Karunadu Studio

ಉತ್ತರ ಕರ್ನಾಟಕ ಕರ್ನಾಟಕ

ಭೀಕರ‌ ಅಪಘಾತ ಒಂದೇ ಕುಟುಂಬದ 3 ಮಂದಿ‌ ಸಾವು

  • October 20, 2024
  • 0 Comments

ಧಾರವಾಡದ ಸಂಪಿಗೆನಗರದಲ್ಲಿ‌ಆಟೋರಿಕ್ಷಾಗೆ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಘಟನೆಯಲ್ಲಿ 3 ಮಂದಿ‌ ಸಾವನ್ನಪ್ಪಿದ್ದಾರೆ. ಇದರಿಂದ ಆಕ್ರೋಶಗೊಂಡ ಸ್ಥಳೀಯರು ಕೆಲಗೇರಿ ಬಳಿ ಪ್ರತಿಭಟನೆ ನಡೆಸಿ ರಸ್ತೆ‌ ಬಂದ್ ಮಾಡಿ‌ ಆಕ್ರೋಶ ವ್ಯಕ್ತಪಡಿಸಿದರು. ಬೆಳಗಿನ ನಡೆದ ಅಪಘಾತದಲ್ಲಿ ಆಟೋಚಾಲಕ ಮಾರುತಿ ದುರ್ಗಪ್ಪ ಹಂಚಿನಮನಿ, ಮರೆವ್ವ ನಿಂಗಪ್ಪ ಹಂಚಿನಮನಿ ಸಾವಿಗೀಡಾಗಿದ್ದು, ತದನಂತರ ಚಿಕಿತ್ಸೆ ಫಲಿಸದೇ ಪ್ರಣವ ರವಿಹಂಚಿನಮನಿ ಎಂಬ 6 ವರ್ಷದ ಬಾಲಕ ಆಸ್ಪತ್ರೆಯಲ್ಲಿಕೊನೆಯುಸಿರೆಳೆದಿದ್ದಾನೆ. ಘಟನೆಯಲ್ಲಿ ಗಾಯಗೊಂಡಿರುವ ಇನ್ನೊಂದು ಮಗುವಿನ ಸ್ಥಿತಿಯೂ ಚಿಂತಾಜನಕವಾಗಿದೆ. ಪ್ರಕರಣದಿಂದ ರೋಸಿ ಹೋದ ಸ್ಥಳೀಯರು ರಸ್ತೆ ತಡೆ ನಡೆಸಿ ಆಕ್ರೋಶವ್ಯಕ್ತಪಡಿಸಿದರು. ಶಾಸಕ ಅರವಿಂದ ಬೆಲ್ಲದ್ ಸ್ಥಳಕ್ಕೆ ಆಗಮಿಸಿ, ಜನರ ಸಮಸ್ಯೆಗೆ ಸ್ಪಂದಿಸುವ ಭರವಸೆ ನೀಡಿದರು. ಪಾಲಿಕೆ ಆಯುಕ್ತ ಈಶ್ವರ ಉಳ್ಳಾಗಡ್ಡಿ ಕೂಡ ಆಗಮಿಸಿದ್ದರು

Translate »