“ನಿರಂತರ ಸುರಿಯುತ್ತಿರುವ ಮಳೆ ನಡುವೆಯೇ ಶೀಗಿ ಹುಣ್ಣಿಮೆ ಆಚರಣೆ”
ಕುಂದಗೋಳ ಧಾರವಾಡ ಜಿಲ್ಲೆಯಲ್ಲಿ ಮಳೆ ನಿರಂತರವಾಗಿ ಸುರಿಯುತ್ತಿದೆ. ಇಂತಹ ಮಳೆಯ ನಡುವೆಯೂ ಶೀಗಿ ಹುಣ್ಣಿಮೆಯ ದಿನ ಭೂಮಿ ತಾಯಿಗೆ ಪೂಜೆ ಸಲ್ಲಿಸುವ ಕಾರ್ಯ ರೈತರು ಮಾಡಿದರು.ಕುಂದಗೋಳ ತಾಲೂಕಿನ ಬೆನಕನಹಳ್ಳಿ ಗ್ರಾಮದ ರೈತರಾದ ಮಂಜುನಾಥ ಬಸವರಾಜ ಅವರಾದಿ ಅವರ ಹೊಲದಲ್ಲಿ ಮಳೆಯ ನಡುವೆಯೇ ಶೀಗಿ ಹುಣ್ಣಿಮೆ ಹಬ್ಬವನ್ನು ಅರ್ಥಪೂರ್ಣವಾಗಿ ಆಚರಣೆ ಮಾಡಿದರು.