆ ಮಾತನಾಡಿದ್ದಾರೆ. ನಾರಾಯಣ ಮೂರ್ತಿ ಅವರ ಒಡೆತನದ ಇನ್ಫೋಸಿಸ್ (Infosys) ತನ್ನ ಉದ್ಯೋಗಿಗಳಿಗೆ ಕೆಲಸ ಹಾಗೂ ಜೀವನದ ಸಮತೋಲನವನ್ನು ಕಾಯ್ದುಕೊಳ್ಳುವಂತೆ ಕೇಳಿಕೊಳ್ಳುತ್ತಿದೆ. ಸಂಸ್ಥೆಯು ಆಂತರಿಕ ಅಭಿಯಾನವನ್ನು ಪ್ರಾರಂಭಿಸಿದೆ ಎಂದು ವರದಿಯಾಗಿದೆ. ಇದರಲ್ಲಿ ಇದರಲ್ಲಿ HR, ನೌಕರರು ಕಚೇರಿ ಕೆಲಸದಲ್ಲಿ ಕಳೆಯುವ ಸಮಯವನ್ನು ಟ್ರ್ಯಾಕ್ ಮಾಡುತ್ತಾರೆ ಎಂದು ತಿಳಿದು ಬಂದಿದೆ.

ಕಂಪನಿಯು ಪ್ರಮಾಣಿತ ಮಿತಿಯನ್ನು ಮೀರಿದ ಕೆಲಸದ ಸಮಯವನ್ನು ಹೊಂದಿರುವ ಉದ್ಯೋಗಿಗಳಿಗೆ ವೈಯಕ್ತಿಕಗೊಳಿಸಿದ ಇಮೇಲ್‌ಗಳನ್ನು ಸಹ ಕಳುಹಿಸುತ್ತಿದೆ, ನಿಯಮಿತ ವೇಳಾಪಟ್ಟಿಗಳನ್ನು ಪಾಲಿಸಲು ಮತ್ತು ಅವರ ಆರೋಗ್ಯವನ್ನು ನೋಡಿಕೊಳ್ಳಲು ಒತ್ತಾಯಿಸುತ್ತಿದೆ. ವಾರಕ್ಕೆ ಐದು ದಿನಗಳು, ದಿನಕ್ಕೆ ಸರಾಸರಿ 9.15 ಗಂಟೆಗಳಿಗಿಂತ ಹೆಚ್ಚಿನ ಕಾಲ ಕೆಲಸ ಮಾಡುವ ಉದ್ಯೋಗಿಗಳಿಗೆ ಆರೋಗ್ಯ ಜ್ಞಾಪನೆ ಇಮೇಲ್‌ಗಳನ್ನು ಕಳುಹಿಸುತ್ತದೆ. ಈ ಇಮೇಲ್‌ಗಳು ಕೆಲಸ-ಜೀವನದ ಸಮತೋಲನವನ್ನು ಕಾಪಾಡಿಕೊಳ್ಳುವ ಮಹತ್ವವನ್ನು ಎತ್ತಿ ತೋರಿಸುತ್ತವೆ.

ವೈಯಕ್ತಿಕ ಯೋಗಕ್ಷೇಮಕ್ಕೆ ಮಾತ್ರವಲ್ಲದೆ ದೀರ್ಘಕಾಲೀನ ವೃತ್ತಿಪರ ಪರಿಣಾಮಕಾರಿತ್ವಕ್ಕೂ ಇದು ಅತ್ಯಗತ್ಯ ಎಂದು ಕಂಪನಿಯು ಕರೆ ನೀಡಿದೆ. ಇನ್ಫೋಸಿಸ್ ಉದ್ಯೋಗಿಗಳಿಗೆ ನಿಯಮಿತವಾಗಿ ವಿರಾಮಗಳನ್ನು ತೆಗೆದುಕೊಳ್ಳಲು, ಹಾಗೂ ಒತ್ತಡವನ್ನು ನಿಭಾಯಿಸಲು ಕಲಿಯಿರಿ ಎಂದು ಹೇಳಿದೆ. ಇನ್ಫೋಸಿಸ್ ಹೈಬ್ರಿಡ್ ಕೆಲಸದ ಮಾದರಿಯನ್ನು ಅಳವಡಿಸಿಕೊಂಡ ನಂತರ ನೌಕರರ ಆರೋಗ್ಯಕ್ಕೆ ಆದ್ಯತೆ ನೀಡುವ ಈ ಹೊಸ ಉಪಕ್ರಮವನ್ನು ಜಾರಿಗೆ ತರಲಾಗಿದೆ.

ಕಳಪೆ ನಿದ್ರೆ, ಅನಿಯಮಿತ ಊಟ ಮತ್ತು ಅತಿಯಾದ ಕೆಲಸದಿಂದಾಗಿ ಹೃದಯ ಸಂಬಂಧಿತ ಕಾಯಿಲೆಗಳು ಸೇರಿದಂತೆ ಹೆಚ್ಚಿನ ಕಾಯಿಲೆಗಳು ಉದ್ಯೋಗಳನ್ನು ಕಾಡುತ್ತಿದೆ. 323,000 ಕ್ಕೂ ಹೆಚ್ಚು ಉದ್ಯೋಗಿಗಳನ್ನು ಹೊಂದಿರುವ ಇನ್ಫೋಸಿಸ್ ಈಗ ಅಂತಹ ಅಪಾಯಗಳನ್ನು ಎದುರಿಸಲು ಪೂರ್ವಭಾವಿ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. “ನಿಮ್ಮ ಬದ್ಧತೆಯನ್ನು ನಾವು ಪ್ರಶಂಸಿಸುತ್ತೇವೆ, ಆದರೆ ಆರೋಗ್ಯಕರ ಕೆಲಸ-ಜೀವನದ ಸಮತೋಲನವನ್ನು ಕಾಪಾಡಿಕೊಳ್ಳುವುದು ನಿಮ್ಮ ಯೋಗಕ್ಷೇಮ ಮತ್ತು ದೀರ್ಘಕಾಲೀನ ವೃತ್ತಿಪರ ಯಶಸ್ಸಿಗೆ ನಿರ್ಣಾಯಕವಾಗಿದೆ ಎಂದು ನಾವು ನಂಬುತ್ತೇವೆ” ಎಂದು ಉದ್ಯೋಗಿಗಳಿಗೆ ಇನ್ಫೋಸಿಸ್‌ ತಿಳಿಸಿದೆ.

ಈ ಸುದ್ದಿಯನ್ನೂ ಓದಿ:Sudha Murty: “ವಾರಕ್ಕೆ 70 ಗಂಟೆ ಕೆಲಸ” ; ಪತಿ ನಾರಾಯಣ ಮೂರ್ತಿ ಹೇಳಿಕೆಗೆ ಸುಧಾ ಮೂರ್ತಿ ಪ್ರತಿಕ್ರಿಯೆ ನೀಡಿದ್ದೇನು?

ಈ ಹಿಂದೆ ಕೋಲ್ಕತ್ತಾದಲ್ಲಿ ಮಾತನಾಡಿದ್ದ ನಾರಾಯಣ ಮೂರ್ತಿ, ದೇಶದ ಯುವಜನತೆ ಶ್ರಮಿಸಬೇಕು, ಭಾರತವನ್ನು ನಂಬರ್ 1 ಮಾಡುವುದರೆಡೆಗೆ, ಜೊತೆಗೆ ತಾವೂ ಬಡತನದಿಂದ ಹೊರಬರಲು ವಾರಕ್ಕೆ 70 ಗಂಟೆ ಕೆಲಸ ಮಾಡಬೇಕು ಎಂದು ಹೇಳಿದ್ದರು. ಅದು ಭಾರೀ ಚರ್ಚೆಗೆ ಕಾರಣವಾಗಿತ್ತು. ಹಲವು ಉದ್ಯಮಿಗಳು ಈ ಹೇಳಿಕೆಯನ್ನು ವಿರೋಧಿಸಿದ್ದರು.



Source link

ADMIN

About Author

Leave a comment

Your email address will not be published. Required fields are marked *

You may also like

ಕರ್ನಾಟಕ

Microsoft: Empowering the Digital World

Microsoft is a global technology company known for shaping the modern digital experience. From its iconic Windows operating system to
ಕರ್ನಾಟಕ

Microsoft: Empowering the Digital World

Microsoft is a global technology company known for shaping the modern digital experience. From its iconic Windows operating system to
Translate »