ಧೋ ಎಂದು ಸುರಿಯುವ ಮಳೆಗೆ ಬಿಸಿ ಬಿಸಿ ಪಕೋಡ ಅದ್ಭುತವಾಗಿ ಸಾಥ್ ನೀಡುತ್ತದೆ.ಮಳೆಗೂ ಪಕೋಡಕ್ಕೂ ಇರುವ ನಂಟೆ ಅಂಥದ್ದು.ಸಾಮಾನ್ಯವಾಗಿ ಪಕೋಡ ತಯಾರಿಸುವಾಗ ಅದಕ್ಕೆ ಈರುಳ್ಳಿ, ಮೆಣಸಿನಕಾಯಿ ಮತ್ತು ಹೂಕೋಸುಗಳನ್ನು ಹಾಕುತ್ತಾರೆ.ಅದೂ ಅಲ್ಲದೇ, ಈ ಪಕೋಡಗಳ ಆಕಾರ, ಗಾತ್ರ ಒಂದೇ ರೀತಿ ಇರಲ್ಲ. ಆದರೆ ಈಗ ಸೋಶಿಯಲ್ ಮೀಡಿಯಾದಲ್ಲಿ ಪಕೋಡದ ವಿಡಿಯೊವೊಂದು ಸಿಕ್ಕಾಪಟ್ಟೆ ವೈರಲ್ ಆಗಿದೆ.ಹೌದು ಮಲೇಷ್ಯಾದ ರಸ್ತೆಬದಿ ಅಂಗಡಿಯಲ್ಲಿ, ಈ ಪಕೋಡಗಳಿಗೆ ವಿಶೇಷ ಆಕಾರ ನೀಡಲಾಗಿದೆ.ಮಲೇಷ್ಯಾದಲ್ಲಿ ಚಪ್ಪಲ್ ಆಕಾರದಲ್ಲಿ ಪಕೋಡಗಳನ್ನು ತಯಾರಿಸಿ ಮಾರಾಟ ಮಾಡಲಾಗುತ್ತಿದೆ.
ಇದರ ವಿಡಿಯೊಗಳು ಇತ್ತೀಚೆಗೆ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್(Viral Video) ಆಗಿವೆ. ಈ ‘ಚಪ್ಪಲ್ ಪಕೋಡ’ಗಳನ್ನು ಸ್ಥಳೀಯ ಭಾಷೆಯಲ್ಲಿ “ಕರಿಪಾಪ್” ಮತ್ತು “ಕರಿ ಪಫ್” ಎಂದು ಕರೆಯಲಾಗುತ್ತದೆ. ವೈರಲ್ ಆದ ವಿಡಿಯೊದಲ್ಲಿ ಚಪ್ಪಲಿ ಆಕಾರದಲ್ಲಿ ಪಕೋಡವನ್ನು ಮಾಡುತ್ತಿರುವ ದೃಶ್ಯ ಸೆರೆಯಾಗಿದೆ. ಜನರು ಕೂಡ ಇದನ್ನು ಖುಷಿಯಿಂದ ಸವಿದಿದ್ದಾರೆ.
ವಿಡಿಯೊ ಇಲ್ಲಿದೆ ನೋಡಿ…
‘ಚಪ್ಪಲ್ ಪಕೋಡ’ ತಯಾರಿಸುವುದು ಕೂಡ ಒಂದು ಕಲೆ. ಚಪ್ಪಲಿಗಳ ಆಕಾರದಲ್ಲಿರುವ ಈ ಡಂಪ್ಲಿಂಗ್‌ಗಳು ಮಾಂಸ (ಕೋಳಿ, ಗೋಮಾಂಸ ಅಥವಾ ಕುರಿ ಮಾಂಸ), ಆಲೂಗಡ್ಡೆ, ಈರುಳ್ಳಿ ಮತ್ತು ಸ್ಥಳೀಯ ಮಸಾಲೆಗಳ ಮಿಶ್ರಣದಿಂದ ತುಂಬಿರುತ್ತವೆ. ಮಾಂಸವನ್ನು ಕತ್ತರಿಸಿ ಅರಿಶಿನ, ಜೀರಿಗೆ, ಕೊತ್ತಂಬರಿ ಮತ್ತು ಖಾರದ ಪುಡಿಯನ್ನು ಹಾಕಿ ಮ್ಯಾರಿನೇಟ್ ಮಾಡಲಾಗುತ್ತದೆ. ಈರುಳ್ಳಿ, ಆಲೂಗಡ್ಡೆ ಮತ್ತು ಕೆಲವೊಮ್ಮೆ ಬೇಯಿಸಿದ ಮೊಟ್ಟೆಗಳನ್ನು ಮಿಶ್ರಣಕ್ಕೆ ಸೇರಿಸಲಾಗುತ್ತದೆ. ಹೂರಣವನ್ನು ತೆಳುವಾದ ಹಿಟ್ಟಿನಲ್ಲಿ ಸುತ್ತಿ ಚಪ್ಪಲಿಗಳ ಆಕಾರದಲ್ಲಿ ತಯಾರಿಸಲಾಗುತ್ತದೆ. ನಂತರ ಹೊಂಬಣ್ಣ ಬರುವವರೆಗೂ ಹಾಗೂ ಗರಿಗರಿಯಾಗುವವರೆಗೆ ಅದನ್ನು ಬಿಸಿ ಎಣ್ಣೆಯಲ್ಲಿ ಕರಿಯಲಾಗುತ್ತದೆ.
ಈ ವಿಡಿಯೊ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿ ನೆಟ್ಟಿಗರು ಇದರ ಕುರಿತು ಕಾಮೆಂಟ್ ಮಾಡಿದ್ದಾರೆ.ಇನ್ನು ಈ ಪಕೋಡದ ರುಚಿ ನೋಡಿದ ಒಬ್ಬರು “ಇದು ತುಂಬಾ ಚೆನ್ನಾಗಿದೆ! ಎಂದು ಕಾಮೆಂಟ್ ಮಾಡಿದ್ದಾರೆ.
ಈ ಸುದ್ದಿಯನ್ನೂ ಓದಿ:Viral Video: ಹಾಸ್ಟೆಲ್ ಊಟದಲ್ಲಿ ಗೃಹ ಸಚಿವೆ ಪ್ಲೇಟ್‌ನಲ್ಲಿ ಸಿಕ್ತು ಜಿರಳೆ; ವಾರ್ಡನ್ ಅಮಾನತು
ಖ್ಯಾತ ಇನ್‌ಸ್ಟಾಗ್ರಾಮರ್ ಜೂಲಿಯೆಟ್ ಕಪ್‌ಕೇಕ್ ಟ್ರೇಗಳಿಲ್ಲದೆ ಕ್ಯಾಪ್ಸಿಕಂ (ಬೆಲ್ ಪೆಪರ್) ಅನ್ನು ಬೇಸ್ ಆಗಿ ಬಳಸಿ ಚಾಕೊಲೇಟ್ ಕಪ್‌ಕೇಕ್ ಅನ್ನು ತಯಾರಿಸುವ ಹ್ಯಾಕ್ ಅನ್ನು ಹಂಚಿಕೊಂಡಿದ್ದಾಳೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇಲ್ಲಿ ಆಕೆ ಕಪ್‌ಕೇಕ್ ಲೈನರ್‌ಗಳ ಬದಲಿಗೆ ಕ್ಯಾಪ್ಸಿಕಂ ಅನ್ನು ಬಳಸಿದ್ದಾಳೆ. ಇದು ಆರೋಗ್ಯಕರ ಆಯ್ಕೆಯಷ್ಟೇ ಅಲ್ಲ, ಕಾಗದದ ತ್ಯಾಜ್ಯವನ್ನು ಕಡಿಮೆ ಮಾಡುತ್ತದೆ ಎಂದು ಹೇಳಿದ್ದಾಳೆ. ಮೊದಲಿಗೆ ಅವಳು ಕ್ಯಾಪ್ಸಿಕಂ ಮೇಲಿನ ಭಾಗವನ್ನು ಕತ್ತರಿಸಿ ಅದರ ಬೀಜಗಳನ್ನು ತೆಗೆದುಹಾಕಿ, ನಂತರ ಅವುಗಳನ್ನು ಒಂದು ಟ್ರೇನಲ್ಲಿ ಇಟ್ಟು ಅವುಗಳ ಒಳಗೆ ಚಾಕೊಲೇಟ್ ಕಪ್‌ಕೇಕ್ ಬ್ಯಾಟರ್ ಅನ್ನು ತುಂಬಿಸಿದ್ದಾಳೆ. ನಂತರ ಅವುಗಳನ್ನು ಓವನ್‍ನಲ್ಲಿಟ್ಟು ಬೇಯಿಸಿದ್ದಾಳೆ. ರುಚಿಕರವಾದ ಚಾಕೋಲೇಟ್ ಕೇಕ್ ಕಪ್ ಕೇಕ್‌ಗಳ ಮೌಲ್ಡ್ ಇಲ್ಲದೇ ತಯಾರಿಸಿದ್ದಾಳೆ.