Karunadu Studio

ಕರ್ನಾಟಕ

IIT Bombay: ಐಐಟಿ ಬಾಂಬೆ ಕ್ಯಾಂಪಸ್‌ನಲ್ಲಿ 14 ದಿನ ವಾಸ್ತವ್ಯ ಹೂಡಿದ್ದ ನಕಲಿ ವಿದ್ಯಾರ್ಥಿ! ಪತ್ತೆಯಾಗಿದ್ದು ಹೇಗೆ? – Kannada News | Fake Student: Fake student stayed on IIT Bombay campus for 14 days


ಮುಂಬೈ: ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಬಾಂಬೆ (Indian Institute of Technology Bombay) ಕ್ಯಾಂಪಸ್‌ನಲ್ಲಿ ನಕಲಿ ವಿದ್ಯಾರ್ಥಿಯೊಬ್ಬ (Fake Student) 14 ದಿನಗಳ ಕಾಲ ವಾಸ್ತವ್ಯ ಮಾಡಿದ್ದು ಆತ ಈಗ ಪೊಲೀಸರ ಅತಿಥಿಯಾಗಿದ್ದಾನೆ. 22 ವರ್ಷದ ಬಿಲಾಲ್ ಅಹ್ಮದ್ ಟೆಲಿ ಬಂಧಿಸಲ್ಪಟ್ಟ ಯುವಕ. ಹೆಚ್ಚಿನ ಭದ್ರತೆ ಇದ್ದರೂ ಅದನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದ ಬಿಲಾಲ್ ಹಲವು ದಿನಗಳಿಂದ ಕಾಲೇಜ್ ಕ್ಯಾಂಪಸ್‌ನಲ್ಲಿ ವಿದ್ಯಾರ್ಥಿಯಂತೆ ನಟಿಸುತ್ತಿದ್ದ. ಜೂನ್ 26ರಂದು ಐಐಟಿ ಬಾಂಬೆಯ ಉದ್ಯೋಗಿಯೊಬ್ಬರು ಬಿಲಾಲ್ ಸೋಫಾದ ಮೇಲೆ ಮಲಗಿರುವುದನ್ನು ನೋಡಿದ ಮೇಲೆ ಪ್ರಕರಣ ಬೆಳಕಿಗೆ ಬಂದಿದೆ.

ಬಿಲಾಲ್ ಅಹ್ಮದ್ ಟೆಲಿ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಬಾಂಬೆ (ಐಐಟಿ ಬಾಂಬೆ) ಕ್ಯಾಂಪಸ್‌ನಲ್ಲಿ ವಿದ್ಯಾರ್ಥಿಯಂತೆ ನಟಿಸುತ್ತಿದ್ದ. ಕಳೆದ ಹಲವು ದಿನಗಳಿಂದ ಆತ ಕಾಲೇಜ್ ಕ್ಯಾಂಪಸ್‌ನಲ್ಲಿ ಇದ್ದರೂ ಯಾರಿಗೂ ಆತನ ಗುರುತು ಪತ್ತೆ ಮಾಡಲು ಸಾಧ್ಯವಾಗಿರಲಿಲ್ಲ. ಜೂನ್ 26ರಂದು ಐಐಟಿ ಬಾಂಬೆಯ ಉದ್ಯೋಗಿಯೊಬ್ಬರು ಬಿಲಾಲ್ ಸೋಫಾದ ಮೇಲೆ ಮಲಗಿರುವುದನ್ನು ನೋಡಿ ನೀವು ಯಾರು ಎಂದು ಕೇಳಿದರು. ಆದರೆ ಬಿಲಾಲ್ ಅವರ ಪ್ರಶ್ನೆಗೆ ಉತ್ತರಿಸದೆ ಓಡಿಹೋಗಿದ್ದಾನೆ.

ಅನಂತರ ಕ್ಯಾಂಪಸ್ ನ ಭದ್ರತಾ ಅಧಿಕಾರಿಗಳು ಸಿಸಿಟಿವಿ ಮೂಲಕ ಬಿಲಾಲ್ ವಿಶ್ವವಿದ್ಯಾಲಯದ ವಿದ್ಯಾರ್ಥಿಯಲ್ಲ. ಆದರೂ ಕಳೆದ ಕೆಲವು ದಿನಗಳಿಂದ ಕ್ಯಾಂಪಸ್‌ನಲ್ಲಿ ಸುತ್ತಾಡುತ್ತಿದ್ದಾನೆ ಎಂದು ತಿಳಿದುಕೊಂಡು ದಾಖಲೆ ಸಮೇತ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರು. ಪೊಲೀಸರು ಬಳಿಕ ಆತನನ್ನು ಬಂಧಿಸಿದ್ದು, ಜುಲೈ 7ರವರೆಗೆ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಬಿಲಾಲ್ ಎಂಬ ‘ನಕಲಿ ವಿದ್ಯಾರ್ಥಿ’ ಹಾಸ್ಟೆಲ್ ಕೊಠಡಿಗಳಲ್ಲಿ ಸೋಫಾದ ಮೇಲೆ ಮಲಗುತ್ತಿದ್ದ. ಕಾಲೇಜಿನಲ್ಲಿ ಉಪನ್ಯಾಸಗಳಿಗೆ ಹಾಜರಾಗುತ್ತಿದ್ದ ಮತ್ತು ಉಚಿತ ಕಾಫಿ ಲಭ್ಯವಿರುವ ಸ್ಥಳಗಳಿಗೆ ಭೇಟಿ ನೀಡುತ್ತಿದ್ದ. ತಾನು ಪಿಎಚ್‌ಡಿ ವಿದ್ಯಾರ್ಥಿ ಎಂದು ಪರಿಚಯಿಸಿಕೊಳ್ಳುತ್ತಿದ್ದ. ಆತ ನಕಲಿ ಪ್ರವೇಶ ದಾಖಲೆಗಳನ್ನು ಬಳಸುತ್ತಿದ್ದ. ಪೊವೈ ಕ್ಯಾಂಪಸ್‌ನಲ್ಲಿ ಕೃತಕ ಬುದ್ಧಿಮತ್ತೆ (AI) ಕುರಿತಾದ ಸೆಮಿನಾರ್‌ಗೂ ಕೂಡ ಆತ ಹಾಜರಾಗಿದ್ದ ಎನ್ನಲಾಗಿದೆ.

ಪೊಲೀಸರು ಆತನನ್ನು ವಿಚಾರಣೆಗೆ ಒಳಪಡಿಸಿದಾಗ ಬಿಲಾಲ್ ಕಳೆದ ವರ್ಷವೂ ಕ್ಯಾಂಪಸ್‌ನಲ್ಲಿ ಒಂದು ತಿಂಗಳು ತಂಗಿದ್ದಾಗಿ ಒಪ್ಪಿಕೊಂಡಿದ್ದು, ಆದರೆ ಈ ವೇಳೆ ಯಾರೂ ತನ್ನನ್ನು ಗಮನಿಸಲಿಲ್ಲ ಎಂದು ತಿಳಿಸಿದ್ದಾನೆ.

ಮುಂಬೈ ಅಪರಾಧ ವಿಭಾಗದ ಅಧಿಕಾರಿಗಳು ತನಿಖೆಗಾಗಿ ಬಿಲಾಲ್‌ನ ಫೋನ್ ವಶಪಡಿಸಿಕೊಂಡಿದ್ದಾರೆ. ಆದರೆ ಆತನ ಫೋನ್‌ನಲ್ಲಿ ಸಾಕಷ್ಟು ಮಾಹಿತಿಯನ್ನು ಡಿಲೀಟ್‌ ಮಾಡಲಾಗಿದೆ. ಸೈಬರ್ ಲ್ಯಾಬ್ ಸಹಾಯದಿಂದ ಅದನ್ನು ಹಿಂಪಡೆಯಲು ಅಧಿಕಾರಿಗಳು ಪ್ರಯತ್ನಿಸುತ್ತಿದ್ದಾರೆ. ಬಿಲಾಲ್ ಕ್ಯಾಂಪಸ್‌ನ ವಿಡಿಯೊಗಳನ್ನು ಮಾಡಿದ್ದರೂ ಅವುಗಳನ್ನು ಯಾರಿಗೂ ಕಳುಹಿಸಿಲ್ಲ ಎನ್ನಲಾಗಿದೆ.

ಕ್ಯಾಂಪಸ್‌ನಲ್ಲಿದ್ದುಕೊಂಡು ಬಿಲಾಲ್ 21 ಇಮೇಲ್ ಐಡಿಗಳನ್ನು ಮಾಡಿದ್ದಾನೆ. ಅದನ್ನು ತನ್ನ ಹಲವಾರು ಬ್ಲಾಗ್‌ಗಳಿಗಾಗಿ ಬಳಸಲು ತಯಾರಿಸಿರುವುದಾಗಿ ಹೇಳಿದ್ದಾನೆ. ಆತ ಹೆಚ್ಚಿನ ಹಣವನ್ನು ಗಳಿಸಲು ಸಾಮಾಜಿಕ ಮಾಧ್ಯಮ ಪ್ರಭಾವಿಯಾಗಲು ಬಯಸಿದ್ದ ಎನ್ನಲಾಗಿದೆ.

ಇದನ್ನೂ ಓದಿ: CM Siddaramaiah: ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆಯ ಪ್ರಶ್ನೆಯೇ ಇಲ್ಲ: ಕಾಂಗ್ರೆಸ್‌ ಹೈಕಮಾಂಡ್‌

ಯಾರು ಈ ಬಿಲಾಲ್?

ಗುಜರಾತ್‌ನ ಸೂರತ್‌ನಲ್ಲಿರುವ ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿರುವ ಬಿಲಾಲ್‌ನ ಮಾಸಿಕ ಆದಾಯ 1.25 ಲಕ್ಷ ರೂ. ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಐಟಿ ಕ್ಷೇತ್ರದಲ್ಲಿ ತೀವ್ರ ಆಸಕ್ತಿ ಹೊಂದಿರುವ ಆತ 12ನೇ ತರಗತಿ ಮುಗಿಸಿದ ಅನಂತರ ಸಾಫ್ಟ್‌ವೇರ್ ಅಭಿವೃದ್ಧಿಯಲ್ಲಿ ಆರು ತಿಂಗಳ ಕೋರ್ಸ್ ಪೂರ್ಣಗೊಳಿಸಿದ್ದಾನೆ. ವೆಬ್ ವಿನ್ಯಾಸದಲ್ಲಿ ಒಂದು ವರ್ಷದ ಡಿಪ್ಲೊಮಾ ಸಹ ಮಾಡಿದ್ದಾನೆ. ಬಿಲಾಲ್‌ನ ತಂದೆ ಗಾರ್ಮೆಂಟ್ ವ್ಯವಹಾರ ನಡೆಸುತ್ತಿದ್ದಾರೆ.

ದುಬೈ, ಬಹ್ರೇನ್‌ಗೂ ಹೋಗಿದ್ದ ಬಿಲಾಲ್ ಬಗ್ಗೆ ಗುಪ್ತಚರ ಬ್ಯೂರೋ ಮತ್ತು ಭಯೋತ್ಪಾದನಾ ನಿಗ್ರಹ ಸಂಸ್ಥೆಗಳು ಕೂಡ ವಿಚಾರಣೆ ನಡೆಸುತ್ತಿದೆ.



Source link

ADMIN

About Author

Leave a comment

Your email address will not be published. Required fields are marked *

You may also like

ಕರ್ನಾಟಕ

Microsoft: Empowering the Digital World

Microsoft is a global technology company known for shaping the modern digital experience. From its iconic Windows operating system to
ಕರ್ನಾಟಕ

Microsoft: Empowering the Digital World

Microsoft is a global technology company known for shaping the modern digital experience. From its iconic Windows operating system to
Translate »