Karunadu Studio

ಕರ್ನಾಟಕ

Viral Video: ದೇವಸ್ಥಾನದಲ್ಲೇ ನಮಾಜ್‌ ಮಾಡಿದ ಮುಸ್ಲಿಂ ವ್ಯಕ್ತಿ; ಶಾಕಿಂಗ್‌ ವಿಡಿಯೊ ವೈರಲ್‌ – Kannada News | Man Arrested For Offering Namaaz At UP Temple


ಲಖನೌ: ಉತ್ತರ ಪ್ರದೇಶದ ದೇವಸ್ಥಾನವೊಂದರಲ್ಲಿ ಮುಸ್ಲಿಂ ವ್ಯಕ್ತಿಯೊಬ್ಬರು ನಮಾಜ್‌ ಮಾಡಿದ್ದು, ವಿಡಿಯೊ ತಡವಾಗಿ ಬೆಳಕಿಗೆ ಬಂದು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ (Viral Video) ಆಗಿದೆ. ಜತೆಗೆ ದೇಶಾದ್ಯಂತ ಆಕ್ರೋಶ ಹುಟ್ಟುಹಾಕಿದೆ. ಈ ಘಟನೆ ಬದೌನ್‌ ಜಿಲ್ಲೆಯ ದತ್ತಗಂಜ್‌ನ ಪಾಪಡ್‌ ಗ್ರಾಮದಲ್ಲಿ ಕೆಲವು ದಿನಗಳ ಹಿಂದೆ ನಡೆದಿದೆ. ʼʼನಮಾಜ್‌ ಮಾಡಿದ ವ್ಯಕ್ತಿ ಸುಮಾರು 35 ವರ್ಷಗಳಿಂದ ಈ ದೇವಸ್ಥಾನದಲ್ಲಿ ಕೆಲಸ ಮಾಡುತ್ತಿದ್ದʼʼ ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ ದೇವಸ್ಥಾನದಲ್ಲಿ ನಮಾಜ್‌ ಮಾಡಿದ 60 ವರ್ಷದ ಅಲಿ ಮೊಹಮ್ಮದ್‌ನನ್ನು ಬಂಧಿಸಲಾಗಿದೆ.

ಹಲವು ವರ್ಷಗಳಿಂದ ದೇವಸ್ಥಾನದ ಸ್ವಚ್ಛತೆಯ ಕೆಲಸದಲ್ಲಿ ತೊಡಗಿಸಿಕೊಂಡಿದ್ದ ಅಲಿ ಮೊಹಮ್ಮದ್‌ ತನ್ನ ಕೃತ್ಯಕ್ಕೆ ಇದೀಗ ಕ್ಷಮೆ ಕೋರಿದ್ದಾನೆ.

ವೈರಲ್‌ ವಿಡಿಯೊ ಇಲ್ಲಿದೆ:



ಈ ಸುದ್ದಿಯನ್ನೂ ಓದಿ: ಶಾಕಿಂಗ್‌: ತಿರುಮಲ ದೇವಸ್ಥಾನದ ಬಳಿ ಮುಸ್ಲಿಂ ವ್ಯಕ್ತಿಯಿಂದ ನಮಾಜ್‌; ವಿವಾದ ಸೃಷ್ಟಿಸಿದ ವೈರಲ್‌ ವಿಡಿಯೊ ಇಲ್ಲಿದೆ

ʼʼದೇವಸ್ಥಾನವನ್ನು ಸ್ವಚ್ಛಗೊಳಿಸಿದ ಬಳಿಕ ಅಲ್ಲೇ ನಮಾಜ್ ಮಾಡಿದೆ. ಇದು ನನ್ನಿಂದಾದ ತಪ್ಪು. ಇದಕ್ಕಾಗಿ ಕ್ಷಮೆ ಕೋರುತ್ತೇನೆʼʼ ಎಂದು ಹೇಳಿದ್ದಾನೆ. ʼʼಈ ಹಿಂದೆಯೂ ಈ ರೀತಿ ಮಾಡಿದ್ದೀಯಾ ಎನ್ನುವ ಪ್ರಶ್ನೆಗೆ ಇಲ್ಲ ಎಂದು ಉತ್ತರಿಸಿದ್ದಾನೆʼʼ ಎಂದು ಪೊಲೀಸರು ತಿಳಿಸಿದ್ದಾರೆ. ʼʼನಮಾಜ್‌ ಮಾಡುವ ಸಮಯದಲ್ಲಿ ನೀನು ಎಲ್ಲೇ ಇದ್ದರೂ ಪ್ರಾರ್ಥನೆ ಸಲ್ಲಿಸಬಹುದು ಎಂದು ಹಿರಿಯರು ತಿಳಿಸಿದ್ದರು. ಹೀಗಾಗಿ ದೇವಸ್ಥಾನದಲ್ಲೇ ನಮಾಜ್‌ ಮಾಡಿದೆʼʼ ಎಂದು ಹೇಳಿದ್ದಾನೆ.

ʼʼದೇವಸ್ಥಾನದಲ್ಲಿ ವ್ಯಕ್ತಿಯೊಬ್ಬ ನಮಾಜ್‌ ಮಾಡುತ್ತಿದ್ದ ವಿಡಿಯೊ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಆತನ ವಿರುದ್ಧ ದೂರು ದಾಖಲಾಗಿದ್ದು, ಬಂಧಿಸಲಾಗಿದೆʼʼ ಎಂದು ಪೊಲೀಸ್‌ ಅಧಿಕಾರಿ ಕೆ.ಕೆ.ತಿವಾರಿ ವಿವರಿಸಿದ್ದಾರೆ .ಈ ಮಧ್ಯೆ ಅಲಿ ಮೊಹಮ್ಮದ್‌ನ ಕುಟುಂಬ ಈ ಘಟನೆಗೆ ಮಹತ್ವ ನೀಡಬೇಕಾಗಿಲ್ಲ ಎಂದು ಉದ್ಧಟತನದ ಹೇಳಿಕೆ ನೀಡಿದೆ. ʼʼಇದು ದೊಡ್ಡ ಸಂಗತಿ ಏನಲ್ಲ. ಈ ಚಿಕ್ಕ ಘಟನೆಯನ್ನು ಹರಡಲಾಗುತ್ತಿದೆ. ಅವರು ತಮ್ಮ ಇಡೀ ಜೀವನವನ್ನು ದೇವಸ್ಥಾನಕ್ಕಾಗಿಯೇ ಮುಡಿಪಿಟ್ಟಿದ್ದಾರೆʼʼ ಎಂದು ಅಲಿ ಮೊಹಮ್ಮದ್‌ನ ಸೊಸೆ ಸಾಯೆಮ ತಿಳಿಸಿದ್ದಾರೆ.

ದೇವಸ್ಥಾನದ ಅರ್ಚಕ ಪರಮಾತ್ಮ ದಾಸ್ ಈ ಬಗ್ಗೆ ಮಾತನಾಡಿ, ಅಲಿ ಮೊಹಮ್ಮದ್‌ ಮಾನಸಿಕ ಅಸ್ವಸ್ಥ ವ್ಯಕ್ತಿಯಾಗಿದ್ದು, ವಿಡಿಯೊ ವೈರಲ್‌ ಆದ ಬಳಿಕವಷ್ಟೇ ಘಟನೆ ಬೆಳಕಿಗೆ ಬಂದಿದೆ ತಿಳಿಸಿದ್ದಾರೆ. ʼʼಅಲಿ ಮೊಹಮ್ಮದ್‌ ಮಾನಸಿಕ ಸ್ಥೀಮಿತ ಕಳೆದುಕೊಂಡಿದ್ದಾನೆ. ಆತ ಹಲವು ಧಾರ್ಮಿಕ ಕೇಂದ್ರಗಳಲ್ಲಿ ಕೆಲಸ ಮಾಡುತ್ತಿದ್ದಾನೆ. ಜತೆಗೆ ಈ ದೇವಸ್ಥಾನದಲ್ಲಿ ಕಳೆದ 35 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದಾನೆʼʼ ಪರಮಾತ್ಮ ದಾಸ್ ಹೇಳಿದ್ದಾರೆ.

ತಿರುಮಲ ದೇವಸ್ಥಾನದ ಬಳಿ ಮುಸ್ಲಿಂ ವ್ಯಕ್ತಿಯಿಂದ ನಮಾಜ್‌

ತಿರುಪತಿ: ಆಂಧ್ರ ಪ್ರದೇಶದ ಪ್ರಸಿದ್ಧ ತಿರುಮಲ ತಿರುಪತಿ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಆವರಣದಲ್ಲಿ ಮುಸ್ಲಿಂ ವ್ಯಕ್ತಿಯೊಬ್ಬ ಟೋಪಿ‍ ಧರಿಸಿ ನಮಾಜ್‌ ಮಾಡಿದ್ದ ವಿಡಿಯೊವೊಂದು ಇತ್ತೀಚೆಗೆ ವೈರಲ್‌ ಆಗಿತ್ತು. ಈ ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೇ ಹಿಂದು ಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದರು. ಆ ವ್ಯಕ್ತಿ ದೇವಾಲಯದ ಪರಿಸರದಲ್ಲಿ 10 ನಿಮಿಷಗಳಿಗಿಂತ ಹೆಚ್ಚು ಕಾಲ ನಮಾಜ್‌ ಮಾಡಿದ್ದಾನೆ ಎಂದು ಮೂಲಗಳು ತಿಳಿಸಿದ್ದವು. ಏ. 22ರಂದು ಪಹಲ್ಗಾಮ್ ದಾಳಿಯ ಹಿನ್ನೆಲೆಯಲ್ಲಿ ಈ ಘಟನೆ ಆಕ್ರೋಶ ಹುಟ್ಟುಹಾಕಿತ್ತು.





Source link

ADMIN

About Author

Leave a comment

Your email address will not be published. Required fields are marked *

You may also like

ಕರ್ನಾಟಕ

Microsoft: Empowering the Digital World

Microsoft is a global technology company known for shaping the modern digital experience. From its iconic Windows operating system to
ಕರ್ನಾಟಕ

Microsoft: Empowering the Digital World

Microsoft is a global technology company known for shaping the modern digital experience. From its iconic Windows operating system to
Translate »