Karunadu Studio

ಕರ್ನಾಟಕ

ವೀರಶೈವ ಸಮಾಜದ ರುದ್ರಭೂಮಿ ಅಭಿವೃದ್ಧಿಗೆ ವಿರೋಧ,

  • March 25, 2025
  • 0 Comments

ಗುಬ್ಬಿ:      ಗುಬ್ಬಿ ಪಟ್ಟಣ ಪಂಚಾಯ್ತಿಯ ವಾರ್ಷಿಕ ಆಯವ್ಯಯ ಸಭೆಯಲ್ಲಿ ಸಾರ್ವಜನಿಕ ಸ್ಮಶಾನಗಳನ್ನು ಅಭಿವೃದ್ಧಿ ಗೊಳಿಸುವ ಬಗ್ಗೆ ಚರ್ಚೆ ನೆಡೆಯುತ್ತಿರುವಾಗ ಮದ್ಯೆ ಪ್ರವೇಶಿಸಿದ ಸದಸ್ಯ ಜಿ ಆರ್ ಶಿವಕುಮಾರ್ ವೀರಶೈವ ಸಮಾಜದ ರುದ್ರಭೂಮಿ ಅಭಿವೃದ್ಧಿಗೆ ಮನವಿ ಮಾಡಿದಾಗ ಸದಸ್ಯ ರೇಣುಕಪ್ರಸಾದ್ ವಿರೋಧ ವ್ಯಕ್ತಪಡಿಸಿ ನಾವು ಒಂದು ಜಾತಿಗೆ ಸದಸ್ಯರಾಗಿಲ್ಲ     ಸಾರ್ವಜನಿಕ ಸ್ಮಶಾನಕ್ಕೆ ಒಂದು ಇಂಚು ಜಾಗವಿಲ್ಲ ನಿಮಗೆ 3 ಎಕರೆ ಜಾಗವಿದೆ ನೀವು ಎಲ್ಲಾ ಮತದಾರರ ಪ್ರತಿನಿಧಿ ಎಲ್ಲಾಕೋಮಿಗೂ ಅನುಕೂಲವಾಗುವಂತೆ ಸಾರ್ವಜನಿಕ ಸ್ಮಶಾನ ಅಭಿವೃದ್ಧಿಯಾಗಲಿ ಎಂದರು.ಈ ಸಂದರ್ಭದಲ್ಲಿ ಮದ್ಯ ಪ್ರವೇಶಿಸಿದ ಶಾಸಕ ಎಸ್ ಆರ್ ಶ್ರೀನಿವಾಸ್ ತುಮಕೂರು ಮಾದರಿಯಲ್ಲಿ ಸಮಾಜ ಬಾಂದವರೆಲ್ಲಾ ಸೇರಿ ಸ್ಮಶಾನ ಅಭಿವೃದ್ಧಿ ಪಡಿಸಿ ಎಂದು ಸಲಹೆಇಟ್ಟರು Source link

ಕರ್ನಾಟಕ

ಸಂಘಟನೆಯ ಹೆಸರಿನಲ್ಲಿ ರೈತರಿಂದ ದುಡ್ಡು ಹೊಡೆಯುತ್ತಿರುವವರಿಗೆ ವಾಸಣ್ಣ ಖಡಕ್ ಎಚ್ಚರಿಕೆ

  • March 25, 2025
  • 0 Comments

ಗುಬ್ಬಿ:     ಸಂಘಟನೆಯ ಹೆಸರಿನಲ್ಲಿ ಅಮಾಯಕ ರೈತರಿಂದ ದುಡ್ಡು ಹೊಡೆಯುತ್ತಿರುವವರಿಗೆ ವಾಸಣ್ಣ ಖಡಕ್ ಎಚ್ಚರಿಕೆ    ಇಂದು ಗುಬ್ಬಿಯ ತಾಲೂಕು ಕಚೇರಿಯ ಮುಂಬಾಗದಲ್ಲಿ ಕರ್ನಾಟಕ ಪ್ರಾಂತ್ಯ ರೈತ ಸಂಘದವತಿಯಿಂದ ನೆಡೆಯುತ್ತಿದ್ದ ಮುಷ್ಕರದ ಸ್ಥಳಕ್ಕೆ ಬಂದ ಗುಬ್ಬಿ ಶಾಸಕ ಎಸ್ ಆರ್ ಶ್ರೀನಿವಾಸ್ ನಕಲಿ ರೈತರ ಮೇಲೆ ಹರಿಹಾಯ್ದರು. ಬಡ ರೈತರನ್ನು ಹಾಗೂ ಹೆಣ್ಣು ಮಕ್ಕಳನ್ನು ಜಮೀನು ಮಂಜೂರು ಮಾಡಿಸುತ್ತಿವೆಂದು ತುರುವೇಕೆರೆ, ದಂಡಿನ ಶಿವರ, ಹಾಗೂ ದೂರದ ಕೇರಳ ಕಾಸರಗೋಡಿನಿಂದೆಲ್ಲಾ ಅರ್ಜಿ ಹಾಕಿಸಿ ಒಂದು ಅರ್ಜಿಗೆ 3 ಸಾವಿರಕ್ಕೂ ಹೆಚ್ಚು ಹಣ ಪಡೆಯುತ್ತಿದ್ದಾರೆಂಬ ಸುದ್ದಿ ತಿಳಿಯುತ್ತಲೇ ಪಟ್ಟಣ ಪಟ್ಟಣಪಂಚಾಯ್ತಿಯ ಆಯವ್ಯಯ ಸಭೆಯಲ್ಲಿ ಇದ್ದ ಶಾಸಕರು ಪ್ರತಿಭಟನಾ ಸ್ಥಳಕ್ಕೆ ಬಂದು ಮೊದಲು ರೈತರ ಉರು ಯಾವುದೆಂದು ವಿಚಾರಿಸಿದರು ನಂತರ ಅಲ್ಲೇ ಇದ್ದ ರಾಜ್ಯ ಪ್ರಾಂತ್ಯ ರೈತ ಸಂಘದ ಯಶವಂತ್, ಸುಬ್ರಮಣ್ಯ ರ ಮೇಲೆ ಹರಿಹಾಯ್ದು ರೈತರ ದಿಕ್ಕು ತಪ್ಪಿಸುತ್ತಿರುವ ನಿಮ್ಮಮೇಲೆ ಪೊಲೀಸರಿಗೆ ದೂರು ಕೊಡುತ್ತೇನೆಂದರು      ನಂತರ ಮಾತನಾಡಿದ ಅವರು ಈಗಾಗಲೇ ನಮ್ಮ ತಾಲೂಕಿನಲ್ಲಿ ಸಾವಿರಾರರು ಅರ್ಜಿಗಳು ಬಾಕಿ ಇದ್ದು,ಅದಕ್ಕೆ ಸರ್ಕಾರ ಕೆಲವು ನಿಯಮಗಳನ್ನು ಮಾಡಿದೆ ಅದರ ಪ್ರಕಾರವೇ ನಾವು ಭೂಮಿ ನೀಡಬೇಕು ಎಂದರು, ಅರಣ್ಯ ಭೂಮಿ, ಸರ್ಕಾರಿ ಗೋಮಾಳ, ಹಾಗೂ ಗುಂಡು ತೋಪುಗಳಲ್ಲಿ ಜಮೀನು ಕೊಡುವಹಾಗಿಲ್ಲ ಇದಕ್ಕೆ ಉಚ್ಛ ನ್ಯಾಯಾಲಯದ ಆದೇಶವಿದೆಯೆಂದರು,      ಅರ್ಜಿ ಹಾಕಲು ಈಗಾಗಲೇ ಸಮಯ ಮುಗಿದಿದ್ದು ಈಗ ಬರುವ ಅರ್ಜಿಗಳನ್ನು ನಾವು ಪುರಸ್ಕರಿಸುವಂತಿಲ್ಲ ಎಂದರು, ಅರ್ಜಿದಾರ ನಲವತ್ತು ವರ್ಷ ವಯಸ್ಸಿನವನಾಗಿರಬೇಕು, ಅವನು ಆ ಜಮೀನನ್ನು ಉಳುಮೆ ಮಾಡುತ್ತಿರಬೇಕು ಹೀಗೆ ಹತ್ತು ಹಲವು ನಿಬಂಧನೆಗಳು ಇದ್ದು ಈ ಪ್ರಕಾರವೇ ನಾವು ಮಂಜೂರು ಮಾಡಬೇಕು ಎಂದು ಸಂಕ್ಷಿಪ್ತವಾಗಿ ತಿಳಿಸಿದ ಶಾಸಕರು ಬೇರೆ ತಾಲೂಕು ಹಾಗೂ ಬೇರೆ ರಾಜ್ಯದವರಿಗೆ ಕೊಡಲು ನಮ್ಮಲ್ಲಿ ಭೂಮಿಯೇ ಇಲ್ಲವೆಂದರು,     ತಕ್ಷಣ ಸ್ಥಳದಲ್ಲಿ ನೆಡೆಯಬಹುದಾದ ಬೆಳವಣಿಗೆಯನ್ನು ಗಮನಿಸಿದ ಪೊಲೀಸರು ಗುಬ್ಬಿ ಸಬ್ ಇನ್ಸ್ ಪೆಕ್ಟೇರ್ ಸುನಿಲ್ ಕುಮಾರ್ ನೇತೃತ್ವದಲ್ಲಿ ಪ್ರತಿಭಟನಾ ಕಾರರನ್ನು ಚದುರಿಸಿದರು,    ಈ ಸಂದರ್ಭದಲ್ಲಿ ಪಟ್ಟಣ ಪಂಚಾಯ್ತಿ ಅಧ್ಯಕ್ಷೆ ಮಂಗಳಮ್ಮ, ಉಪಾಧ್ಯಕ್ಷೇ ಮಮತಾ ಶಿವಪ್ಪ, ಹಿರಿಯ ಸದಸ್ಯ ಸಿ ಮೋಹನ್, ಕುಮಾರ್, ರೇಣುಕಪ್ರಸಾದ್, ರಂಗಸ್ವಾಮಿ, ಸಾದಿಕ್, ಆನಂದ್,ಶೋಕತ್ ಆಲಿ,ಆಯಿಷಾ ಬಾನು, ಮಹಾಲಕ್ಷ್ಮಿ,ಹಾಗೂ ಇತರರು ಇದ್ದರು Source link

ಕರ್ನಾಟಕ

ವಕ್ಫ್ ತಿದ್ದುಪಡಿ ಮಸೂದೆ-2024 ವಿರುದ್ದ ಸಂಘಟಿತ ಹೋರಾಟ ಅಗತ್ಯ : ಅಬ್ದುಲ್ ಹನ್ನನ್

  • March 25, 2025
  • 0 Comments

ಬೆಂಗಳೂರು:      :ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಬೆಂಗಳೂರು ಉತ್ತರ ಜಿಲ್ಲಾ ಸಮಿತಿ ವತಿಯಿಂದ ಬೆಂಗಳೂರು ನಗರದ CMA ಗ್ರಾಂಡ್ ಕನ್ವೆನ್ಷನ್ ಹಾಲ್ ನಲ್ಲಿ ಇಫ್ತಾರ್ ಸಮ್ಮಿಲನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.      ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಎಸ್ ಡಿ ಪಿ ಐ ಕರ್ನಾಟಕ ರಾಜ್ಯ ಉಪಾಧ್ಯಕ್ಷರಾದ ಅಬ್ದುಲ್ ಹನ್ನನ್ ಒಕ್ಕೂಟ ಸರ್ಕಾರ ತನ್ನ ಕೋಮು ದ್ವೇಷದ ಮುಂದುವರಿದ ಭಾಗವಾಗಿ ಈಗ ವಕ್ಫ್ ತಿದ್ದುಪಡಿ ಮಸೂದೆಯನ್ನು ಜಾರಿಗೆ ತರಲು ಮುಂದಾಗಿದೆ. ಈ ದೇಶವು ಜಾತ್ಯಾತೀತ ದೇಶವಾಗಿದ್ದು, ಇಲ್ಲಿ ಎಲ್ಲಾ ಧರ್ಮದವರು ತಮ್ಮ ಧಾರ್ಮಿಕ ಆಚರಣೆಗಳನ್ನು ಆಚರಿಸಲು ಸಂವಿಧಾನದಲ್ಲಿ ಧಾರ್ಮಿಕ ಹಕ್ಕುಗಳ ಅನುಸಾರ ಅವಕಾಶ ನೀಡಲಾಗಿದೆ. ಅದರಂತೆಯೇ ಇಲ್ಲಿನ ಮುಸ್ಲಿಮರು ಅವರ ಧಾರ್ಮಿಕ ಆಚಾರ ಮತ್ತು ವಿಚಾರಗಳನ್ನು ಅನುಸರಣೆ ಮಾಡುತ್ತಾರೆ. ಆದರೆ ಒಕ್ಕೂಟ ಸರ್ಕಾರ,ಮುಸ್ಲಿಂ ಸಮುದಾಯದ ವಿರೋಧದ ನಡೆವೆಯೂ ಹಠಕ್ಕೆ ಬಿದ್ದು ವಕ್ಫ್ ತಿದ್ದುಪಡಿ ಬಿಲ್ ತರುವ ಮೂಲಕ ಮುಸ್ಲಿಮರ ಸಂವಿಧಾನಿಕ ಮತ್ತು ಧಾರ್ಮಿಕ ಹಕ್ಕುಗಳಲ್ಲಿ ಹಸ್ತಕ್ಷೇಪ ಮಾಡುವ ಮತ್ತು ವಕ್ಫ್ ಆಸ್ತಿಗಳನ್ನು ಕಬಳಿಸುವ ಹುನ್ನಾರ ಇದರಲ್ಲಿ ಅಡಗಿದೆ. ವಕ್ಫ್ ಆಸ್ತಿಗಳು ಮುಸ್ಲಿಂ ಸಮಾಜದ ಉಳ್ಳವರು,ಸಮಾಜದಲ್ಲಿ ಇರುವ ಬಡವರು ಮತ್ತು ನಿರ್ಗತರಿಗಾಗಿ ಸಹಾಯ ಮಾಡಲಿಕ್ಕಾಗಿ ಅಲ್ಲಾಹನ ಹೆಸರಿನಲ್ಲಿ ದಾನ ಮಾಡಿದ ಆಸ್ತಿ ಇದು. ಈ ಆಸ್ತಿಗಳ ರಕ್ಷಣೆಗಾಗಿ ಸಂಘಟಿತ ಹೋರಾಟಕ್ಕೆ ಕರೆ ನೀಡಿದರು.      ಬಿಜೆಪಿ ನೇತೃತ್ವದ NDA ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ವಕ್ಫ್ ತಿದ್ದುಪಡಿ ಮಸೂದೆ 2024 ರಲ್ಲಿರುವ ಮಾರಕ ಅಂಶಗಳು ಯಾವುವು?, ಇದರ ಹಿಂದೆ ಅಡಗಿರುವ ಶಡ್ಯಂತರ ಏನು? ಇದನ್ನು ವಿರೋಧಿಸುವ ವಿಧಾನ ಹೇಗೆ.? ಮತ್ತು ಮಸೂದೆಯನ್ನು ತಿರಸ್ಕಾರ ಮಾಡಲು ಮುಸ್ಲಿಮರಿಗೆ ಮುಂದಿರುವ ಮಾರ್ಗೋಪಾಯಗಳು ಯಾವುವು ? ಎಂಬ ವಿಷಯದ ಬಗ್ಗೆ ಚರ್ಚಿಸಲಾಯಿತು.      ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಜಾವೀದ್ ಆಜಂ ಸಾಬ್, ಡಾ. ಮಹಬೂಬ್ ಅವದ್ ಷರೀಫ್ NWC ಸದಸ್ಯರು, ಮೌಲಾನಾ ಶಫೀಕುರ್ ರಹಮಾನ್ ರಾಜ್ಯಾಧ್ಯಕ್ಷ ಸುನ್ನೀ ಉಲೇಮಾ ಮಂಡಳಿ, ಸಾದಿಕ್ ಪಾಷಾ ಸದ್ಭಾವನಾ ವೆಲ್ಫೇರ್ ಅಸೋಸಿಯೇಶನ್, ರಫೀಕ್ ಅಹಮದ್ ಸಾಬ್ ಥಣಿಸಂದ್ರ ಮಸೀದಿ ಫೆಡರೇಶನ್ ಅಧ್ಯಕ್ಷ, ಮುಫ್ತಿ ಸಲ್ಮಾನ್ ಥಣಿಸಂದ್ರ ಮಸೀದಿ ಫೆಡರೇಶನ್ , ಖಾರಿ ನಸೀಮುದಿನ್ ಸಬ್ ರಜಾ ಫೌಂಡೇಶನ್ , ಅಬ್ದುಲ್ ಹಫೀಝ್ ರಶಾದಿ ಅಧ್ಯಕ್ಷ ಸಕಾ ಬೈತುಲ್ ಮಾಲ್, ಮುಫ್ತಿ ಜಹೆರುದ್ದೀನ್ ಸಾಬ್, ಮುಕ್ತಿಯಾರ್ ಅಲಿ ಖಾನ್ ಕರ್ನಾಟಕ ಕಾರ್ಮಿಕ ಪಕ್ಷ , ಭಾಯಿ ಲಾಲ್ ಕರ್ನಾಟಕ ರಕ್ಷಣಾ ವೇದಿಕೆ , ಸಮೀರ್ ಸಾಬ್ ಅಲ್ ಮಿಲ್ಲತ್ ಟ್ರಸ್ಟ್ , ಜಿಲ್ಲಾ ನಾಯಕರು , ಉಲೇಮಾಗಳು ಮತ್ತು ಇತರ ಸಂಘಟನೆಗಳ ಮುಖಂಡರು ಉಪಸ್ಥಿತರಿದ್ದರು. Source link

ಕರ್ನಾಟಕ

ವೃಷಾಭವತಿ ವಿರೋಧಿಸುವವರು ಮೊದಲು ನನ್ನೂರಿನ ಕೆರೆ ನೋಡಲಿ, ಯಲಹಂಕ ಶಾಸಕ ಎಸ್.ಆರ್ ವಿಶ್ವನಾಥ್

  • March 25, 2025
  • 0 Comments

ಬೆಂಗಳೂರು ಗ್ರಾಮಾಂತರ :      ನನ್ನ ಸ್ವಗ್ರಾಮ ಸಿಂಗನಾಯಕನಹಳ್ಳಿ ಕೆರೆಗೆ ಎಚ್.ಎನ್ ವ್ಯಾಲಿ ಸಂಸ್ಕರಿಸಿದ ನೀರು ಬಂದು ಕೆರೆ ತುಂಬಿದೆ. ಮೀನುಗಳು, ಪಕ್ಷಿಗಳನ್ನು ಕಾಣುವ ಜತೆ ಬಾವಿಯಲ್ಲಿಯೂ ನೀರು ಕಾಣಬಹುದು, ಅಂತರ್ಜಲ ವೃದ್ಧಿಗೆ ಸಂಸ್ಕರಿಸಿದ ವೃಷಾಭವತಿ ನೀರನ್ನು ಸ್ವಾಗತಿ ಸುತ್ತೇನೆ. ವೃಷಾಭಾವತಿ ಸಂಸ್ಕರಿಸಿದ ನೀನು ವಿರೋಧಿಸುವವರು ನನ್ನೂರಿನ ಕೆರೆಯನ್ನು ನೋಡಿ ಬನ್ನಿ ಎಂದು ಯಲಹಂಕ ಶಾಸಕ ಎಸ್.ಆರ್ ವಿಶ್ವನಾಥ್ ತಿಳಿಸಿದರು.      ಬಿಜೆಪಿ ಕಚೇರಿ ಯಲ್ಲಿ ವೃಷಭಾವತಿ ಯೋಜನೆದು ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಅವರು      ನೆಲಮಂಗಲದಲ್ಲಿ ವೃಷಾಭವತಿ ಯೋಜನೆ ವಿರೋಧಿಸುವವರು ರಾಜಕೀ ಯಕ್ಕೆ ಮಾತನಾಡುತ್ತಿದ್ದಾರಾ ಅಥವಾ ಬೇರೆ ವಿಚಾರವಾ ಗೊತ್ತಿಲ್ಲ. ನಾನು ಅದರ ಬಗ್ಗೆ ಮಾತನಾಡಲ್ಲ. ಆದರೆ ದೇಶದಲ್ಲಿ ಯಾವ ಸ್ಥಳೀಯವಾದ ಕೆರೆಗೆ ಸಂಸ್ಕರಿಸಿದ ನೀರು ಸಂಗ್ರಹಣೆ ಆಗುತ್ತಿದೆ? ನೆಲಮಂಗಲದ ಕೆರೆಗಳಲ್ಲಿ ತುಂಬಿರುವ ಕಲುಷಿತ ನೀರು ನೇರವಾಗಿ ದಾಸನಪುರಕ್ಕೆ ಬರುತ್ತಿದೆ, ಈ ನೀರಿನ ಬಗ್ಗೆ ಮಾತನಾಡದವರು ಸಂಸ್ಕರಿಸಿ ಕೆರೆಗೆ ಬರುವ ನೀರಿನ ಬಗ್ಗೆ ಮಾತನಾಡಬಾರದು. ಯಾವ ಸರಕಾರಗಳು ಜನರಿಗೆ ತೊಂದರೆ ಆಗುವ ಯೋಜನೆ ತರುವುದಿಲ್ಲ, ವ್ಯವಸ್ಥೆಯಲ್ಲಿ ಸಣ್ಣ ಪುಟ್ಟ ವ್ಯತ್ಯಾಸವಾಗುತ್ತದೆ, ಅದರ ಬದಲಾವಣೆ ನಮ್ಮ ಕೈನಲ್ಲಿ ಇರಲಿದೆ ಎಂದರು.     ಜನರಿಗೆ ಮಾತ್ರ ಅನುಕೂಲ: ವೃಷಾಭವತಿಯನ್ನು ನೇರವಾಗಿ ನೋಡಿದರೆ ಆತಂಕವಾಗುತ್ತದೆ. ಆದರೆ ನಮ್ಮ ಭಾಗಕ್ಕೆ ಬರುವುದು ಸಂಸ್ಕರಣೆ ಮಾಡುವ ನೀರು, ಕ್ಷೇತ್ರದ ಶಾಸಕರು ಕೆರೆ ತುಂಬಿಸುವ ಯೋಜನೆ ತಂದು ಕೆರೆಗೆ ನೀರು ಬಂದರೆ ಶಾಸಕರಿಗೆ ಏನು ಅನುಕೂಲವಿಲ್ಲ. ಅನುಕೂಲವಾಗುವುದು ಆ ಭಾಗದ ರೈತರು ಮತ್ತು ಜನರಿಗೆ ಮಾತ್ರ, ನಾನಂತು ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಮಾಡುವುದಿಲ್ಲ, ಜನರ ಒಳಿತಿನ ಯೋಜನೆಗೆ ಪಕ್ಷಾತೀತವಾಗಿ ಬೆಂಬಲಿಸುತ್ತೇನೆ ಕಾರ್ಖಾನೆ ನೀರು ಕೆರೆಗೆ ಬರುತ್ತಿಲ್ಲವೆ:      ದೊಡ್ಡಬಳ್ಳಾಪುರ, ದಾಬಸ್ ಪೇಟೆ ಸೇರಿದಂತೆ ಕೆಲಕಡೆ ಗಳಲ್ಲಿ ಕಾರ್ಖಾನೆಯ ನೀರು ನೇರವಾಗಿ ಬೋರ್ ವೆಲ್ ಗಳ ಮೂಲಕ ಅಂತರ್ಜಲ ಸೇರುತ್ತಿದೆ ಅದು ಇನ್ನು 100 ವರ್ಷವಾದರೂ ಶುದ್ಧವಾಗಲ್ಲ ಅದೇ ರೀತಿ ಸಂಸ್ಕರಣೆ ಮಾಡದೆ ಕೆಮಿಕಲ್ ಯುಕ್ತ ನೀರನ್ನು ಕೆರೆಗಳಿಗೆ ಬಿಡುತ್ತಿದ್ದಾರೆ. ಚರಂಡಿ ಮೂಲಕ ನೀರು ಕೆರೆಗೆ ಹೋಗುತ್ತಿದೆ.     ಈ ನೀರು ಸಂಸ್ಕರಣೆ ಆಗಿದೆಯೇ ಈ ನೀರು ಅಂತರ್ಜಲಕ್ಕೆ ಹೋಗುತ್ತಿದೆ ಎಂದರೆ ಅಪಾಯವಲ್ಲವೆ? ನಮ್ಮ ಭೂಮಿಯೇ ದೊಡ್ಡಸಂಸ್ಕರಣಾ ಘಟಕ, ಅನೇಕ ಪದರ ಗಳಲ್ಲಿ ಸಂಸ್ಕರಣೆಯಾಗಿ ಅಂತರ್ಜಲಕ್ಕೆ ಹೋಗಲಿದೆ. ಸಂಸ್ಕರಣೆ ಮಾಡಿದ ನೀರು ಕೆರೆಗೆ ಬಂದರೆ ಯಾವ ಅಪಾಯವೂ ಇಲ್ಲ, ಅನಾಹುತವೂ ಇಲ್ಲ, ಯೋಜನೆ ಬರುವ ತನಕ ಅಪಸ್ವರ ಆನಂತರ ಆ ಯೋಜನೆಯ ಅನುಕೂಲ ಬಹಳಷ್ಟು ತಿಳಿಯಲಿದೆ ಎಂದು ಹೇಳಿದರು. Source link

ಕರ್ನಾಟಕ

ಮಧ್ಯಂತರ ವರದಿ ಸಲ್ಲಿಸಿದ ಬಳಿಕ ಒಳ ಮೀಸಲಾತಿ ಜಾರಿಗೆ ಕ್ರಮ: ಗೃಹ ಸಚಿವ ಡಾಕ್ಟರ್ ಜಿ ಪರಮೇಶ್ವರ್

  • March 25, 2025
  • 0 Comments

ಬೆಂಗಳೂರು,       ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಸಮಿತಿಯು ಒಂದು ವಾರದೊಳಗೆ ಒಳ ಮೀಸಲಾತಿಯ ಮಧ್ಯಂತರ ವರದಿ ಸಲ್ಲಿಸುವುದಾಗಿ ತಿಳಿಸಿದ್ದು, ತದನಂತರ ಮುಖ್ಯಮಂತ್ರಿಯವರು ಚರ್ಚಿಸಿ ಶೀಘ್ರದಲ್ಲಿ ಕ್ರಮ ಕೈಗೊಳ್ಳಲಿದ್ದಾರೆ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ ಅವರು ತಿಳಿಸಿದರು.      ಪರಿಶಿಷ್ಟ ಜಾತಿಗಳಲ್ಲಿ ಒಳಮೀಸಲಾತಿ ಕಲ್ಪಿಸುವ ಕುರಿತಂತೆ ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ರವರ ನೇತೃತ್ವದಲ್ಲಿ ಕಾವೇರಿ ನಿವಾಸದಲ್ಲಿ ನಡೆದ ಸಭೆ ಬಳಿಕ ಮುಖ್ಯಮಂತ್ರಿಯವರ ಗೃಹ ಕಚೇರಿ ಕೃಷ್ಣದಲ್ಲಿ ಸುದ್ದಿಗೋಷ್ಟಿಯಲ್ಲಿ ಅವರು ಮಾತನಾಡಿದರು.      ಪರಿಶಿಷ್ಟ ಜಾತಿಯ ಒಳ ಮೀಸಲಾತಿ ಜಾರಿಗೊಳಿಸಲು ನಮ್ಮ ಸರ್ಕಾರ ಬದ್ಧವಾಗಿದೆ. ನಮ್ಮ ಪಕ್ಷದ ಚುನಾವಣಾ ಪ್ರಣಾಳಿಕೆಯಲ್ಲಿ ಇದನ್ನು ಹೇಳಿದ್ದೇವೆ. ಎಂಪೆರಿಕಲ್ ಡೇಟಾ ನಿರ್ಧಿಷ್ಟವಾದ ಅಭಿಪ್ರಾಯ ಬರುತ್ತದೆ ಎಂದು ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಅವರು ಸಭೆಯಲ್ಲಿ ತಿಳಿಸಿದ್ದಾರೆ ಎಂದರು.       ಸಚಿವರುಗಳ ಮತ್ತು ಶಾಸಕರ ಫೋನ್ ಕದ್ದಾಲಿಕೆ ಆರೋಪದ ಬಗ್ಗೆ ಈವರೆಗೆ ಯಾವುದೇ ದೂರು ದಾಖಲಾಗಿಲ್ಲ. ದೂರು ಬಂದರೆ ಪರಿಶೀಲಿಸಿ, ಕದ್ದಾಲಿಕೆ ಮಾಡಿದವರ ಮೇಲೆ ಕ್ರಮ ಕೈಗೊಳ್ಳುತ್ತೇವೆ. ನಾನು ಅಥವಾ ಸಿಎಂ ಆಗಲಿ ಯಾರು ಸಹ ಫೋನ್ ಕದ್ದಾಲಿಕೆಗೆ ಅನುಮತಿ ನೀಡಿಲ್ಲ ಎಂದು ಹೇಳಿದರು.      ನಾನು ಡಿ.ಕೆ.ಶಿವಕುಮಾರ್ ಅವರ ಹೇಳಿಕೆಯನ್ನು ಗಮನಿಸಿದಿಲ್ಲ. ಅವರು ಯಾವ ಅರ್ಥದಲ್ಲಿ‌ ಹೇಳಿದ್ದಾರೆ ಅನ್ನೋದು ಗೊತ್ತಿಲ್ಲ. ನಮ್ಮ ಪಕ್ಷ ಹಾಗೂ ಮತ್ತು ಸರ್ಕಾರ ಸಂವಿಧಾನಕ್ಕೆ ಬದ್ಧವಾಗಿದೆ. ಈ ಆಶಯದೊಂದಿಗೆ ಬೆಳಗಾವಿಯಲ್ಲಿ ಜೈ ಬಾಪು, ಜೈ ಭೀಮ್, ಜೈ ಸಂವಿಧಾನ ಸಮಾವೇಶವನ್ನು ಮಾಡಿದ್ದೇವೆ. ಸಂವಿಧಾನದ ಆಶಯ ಅನುಷ್ಟಾನಗೊಳಿಸಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಹೇಳಿದರು.      ಸಮಾಜ ಕಲ್ಯಾಣ ಸಚಿವರಾದ ಡಾ. ಹೆಚ್.ಸಿ.ಮಹದೆವಪ್ಪ ಅವರು ಮಾತನಾಡಿ, ಒಳ ಮೀಸಲಾತಿ ಸಂಬಂಧ ಮುಖ್ಯಮಂತ್ರಿಯವರ ಅಧ್ಯಕ್ಷತೆಯಲ್ಲಿ ಹಿರಿಯ ಸಚಿವರ ಜೊತೆ ಸುಧೀರ್ಘ ಸಭೆ ನಡೆಸಲಾಗಿದೆ. ಒಳ‌ಮೀಸಲಾತಿ ಜಾರಿಗಾಗಿ ಈವರೆಗೂ ಆಗಿರುವ ಪ್ರಗತಿಯ ಮಾಹಿತಿಯನ್ನು ನಾಗ ಮೋಹನ್ ದಾಸ್ ಸಮಿತಿ ನೀಡಿದೆ. ಆದಷ್ಟು ಬೇಗ ಒಳಮೀಸಲಾತಿ ಜಾರಿಗೆ ಪ್ರಸ್ತಾಪ ಇಟ್ಟಿದ್ದಾರೆ ಎಂದು ತಿಳಿಸಿದರು.     ದತ್ತಾಂಶ ಆಧಾರದ ಮೇಲೆ ಸುದೀರ್ಘ ಚರ್ಚೆ ಮಾಡಿದ್ದೇವೆ ನಾಗಮೋಹನ್ ದಾಸ್ ಅವರು ವಾರದೊಳಗೆ ಮಧ್ಯಂತರ ವರದಿ ನೀಡುತ್ತಾರೆ. ಆ ವರದಿ ಮೇಲೆ ಒಳಮೀಸಲಾತಿ ಜಾರಿ ಕುರಿತು ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ಅವರು ಹೇಳಿದರು.      ಎಂಪೆರಿಕಲ್ ಡೇಟಾ‌ಸೇರಿದಂತೆ ಎಲ್ಲ ವಿಷಯಗಳನ್ನ ಚರ್ಚೆ ಮಾಡಿ, ನಮ್ಮ ಗಮನಕ್ಕೆ ತಂದಿದ್ದಾರೆ.‌ ನಾವು ಒಳ ಮೀಸಲಾತಿ ಜಾರಿ ಮಾಡಬೇಕು ಎಂಬುದು ನಮ್ಮ ಸರ್ಕಾರದ ಬದ್ಧತೆ. ಯಾವುದೇ ಸಮುದಾಯವೂ ಇಷ್ಟೇ ಪರ್ಸೇಂಟ್ ಮೀಸಲಾತಿ ಕೊಡುವಂತೆ ಬೇಡಿಕೆ ಇಟ್ಟಿಲ್ಲ. ಬಹುತೇಕ ಎಲ್ಲಾ ಇಲಾಖೆಗಳು ದತ್ತಾಂಶ ನೀಡಿವೆ. ಸುಪ್ರೀಂಕೋರ್ಟ್ ಮಾರ್ಗಸೂಚಿ ಪ್ರಕಾರ ಮುಂದಿನ ಕ್ರಮ ತೆಗೆದುಕೊಳ್ಳುತ್ತೇವೆ. ಒಳ ಮೀಸಲಾತಿ ಜಾರಿ ಆಗುವವರೆಗೂ ಬ್ಯಾಕ್‌ಲಾಗ್ ಹುದ್ದೆ, ಮುಂಬಡ್ತಿ, ನೇಮಕಾತಿ ಯಾವುದನ್ನೂ ಮಾಡುವುದಿಲ್ಲ ಎಂದು ಅವರು ಹೇಳಿದರು.     ಈ ಸಂದರ್ಭದಲ್ಲಿ ಸಚಿವರಾದ ಕೆ.ಹೆಚ್.ಮುನಿಯಪ್ಪ, ಆರ್.ಬಿ.ತಿಮ್ಮಾಪುರ್, ಶಿವರಾಜ್ ತಂಗಡಗಿ ಅವರು ಇದ್ದರು. Source link

ಕರ್ನಾಟಕ

ಶ್ರೀ ಗುರುಕುಲ ಮಠಕ್ಕೆ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆದ ಕೇಂದ್ರ ಮಂತ್ರಿ ವಿ ಸೋಮಣ್ಣ.

  • March 25, 2025
  • 0 Comments

ತಿಪಟೂರು:      ನಗರದ ಗುರುಕುಲ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ ವಿಶೇಷ ಚೇತನರಿಗೆ ಸಲಕರಣೆಗಳ ವಿತರಣಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಶ್ರೀ ಗುರುಕುಲ ಮಠಕ್ಕೆ ಕೇಂದ್ರ ಜಲಶಕ್ತಿ ಮತ್ತು ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಭೇಟಿ ನೀಡಿ, ಶ್ರೀ ಗಳ ಆಶೀರ್ವಾದ ಪಡೆದರು.     ಬಿಜೆಪಿ ಮುಖಂಡ ಆಯರಹಳ್ಳಿ ಶಂಕರಪ್ಪ ಮತ್ತು ನಗರಸಭೆ ಮಾಜಿ ಸದಸ್ಯ ಟಿ.ಜಿ.ಲಿಂಗರಾಜು ಉಪಸ್ಥಿತರಿದ್ದರು. Source link

ಕರ್ನಾಟಕ

ಹೆಚ್ಚು ಸಾಲ, ಸೌಲಭ್ಯಕ್ಕೆ ಸಹಕಾರ ಸಚಿವರಲ್ಲಿ ಮನವಿ ಮಾಡಿದರೇ ತಪ್ಪೇನು? : ಡಾ.ರಂಗನಾಥ್ 

  • March 22, 2025
  • 0 Comments

ಕುಣಿಗಲ್ : ಸಹಕಾರ ಸಂಘಗಳು ಅನ್ನದಾತನ ಜೀವನಾಡಿ, ಸಮಾಜದ ಕಟ್ಟ ಕಡೆಯ ರೈತನ ಅಭಿವೃದ್ದಿಯಲ್ಲಿ ಸಹಕಾರ ಸಂಘಗಳು ಪ್ರಮುಖ ಪಾತ್ರ ವಹಿಸುತ್ತಿವೆ, ಹಾಗಾಗಿ ತಾಲೂಕಿನ ಸಹಕಾರ ಸಂಘಗಳಿಂದ ಹೆಚ್ಚಿನ ಸಾಲ. ಸೌಲಭ್ಯ ನೀಡುವಂತೆ ಸಹಕಾರ ಸಚಿವರಲ್ಲಿ ಮನವಿ ಮಾಡಿದ್ದೇನೆ ವಿನಹ ಇದರಲ್ಲಿ ಯಾವುದೇ ದುರುದ್ದೇಶವಿಲ್ಲ ಎಂದು ಶಾಸಕ ಡಾ.ಹೆಚ್. ಡಿ.ರಂಗನಾಥ್ ಸ್ಪಷ್ಟಪಡಿಸಿದರು, ಶನಿವಾರ ತಾಲೂಕಿನ ಹುಲಿಯೂರುದುರ್ಗದಲ್ಲಿ ಮೂರು ಕೋಟಿ ರೂ ವೆಚ್ಚದ ಸಿ.ಸಿ ರಸ್ತೆ, ಚರಂಡಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು, ತಾಲೂಕಿಗೆ ಮಲತಾಯಿ ಧೋರಣೆ : ಸಹಕಾರ ಸಂಘಗಳು ರೈತನ ಬೆನ್ನೆಲುಬು, ರೈತನ್ನು ಯಾವುದೇ ವಾಣಿಜ್ಯ ಬ್ಯಾಂಕ್‌ನಿಂದ ಸಾಲ ಸೌಲಭ್ಯ ಪಡೆಯಲು ಸಾಧ್ಯವಾಗುತ್ತಿಲ್ಲ, ಈ ನಿಟ್ಟಿನಲ್ಲಿ ಗ್ರಾಮೀಣ ಭಾಗದಲ್ಲಿನ ಸಹಕಾರ ಸಂಘಗಳಿಗೆ ಡಿಸಿಸಿ ಬ್ಯಾಂಕ್‌ನ ಮೂಲಕ ಸಾಲ ಸೌಲಭ್ಯ ಒದಗಿಸಿ ಅನ್ನದಾತನ ಕಷ್ಟಕ್ಕೆ ಸ್ಪಂಧಿಸುತ್ತಿದೆ ಆದರೆ ಸಹಕಾರ ಸಂಘ ಇಲಾಖೆಯು ಕುಣಿಗಲ್ ತಾಲೂಕಿನ ಸಹಕಾರ ಸಂಘಗಳಿಗೆ ಸಮರ್ಪಕವಾಗಿ ಸಾಲ ಸೌಲಭ್ಯ ನೀಡುವಲ್ಲಿ ಮಲತಾಯಿ ಧೋರಣೆ ಅನುಸರಿಸುತ್ತಿದೆ, ಇದರಿಂದ ಸಹಕಾರ ಸಂಘಗಳನ್ನು ನಂಬಿಕೊಂಡಿರುವ ರೈತರಿಗೆ ಅನ್ಯಾಯವಾಗಿದೆ ಈ ಸಂಬಂಧ ವಿಧಾನಸಭೆ ಅಧಿವೇಶನದಲ್ಲಿ ಸಹಕಾರ ಸಚಿವ ಕೆ.ಎನ್ ರಾಜಣ್ಣ ಅವರ ಗಮನ ಸೆಳೆದಿದ್ದೇನೆ ಇದರಲ್ಲಿ ಯಾವುದೇ ದುರುದ್ದೇಶವಿಲ್ಲ, ಸಚಿವರು ನಮ್ಮ ಪಕ್ಷದ ಹಿರಿಯ ಮುಖಂಡರು, ನಮಗೆ ಮಾರ್ಗದರ್ಶಕರು ಆಗಿರುವರು ಡಿಸಿಸಿ ಬ್ಯಾಂಕ್ ಹೆಚ್ಚು ಅನುದಾನ ನೀಡುವಂತೆ ಸಚಿವರಿಗೆ ಮನವಿ ಮಾಡಿದ್ದೇನೆ ಇದರಲ್ಲಿ ತಪ್ಪೇನಿದೆ ಎಂದು ಶಾಸಕರು ಪ್ರಶ್ನಿಸಿದರು, ಒಂದೇ ಮನೆತನದ ಕಪಿಮುಷ್ಠಿಯಲ್ಲಿ ಸಂಘಗಳು : ತಾಲೂಕಿನಲ್ಲಿ ಪಿಎಲ್‌ಡಿ ಬ್ಯಾಂಕ್ ಹಾಗೂ ಸಹಕಾರ ಸಂಘಗಳು ಕಳೆದ ೪೦ ವರ್ಷದಿಂದ ಒಂದು ಕುಟುಂಬದ ಕಪಿಮುಷ್ಠಿ ಹಿಡಿತದಲ್ಲಿ ಇವೆ, ಆ ಕುಟುಂಬಕ್ಕೆ ಬೇಕಾದವರಿಗೆ ಷೇರು ನೀಡಿ , ಆ ಕುಟುಂಬದವರೇ ಅಧ್ಯಕ್ಷರಾಗಿ ಅಧಿಕಾರ ಅನುಭವಿಸುತ್ತಿದ್ದಾರೆ, ತಾಲೂಕಿನಲ್ಲಿ ಇನ್ನು ಸಾಕಷ್ಟು ರೈತರು ಇರುವರು ಅವರಿಗೆ ಹೊಸ ಷೇರು ಏಕೆ ನೀಡುತ್ತಿಲ್ಲ ಎಂದು ಪ್ರಶ್ನಿಸಿದರು, ರೈತರಿಗೆ ಸಾಲ ಸೌಲಭ್ಯ ನೀಡಿ ಅತನ ಅಭಿವೃದ್ಧಿಗೆ ಶ್ರಮಿಸುವಲ್ಲಿ ಆ ಕುಟುಂಬವು ವಿಫಲಗೊಂಡಿದೆ ಎಂದು ದೂರಿದರು, ರಾಜಕೀಯಕ್ಕೆ ಆಕಸ್ಮಿಕ : ನಾನು ರಾಜಕೀಯಕ್ಕೆ ಬರಬೇಕು ಅಂದು ಕೊಂಡಿರಲಿಲ್ಲ, ಆಕಸ್ಮಿಕವಾಗಿ ರಾಜಕೀಯಕ್ಕೆ ಬಂದಿರುವೆ ಈ ನಿಟ್ಟಿನಲ್ಲಿ ಮತದಾರರು ನನ್ನನು ಎರಡನೇ ಭಾರಿ ಶಾಸಕರಾಗಿ ಮಾಡಿದ್ದಾರೆ, ಈ ನಿಟ್ಟಿನಲ್ಲಿ ಜನರ ಸಮಸ್ಯೆ ಸ್ಪಂಧಿಸಿ, ಹಾಗೂ ಮತದಾರರ ಋಣ ತೀರಿಸಲು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದೇನೆ ಎಂದು ಹೇಳಿದರು, ಡಿಸಿಸಿ ಬ್ಯಾಂಕ್‌ನಿಂದ ನಮ್ಮ ತಾಲೂಕಿನ ಸಹಕಾರ ಸಂಘಗಳಿಗೆ ಹೆಚ್ಚಿನ ಸಾಲ ಸೌಲಭ್ಯ ಸಿಕ್ಕಿದೆ ಎಂದು ಬಿಜೆಪಿ, ಜೆಡಿಎಸ್(ಎನ್‌ಡಿಎ) ಮುಖಂಡರು ಸಹಕಾರ ಸಚಿವರ ಮತ್ತು ನಮ್ಮ ಪಕ್ಷದ ಪರವಾಗಿ ಮಾತನಾಡಿದ್ದಾರೆ, ಅದನ್ನು ನಾನು ಸ್ವಾಗತಿಸುತ್ತೇನೆ, ಮುಂದಿನ ದಿನದಲ್ಲಿ ಅವರ ಸಹಕಾರ ಬೇಕಾಗಿದೆ ಎಂದು ಹೇಳಿದರು. ಈ ವೇಳೆ ಗ್ರಾ.ಪಂ ಅಧ್ಯಕ್ಷರಾದ ಬೀಚನಹಳ್ಳಿ ಶ್ರೀನಿವಾಸ್, ತಬಸುಮ್‌ಫಾತೀಮ, ಪಿಡಿಓ ಶ್ರೀಧರ್, ಸದಸ್ಯ ಹೆಚ್.ಎನ್. ನಟರಾಜು, ತಾ.ಪಂ ಮಾಜಿ ಸದಸ್ಯ ಅಲ್ಲಾಬಕಾಶ್,   Source link

ಕರ್ನಾಟಕ

ಗರ್ಜಿಸುವ ಹುಲಿಗಳನ್ನೇ ಟಾರ್ಗೆಟ್ ಮಾಡಿ ಹನಿಟ್ರ್ಯಾಪ್: ಸಚಿವ ಸತೀಶ್ ಜಾರಕಿಹೊಳಿ

  • March 22, 2025
  • 0 Comments

ಬೆಳಗಾವಿ:     “ಯಾವಾಗಲೂ ಘರ್ಜಿಸುವ ಹುಲಿಗಳೇ ಟಾಗ್ರೆಟ್ ಆಗುತ್ತವೆ. ಹನಿಟ್ರ್ಯಾಪ್ ವಿಷಯದಲ್ಲೂ ಘರ್ಜಿಸುವ ಹುಲಿಗಳನ್ನು ಟಾರ್ಗೆಟ್ ಮಾಡಿ, ಸಿಡಿಗಳನ್ನು ತೋರಿಸಿ ಹೆದರಿಸಲಾಗುತ್ತಿದೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು ಶನಿವಾರ ಹೇಳಿದ್ದಾರೆ.    ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಹನಿಟ್ರ್ಯಾಪ್ ಪ್ರಕರಣದ ಬಗ್ಗೆ ಸಚಿವ ರಾಜಣ್ಣ ಅವರೊಂದಿಗೆ ಚರ್ಚಿಸಿದ್ದೇನೆ. ಅವರು ಕಾನೂನು ಸಲಹೆ ಮತ್ತು ತಜ್ಞರ ಅಭಿಪ್ರಾಯ ಪಡೆದು ಪೊಲೀಸರಿಗೆ ದೂರು ನೀಡಬೇಕು ಎಂದರು.    ಹನಿಟ್ರ್ಯಾಪ್ ವಿಚಾರದಲ್ಲಿ ದೂರು ನೀಡಿದ ನಂತರವೇ ತನಿಖೆ ನಡೆಯಲಿದೆ. ಈ ಪ್ರಕರಣವನ್ನು ಸಿಬಿಐಗೆ ವಹಿಸುವ ಅಗತ್ಯ ಇಲ್ಲ. ರಾಜ್ಯ ಪೊಲೀಸರೇ ಪ್ರಕರಣದ ತನಿಖೆ ನಡೆಸಿ, ಆರೋಪಿಗಳನ್ನು ಬಂಧಿಸಲು ಸಮರ್ಥರಾಗಿದ್ದಾರೆ ಎಂದು ಅವರು ತಿಳಿಸಿದರು. ಹನಿಟ್ರ್ಯಾಪ್ ವಿಚಾರದಲ್ಲಿ ಯಾರೂ ಸಂಚು ಮಾಡಿದ್ದಾರೆ ಎಂಬುದು ನನಗೆ ಗೊತ್ತಿಲ್ಲ. ರಾಜಕೀಯಕ್ಕಾಗಿ ಮಾತ್ರವಲ್ಲ. ಬ್ಲ್ಯಾಕ್ ಮೇಲ್ ಮತ್ತು ವ್ಯಾಪಾರ ವಿಷಯವಾಗಿಯೂ ಹನಿಟ್ರ್ಯಾಪ್ ಮಾಡುತ್ತಾರೆ ಎಂದು ಪ್ರಶ್ನೆಯೊಂದಕ್ಕೆ ಸತೀಶ್ ಜಾರಕಿಹೊಳಿ ಉತ್ತರಿಸಿದರು. Source link

ಕರ್ನಾಟಕ

ಅಣ್ಣಾಮಲೈಗೆ ಏನು ಗೊತ್ತು ನಮ್ಮ ಬಲ : ಡಿ ಕೆ ಶಿವಕುಮಾರ್‌

  • March 22, 2025
  • 0 Comments

ಚೆನ್ನೈ:       ಕೇಂದ್ರ ಸರ್ಕಾರದ ಕ್ಷೇತ್ರ ಪುನರ್ವಿಂಗಡಣೆ ಪ್ರಸ್ತಾವನೆಯನ್ನು ವಿರೋಧಿಸುತ್ತೇವೆ. ಅಲ್ಲದೆ ಎಲ್ಲಾ ರಾಜ್ಯಗಳು ಯಾವುದೇ ರಾಜ್ಯದ ಲೋಕಸಭೆ ಸ್ಥಾನಗಳನ್ನು ಕಡಿಮೆ ಮಾಡದಂತೆ ಒಟ್ಟಾಗಿ ಕೆಲಸ ಮಾಡುತ್ತವೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್  ಹೇಳಿದ್ದಾರೆ.     ಚೆನ್ನೈನಲ್ಲಿ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಶಿವಕುಮಾರ್, “ನಾವು ಒಗ್ಗಟ್ಟಿನಿಂದ ನಿಂತು ಇದರ ವಿರುದ್ಧ ಹೋರಾಡುತ್ತೇವೆ. ನಮ್ಮ ಯಾವುದೇ ಸ್ಥಾನಗಳು ಕಡಿಮೆಯಾಗದಂತೆ ನೋಡಿಕೊಳ್ಳುತ್ತೇವೆ. ನಾವೆಲ್ಲರೂ ಒಟ್ಟಾಗಿ ಹೋಗೋಣ. ಮಾಧ್ಯಮಗಳು ನಮ್ಮ ಕಾಳಜಿಯನ್ನು ಅರ್ಥಮಾಡಿಕೊಳ್ಳುತ್ತವೆ ಎಂದು ನಾನು ಭಾವಿಸುತ್ತೇನೆ. ನಾವು ವೈಯಕ್ತಿಕ ಕಾರಣಕ್ಕಾಗಿ ಹೋರಾಡುತ್ತಿಲ್ಲ, ಆದರೆ ಈ ದೇಶದ ದೊಡ್ಡ ಉದ್ದೇಶಕ್ಕಾಗಿ. ನಾವು ಅತ್ಯಂತ ಸಾಕ್ಷರ ರಾಜ್ಯಗಳಲ್ಲಿ ಒಂದಾಗಿದ್ದೇವೆ ಮತ್ತು ಆರ್ಥಿಕವಾಗಿ, ನಾವು ರಾಷ್ಟ್ರದ ಬೆಳವಣಿಗೆಗೆ ಗಮನಾರ್ಹವಾಗಿ ಕೊಡುಗೆ ನೀಡುತ್ತಿದ್ದೇವೆ ಎಂದರು.     ನಾವು ಒಕ್ಕೂಟ ರಚನೆಯನ್ನು ಎತ್ತಿಹಿಡಿಯುತ್ತಿದ್ದೇವೆ ಎಂದು ನನಗೆ ತುಂಬಾ ಹೆಮ್ಮೆ ಇದೆ. ನಾನು ಯಾವಾಗಲೂ ಎಲ್ಲರೂ ಒಟ್ಟಿಗೆ ಬರುವುದು ಆರಂಭ, ಸಮಸ್ಯೆಗಳನ್ನು ಚರ್ಚಿಸುವುದು ಪ್ರಗತಿ ಮತ್ತು ಒಟ್ಟಿಗೆ ಕೆಲಸ ಮಾಡುವುದು ಯಶಸ್ಸು ಎಂದು ಭಾವಿಸುತ್ತೇವೆ. ಈ ವಿಚಾರದಲ್ಲಿ ಯಾವುದೇ ಬೆಲೆ ತೆತ್ತಾದರೂ, ನಾವು ನಮ್ಮ ದೇಶ ಅಥವಾ ನಮ್ಮ ಸ್ಥಾನಗಳನ್ನು ಬಿಟ್ಟುಕೊಡಲು ಸಾಧ್ಯವಿಲ್ಲ. ಮಾಜಿ ಪ್ರಧಾನಿ, ದಿವಂಗತ ಅಟಲ್ ಬಿಹಾರಿ ವಾಜಪೇಯಿ, 2002ರಲ್ಲಿ 84ನೇ ಸಾಂವಿಧಾನಿಕ ತಿದ್ದುಪಡಿಯನ್ನು ಪರಿಚಯಿಸಿದರು, ಅದನ್ನು ಬದಲಾಯಿಸಲಾಗುವುದಿಲ್ಲ ಎಂದು ಹೇಳಿದರು.    ಬಿಜೆಪಿ ಮುಖಂಡರು ಕಪ್ಪು ಬಾವುಟ ಪ್ರದರ್ಶಿಸಿದ್ದನ್ನು ಡಿಕೆ ಶಿವಕುಮಾರ್ ಖಂಡಿಸಿದರು. ಇನ್ನು ಕರ್ನಾಟಕದಲ್ಲಿ ಐಪಿಎಸ್ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದ ಸದ್ಯ ತಮಿಳುನಾಡು ಬಿಜೆಪಿ  ಮುಖ್ಯಸ್ಥ ಕೆ. ಅಣ್ಣಾಮಲೈ   ಪ್ರತಿಭಟನೆ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಡಿಸಿಎಂ ಡಿಕೆ ಶಿವಕುಮಾರ್​, ಅಣ್ಣಾಮಲೈ ಒಬ್ಬ ಪುವರ್​ ಮ್ಯಾನ್​. ಕರ್ನಾಟಕದಲ್ಲಿ ಕಾರ್ಯನಿರ್ವಹಿಸುತ್ತಿದ್ದಾಗ ಅವರಿಗೆ ನಮ್ಮ ಶಕ್ತಿ ಬಗ್ಗೆ ಗೊತ್ತಿದೆ. ಪ್ರತಿಭಟನೆ ಮಾಡಲಿ, ಅದಕ್ಕೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ. ಅವರಿಗೆ ಶುಭವಾಗಲಿ ಎಂದು ಕಿಡಿಕಾರಿದ್ದಾರೆ.  Source link

ಕರ್ನಾಟಕ

ಸುಪ್ರೀಂ ಕೋರ್ಟ್‌ ನ್ಯಾಯಾಧೀಶರ ನಿಯೋಗ ಮಣಿಪುರ ಭೇಟಿ : ಬಿಜೆಪಿ ಟೀಕಿಸಿದ ಕಾಂಗ್ರೇಸ್‌

  • March 22, 2025
  • 0 Comments

ನವದೆಹಲಿ:       ಶನಿವಾರ ಮಣಿಪುರಕ್ಕೆ  ಸುಪ್ರೀಂ ಕೋರ್ಟ್ ನ್ಯಾಯಾಧೀಶರ ನಿಯೋಗದ ಭೇಟಿಯನ್ನು ಸ್ವಾಗತಿಸಿದ ಕಾಂಗ್ರೆಸ್ ಸಂಸದ ಜೈರಾಮ್ ರಮೇಶ್, ಪ್ರಧಾನಿ ನರೇಂದ್ರ ಮೋದಿ  ಅವರು ಮಣಿಪುರಕ್ಕೆ ಯಾವಾಗ ಭೇಟಿ ನೀಡುತ್ತಾರೆ ಎಂಬ ಪ್ರಶ್ನೆಯನ್ನು ಕೇಳಿದ್ದಾರೆ. ಮಣಿಪುರಕ್ಕೆ ಭೇಟಿ ನೀಡಲು ತೆರಳಿರುವ ಆರು ನ್ಯಾಯಾಧೀಶರನ್ನು ಕಾಂಗ್ರೆಸ್ ಪಕ್ಷ ಸ್ವಾಗತಿಸುತ್ತದೆ ಎಂದು ಅವರು ಹೇಳಿದರು. ಕಳೆದ 22 ತಿಂಗಳುಗಳಲ್ಲಿ ನೂರಾರು ಜನರು ಸಾವನ್ನಪ್ಪಿದ್ದಾರೆ, ಸುಮಾರು 60,000 ಜನರು ಸ್ಥಳಾಂತರಗೊಂಡಿದ್ದಾರೆ. ಸಾವಿರಾರು ಜನರು ಆಶ್ರಯ ತಾಣಗಳಲ್ಲಿ ವಾಸಿಸುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.      ಫೆಬ್ರವರಿ 13 ರಂದು ಮಣಿಪುರದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಲಾಯಿತು, ಆದರೆ ಕೆಲ ಪ್ರಶ್ನೆ ಉದ್ಭವಿಸುತ್ತದೆ, ಆಗಸ್ಟ್ 1, 2023 ರಂದು ಸುಪ್ರೀಂ ಕೋರ್ಟ್ ಸ್ವತಃ ಮಣಿಪುರದಲ್ಲಿ ಸಾಂವಿಧಾನಿಕ ವ್ಯವಸ್ಥೆಯನ್ನು ಸಂಪೂರ್ಣವಾಗಿ ಕೆಡವಲಾಗಿದೆ ಎಂದು ಹೇಳಿದ ನಂತರವೂ, ರಾಷ್ಟ್ರಪತಿ ಆಳ್ವಿಕೆ ಹೇರಲು 18 ತಿಂಗಳುಗಳು ಏಕೆ ಬೇಕಾಯಿತು? ಸುಪ್ರೀಂ ಕೋರ್ಟ್ ನ್ಯಾಯಾಧೀಶರು ಹೋಗಿರುವುದು ಒಳ್ಳೆಯದು, ಆದರೆ ದೊಡ್ಡ ಪ್ರಶ್ನೆಯೆಂದರೆ ಪ್ರಧಾನಿ ಯಾವಾಗ ಭೇಟಿ ನೀಡುತ್ತಾರೆ? ರಮೇಶ್ ಕೇಳಿದ್ದಾರೆ. ಸುಪ್ರೀಂ ಕೋರ್ಟ್ ನ್ಯಾಯಾಧೀಶರ ನಿಯೋಗವು ಶನಿವಾರ ಮಣಿಪುರದ ಚುರಾಚಂದಪುರದಲ್ಲಿರುವ ಪರಿಹಾರ ಶಿಬಿರಕ್ಕೆ ಭೇಟಿ ನೀಡಿತು. ನ್ಯಾಯಮೂರ್ತಿಗಳಾದ ಬಿ.ಆರ್. ಗವಾಯಿ, ಸೂರ್ಯಕಾಂತ್, ವಿಕ್ರಮ್ ನಾಥ್, ಎಂ.ಎಂ. ಸುಂದ್ರೇಶ್, ಕೆ.ವಿ. ವಿಶ್ವನಾಥನ್ ಮತ್ತು ಎನ್. ಕೋಟೀಶ್ವರ್ ಅವರ ನಿಯೋಗ ಮಣಿಪುರಕ್ಕೆ ಆಗಮಿಸಿದೆ.    ಸಂಸತ್ತಿನಲ್ಲಿ ತಮ್ಮ ಸಚಿವಾಲಯದ ಕಾರ್ಯಗಳ ಕುರಿತು ಚರ್ಚೆಯ ಸಮಯದಲ್ಲಿ ಮಣಿಪುರದ ಪರಿಸ್ಥಿತಿಯ ಬಗ್ಗೆ ಮಾತನಾಡದ ಗೃಹ ಸಚಿವ ಅಮಿತ್ ಶಾ ಅವರನ್ನೂ ಕಾಂಗ್ರೆಸ್ ನಾಯಕರು ಟೀಕಿಸಿದ್ದಾರೆ. ನಿನ್ನೆ, ಗೃಹ ಸಚಿವರು ತಮ್ಮ ಗೃಹ ಸಚಿವಾಲಯದ ಕೆಲಸದ ಬಗ್ಗೆ ರಾಜ್ಯಸಭೆಯಲ್ಲಿ ಸುಮಾರು ನಾಲ್ಕು ಗಂಟೆಗಳ ಕಾಲ ಭಾಷಣ ಮಾಡಿದ್ದಾರೆ. ಆದರೆ ಅವರು ಮಣಿಪುರದ ಬಗ್ಗೆ ಮಾತನಾಡಲಿಲ್ಲ. ಫೆಬ್ರವರಿ 2022 ರಲ್ಲಿ, NDA ಭಾರಿ ಬಹುಮತದೊಂದಿಗೆ ಚುನಾವಣೆಯನ್ನು ಗೆದ್ದಿತು, ಆದರೆ 15 ತಿಂಗಳೊಳಗೆ ಮಣಿಪುರ ಹೊತ್ತಿ ಉರಿಯಲು ಪ್ರಾರಂಭಿಸಿತು. ಅದಕ್ಕೆ ಸರ್ಕಾರದ ಬಳಿ ಉತ್ತರವಿಲ್ಲ ಎಂದು ಕಾಂಗ್ರೆಸ್‌ ನಾಯಕರು ಹೇಳಿದ್ದಾರೆ.      ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರುವಲ್ಲಿನ ವಿಳಂಬವನ್ನು ರಮೇಶ್ ಪ್ರಶ್ನಿಸಿದರು, ಶಾ ಮಣಿಪುರಕ್ಕೆ ಭೇಟಿ ನೀಡದೆ ಮಿಜೋರಾಂಗೆ ಭೇಟಿ ನೀಡಿದ್ದಕ್ಕಾಗಿ ಟೀಕಿಸಿದರು. ರಾಷ್ಟ್ರಪತಿ ಆಳ್ವಿಕೆ ಹೇರುವಲ್ಲಿ ಇಷ್ಟೊಂದು ವಿಳಂಬ ಏಕೆ ಆಯಿತು ಎಂಬುದಕ್ಕೆ ಉತ್ತರವಿಲ್ಲ. ಗೃಹ ಸಚಿವರು ಮಿಜೋರಾಂಗೆ ಹೋಗುತ್ತಾರೆ, ಮಣಿಪುರಕ್ಕೆ ಏಕೆ ಹೋಗಲಿಲ್ಲ? ಮತ್ತು ಅಮೆರಿಕಕ್ಕೆ ಹೋದ ನಂತರ ಮಿಜೋರಾಂ ಮುಖ್ಯಮಂತ್ರಿ ಹೇಳಿರುವ ವಿಷಯಗಳು ಹಲವು ಪ್ರಶ್ನೆಗಳನ್ನು ಹುಟ್ಟುಹಾಕುತ್ತವೆ ಎಂದು ಅವರು ಹೇಳಿದ್ದಾರೆ. ಬಾಂಕ್ಯಾಕ್‌ಗೆ ಹೋಗುವ ಮೊದಲು ಅಥವಾ ಅಲ್ಲಿಂದ ಹಿಂದಿರುಗಿದ ನಂತರ ಪ್ರಧಾನಿ ಮೋದಿ ಒಮ್ಮೆ ಮಣಿಪುರಕ್ಕೆ ಭೇಟಿ ಎಂದು ಮನವಿ ಮಾಡಿದ್ದಾರೆ. Source link

Translate »